Advertisement
ಸೆಮಿಫೈನಲ್ ಕದನದಲ್ಲಿ ಹರಿಕಾ 4-5ರಿಂದ ಚೀನದ ತಾನ್ ಜಾಂಗ್ಯಿ ವಿರುದ್ಧ ಸೋಲುಂಡರು. ಮೊದಲ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ ಸೋಲುಂಡರೂ ಎರಡನೇ ಗೇಮ್‌ನಲ್ಲಿ ಗೆದ್ದು ತಿರುಗೇಟು ನೀಡಿದ್ದರು. ಹೀಗಾಗಿ ಪಂದ್ಯ 1-1ರಲ್ಲಿ ಸಮಬಲ ಸಾಧಿಸಿತ್ತು. ಆದರೆ ಅಂತಿಮ ಪಂದ್ಯದಲ್ಲಿ ತೀವ್ರ ಸ್ಪರ್ಧೆ ನಿರೀಕ್ಷಿಸಲಾಗಿತ್ತು. ಆಂಧ್ರದ ಆಟಗಾರ್ತಿ ಗೆಲುವಿಗೆ ಸಿಕ್ಕ ಅನೇಕ ಅವಕಾಶಗಳನ್ನು ಕೈಚೆಲ್ಲಿದರು. ಪರಿಣಾಮ ಪಂದ್ಯ ಟೈಬ್ರೇಕರ್ ಹಂತ ತಲುಪಿ ಹರಿಕಾ ಸೋತು ಹೋದರು. ಈ ಮೂಲಕ ಹರಿಕಾ ಮತ್ತೂಮ್ಮೆ ವಿಶ್ವ ಮಹಿಳಾ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಅಥವಾ ಬೆಳ್ಳಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು. ಹರಿಕಾ 2010ರಲ್ಲಿ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. Advertisement
ವಿಶ್ವ ಮಹಿಳಾ ಚೆಸ್ ಹರಿಕಾ ದ್ರೋಣವಲ್ಲಿಗೆ ಕಂಚು
11:02 AM Feb 27, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.