Advertisement
ಏಪ್ರಿಲ್‌ನಲ್ಲೇ ಈ ರೀತಿ ಇದ್ದು, ಮುಂದಿನ ಮೇ ತಿಂಗಳಲ್ಲಿ ಇನ್ನೂ ಬಿಸಿಲು ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಜಿಲ್ಲೆಯ ಜನರು ಭಯಭೀತಿರಾಗಿದ್ದಾರೆ. ರಾಮನಗರ ಜಿಲ್ಲೆಯು ಬರಪೀಡಿತ ಪ್ರದೇಶವಾಗಿದೆ. ಇಲ್ಲಿ ಅತಿವೃಷ್ಟಿ. ಅನಾವೃಷ್ಟಿ ಕಟ್ಟಿಟ್ಟ ಬುತ್ತಿ. ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಅಲ್ಲದೆ, ಮಳೆ ಕೂಡ ಕಡಿಮೆಯಾಗಿರುವುದರಿಂದ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ನಗರದ ಜನರು ಅಷ್ಟೇ ಅಲ್ಲ, ರೈತಾಪಿ ಜನರೂ ಈ ಬಾರಿ ರಣ ಬಿಸಿಲಿಗೆ ತತ್ತರಿಸಿದ್ದಾರೆ.
Related Articles
Advertisement
ಕಾಯಿಲೆ ಬರುವ ಸಾಧ್ಯತೆ: ಪಟಣ್ಣದಲ್ಲಿ ಭೂಮಿ ಕಾದು ಕೆಂಡದಂತಾಗಿದ್ದು, ರೈತರು ಜಮೀನಿಗೆ ಹೋಗ ದಂ ತಹ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಪ್ರಾಣಿಗಳಿಗೆ ಆಹಾರದ ಸಮಸ್ಯೆಯುಂಟಾಗಿದ್ದು, ಕುಡಿಯುವ ನೀರಿ ಗಾಗಿ ಪ್ರಾಣಿ-ಪಕ್ಷಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ. ಸೂರ್ಯನ ಪ್ರಖರತೆ ಹೆಚ್ಚಾದರೆ ಅನೇಕ ಕಾಯಿಲೆ ಬರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ.
ಮಡಕೆಗೆ ಭಾರೀ ಬೇಡಿಕೆ: ಬಿಸಿಲಿನ ಜಳಕ್ಕೆ ಮನೆಯಲ್ಲಿರುವ ಕುಡಿಯುವ ನೀರು ಸಹ ಬೆಚ್ಚಗೆ ಆಗುತ್ತದೆ. ಹೀಗಾಗಿ, ತಣಗಾಗಿಸಲು ಬಡವರ ಫ್ರೀಜ್ ಎಂದೆ ಕರೆಯುವ ಮಣ್ಣಿನ ಮಡಕೆಗಳಿಗೆ ಭಾರೀ ಬೇಡಿಕೆ ಇದೆ. ಹೀಗಾಗಿ, ಇವುಗಳ ವ್ಯಾಪಾರವೂ ಕೂಡ ಮಾರುಕಟ್ಟೆಯಲ್ಲಿ ಜೋರಾಗಿಯೇ ನಡೆಯುತ್ತಿದೆ.
ಸಂಜಿವೀನಿಯಾದ ಎಳನೀರು: ರಾಜ್ಯಾದ್ಯಂತ ಬಿಸಿಲಿನ ಪ್ರಮಾಣ ಅಧಿಕವಾಗಿರುವುದರಿಂದ ಎಲ್ಲರೂ ಎಳನೀರಿಗೆ ಮುಗಿ ಬೀಳುತ್ತಿದ್ದಾರೆ. ನೀರಿಲ್ಲದೆ ತಂಗಿನ ಮರಗಳಲ್ಲಿ ಕಾಯಿಗಳು ಕಡಿಮೆ ಆಗಿರುವುದರಿಂದ ಬೇರೆ ಜಿಲ್ಲೆಗಳಿಂದ ತಂದು ಮಾರಾಟ ಮಾಡಲಾಗುತ್ತಿದೆ. ಗ್ರಾಮದಲ್ಲಿ 30ರಿಂದ 40 ರೂ. ವರೆಗೂ ಒಂದು ಎಳನೀರು ಮಾರಾಟವಾಗುತ್ತಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.
ಕಳೆದ ವರ್ಷಕ್ಕಿಂತ ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿದೆ. ಹೀಗಾಗಿ, ಎಳನೀರು ಸೇವಿಸಲು ಹೆಚ್ಚಾಗಿ ಆಗಮಿಸುತ್ತಿದ್ದಾರೆ. 30 ರೂ. ಇದ್ದರೂ ಗ್ರಾಹಕರು ಚೌಕಾಸಿ ಮಾಡದೆ ಕುಡಿದು ದಣಿವು ನಿವಾರಿಸಿಕೊಳ್ಳುತ್ತಿದ್ದಾರೆ. ವ್ಯಾಪಾರವೂ ಜೋರಾಗಿದೆ. -ಮಲ್ಲಪ್ಪ, ಎಳನೀರು ವ್ಯಾಪಾರಸ್ಥ
ಈ ಬಿಸಲು ಜನರಲ್ಲಿ ಬಳಲಿಕೆ ತರಿಸುತ್ತದೆ. ಸುಸ್ತು ಆದಂತಾಗುತ್ತದೆ. ಕೆಲವರಿಗೆ ಸನ್‌ಸ್ಟೋಕ್ ಆಗಬಹುದು. ನಿರಂತರವಾಗಿ ನೀರು ಕುಡಿಯಬೇಕು. ಊಟ ಕಡಿಮೆ ಮಾಡಬೇಕು. ಬಿಸಿಲಿನ ಝಳ ಹೆಚ್ಚುತ್ತಿದ್ದಂತೆ ಮನೆಯಿಂದ ಹೊರಗಡೆ ಬರಬಾರದು. ಮಕ್ಕಳು, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರು ಆದಷ್ಟು ಬಿಸಿಲಿಂದ ದೂರ ಇರಬೇಕು. – ಡಾ.ರಘುನಾಥ್, ವೈದ್ಯಾಧಿಕಾರಿ
-ಕೆ.ಎಸ್.ಮಂಜುನಾಥ್ ಕುದೂರು