ಪುತ್ತೂರು: ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮೈಸೂರು ಮೂಲದ ಪ್ರಯಾಣಿಕರೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಜೂ. 28ರಂದು ರಾತ್ರಿ ಪುತ್ತೂರಿನಲ್ಲಿ ಸಂಭವಿಸಿದೆ.
ಮೈಸೂರು ಹಂಚ್ಯಾ ಅಂಚೆ ವ್ಯಾಪ್ತಿಯ ಮಾನಸಿ ನಗರ ನಿವಾಸಿ ಮಂಜುನಾಥ (57) ಮೃತಪಟ್ಟವರು.
ಕೆಲವು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೆಲವು ದಿನಗಳ ಹಿಂದೆ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ 2 ದಿನ ದಾಖಲಾಗಿ ಚೇತರಿಸಿಕೊಂಡಿದ್ದರು.
ಜೂ. 28ರಂದು ಸಂಜೆ ಮಂಗಳೂರಿನಿಂದ ಮೈಸೂರಿಗೆ ಬಸ್‌ನಲ್ಲಿ ಹೊರಟಿದ್ದರು. ಬಸ್ ಪುತ್ತೂರಿಗೆ ತಲುಪುತ್ತಿದ್ದಂತೆ ಪ್ರಜ್ಞಾಹೀನರಾದರು. ತತ್‌ಕ್ಷಣ ಕೆಎಸ್ಸಾರ್ಟಿಸಿ ಸಿಬಂದಿ ಮತ್ತು ಸಹ ಪ್ರಯಾಣಿಕರು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಮೃತಪಟ್ಟಿದ್ದರು.
ಮೃತರ ಪತ್ನಿ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.