Advertisement
ಕಾರ್ಡಿಯಾಲಜಿ ವಿಭಾಗದಲ್ಲಿ ಅತ್ಯಂತ ಅಪರೂಪ ಮತ್ತು ಕ್ಲಿಷ್ಟಕರ ಚಿಕಿತ್ಸೆ ಇದಾಗಿದ್ದು, ಹುನಗುಂದ ತಾಲೂಕಿನ ಕಳ್ಳಿಗುಡ್ಡ ಗ್ರಾಮದ 75 ವರ್ಷದ ವೃದ್ಧರೊಬ್ಬರು ಹೃದಯಾಘಾತದ ನಂತರ ತೀವ್ರ ಹೃದಯ ವೈಫಲ್ಯತೆಯಿಂದ ಬಳಲುತ್ತಿದ್ದು, ವೆಂಟ್ರಿಕ್ಯುಲರ್ ಟೆಕಿಕಾರ್ಡಿಯಾದಿಂದಾಗಿ ಹೃದಯ ಸ್ಥಂಬನಕ್ಕೊಳಗಾಗಿ ಕುಮಾರೇಶ್ವರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರಿಗೆ ವಿಶೇಷ ಪರೀಕ್ಷೆಯ ನಂತರ ಈ ಕಾಯಿಲೆ ಗುರುತಿಸಿ 8 ಲಕ್ಷಕ್ಕೂ ಹೆಚ್ಚು ವೆಚ್ಚದ ಈ ಉಪಕರಣ ಕುಮಾರೇಶ್ವರ ಆಸ್ಪತ್ರೆಯ ಇಎಸ್‌ಐ ಆರೋಗ್ಯ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಮಾಡಿ ಪ್ರಾಣಾಪಾಯದಿಂದ ಪಾರುಮಾಡಲಾಯಿತು. ಈಸಾಧನ ಎದೆಯ ಗೂಡಿನಲ್ಲಿ ಅಳವಡಿಸಲಾಗಿದ್ದು, ವೈರಗಳ ಮೂಲಕ ಹೃದಯದ ಸ್ನಾಯುಗಳಿಗೆ ಜೋಡಿಸಲಾಗುತ್ತದೆ. ಈ ಚಿಕಿತ್ಸೆಯು ಹೃದಯದ ವೈಫಲ್ಯತೆ ಗುಣಪಡಿಸುವುದಲ್ಲದೇ ಹೃದಯ ಬಡಿತ ವಿಪರೀತವಾಗಿ ಹೆಚ್ಚಾದಾಗಿ ಸ್ವಯಂಚಾಲಿತವಾಗಿ
ಶಾಕ್ ನೀಡುವುದರ ಮುಖಾಂತರ ಸರಿಪಡಿಸುವುದು ಈ ಸಾಧನದ ವೈಶಿಷ್ಟವಾಗಿದೆ ಎಂದು ಡಾ|ಸಾಗರ ದೇಸಾಯಿ
ಸಿಆರ್‌ಟಿ-ಡಿ ಕುರಿತು ಹೇಳಿದರು.
ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ|ಅಶೋಕ ಮಲ್ಲಾಪುರ ಅಭಿನಂದಿಸಿದ್ದಾರೆ.