Advertisement

ಟ್ವಿಟರ್‌ನಲ್ಲಿ “ಹಾರ್ಟ್‌ ಅಟ್ಯಾಕ್‌’ಟ್ರೆಂಡಿಂಗ್‌!

10:52 PM Feb 24, 2023 | Team Udayavani |

ನವದೆಹಲಿ: ಹೃದಯಾಘಾತದ ಪ್ರಕರಣಗಳು ಇತ್ತೀಚಿನ ವರ್ಷ ಗಳಲ್ಲಿ ಹೆಚ್ಚುತ್ತಿದ್ದು, ಕಿರಿಯ ವಯಸ್ಸಿನವರೇ ಬಲಿಯಾಗುತ್ತಿರುವ ಸಂಗತಿ ಆತಂಕ ಮೂಡಿಸಿದೆ. ಆಂಧ್ರಪ್ರದೇಶದಲ್ಲಿ ಶುಕ್ರವಾರ ಇದೇ ರೀತಿಯ 2 ಘಟನೆ ವರದಿಯಾಗಿದ್ದು, ಜಾಲತಾಣದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ, ಇಡೀ ದಿನ ಟ್ವಿಟರ್‌ನಲ್ಲಿ ಹಾರ್ಟ್‌ ಅಟ್ಯಾಕ್‌ ವಿಚಾರವೇ ಟ್ರೆಂಡಿಂಗ್‌ನಲ್ಲಿತ್ತು.

Advertisement

ಹೈದರಾಬಾದ್‌ನಲ್ಲಿ 24 ವರ್ಷದ ಪೊಲೀಸ್‌ ಪೇದೆ ಯೊಬ್ಬರು ಜಿಮ್‌ನಲ್ಲಿ ವರ್ಕ್‌ ಔಟ್‌ ಮಾಡುತ್ತಿದ್ದಾಗಲೇ, ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ 40ರ ವಯಸ್ಸಿನ ವ್ಯಕ್ತಿಯೊಬ್ಬರು ಹಳದಿ ಸಮಾ ರಂಭದಲ್ಲಿ ಭಾಗಿಯಾಗಿ ದ್ದಾಗಲೇ ಕುಸಿದು ಬಿದ್ದಿದ್ದರು. ಈ ಎರಡೂ ಪ್ರಕರಣಗಳಲ್ಲಿ ಮೃತರ ಸಾವಿಗೆ ಕಾರಣವಾಗಿದ್ದಿದ್ದು ಹೃದಯಾಘಾತ.

ಈ ವಿಚಾರ ಚರ್ಚೆಯಾಗುತ್ತಿದ್ದಂತೆ ಟ್ವಿಟರ್‌ ಬಳಕೆದಾರರು ವಿವಿಧೆಡೆ ಸಂಭವಿಸಿದ ಇದೇ ರೀತಿಯ ದೃಶ್ಯಗಳನ್ನು ಹಂಚಿಕೊಂಡಿದ್ದಾರಲ್ಲದೆ, ಇದಕ್ಕೆ ಕಾರಣವೇನು, ಸರಿಯಾದ ಸಮಯದಲ್ಲಿ ಮಾಡಬೇಕಾದ ಪ್ರಥಮ ಚಿಕಿತ್ಸೆಯೇನು ಎಂಬ ಬಗ್ಗೆ ಚರ್ಚಿಸಿದ್ದಾರೆ. ಸಮಯಪ್ರಜ್ಞೆ ಮೆರೆದು ಎಷ್ಟೋ ಮಂದಿಯ ಪ್ರಾಣ ಉಳಿಸಿದ ದೃಶ್ಯಾವಳಿಗಳನ್ನೂ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next