ಹೃದಯಾಘಾತದ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಡೆದ ಸಂಶೋ ಧನೆಯಲ್ಲಿ ಹೃದಯಾಘಾತಕ್ಕೆ ಶಬ್ದ ಮಾಲಿನ್ಯವೂ ಒಂದು ಕಾರಣ ಎಂಬುದು ಸಾಬೀ ತಾಗಿದೆ. ಅಮೆರಿಕದ ನ್ಯೂಜೆರ್ಸಿ ಮೆಡಿಕ್ಸ್‌ನ ವರದಿಯ ಪ್ರಕಾರ ಹೆಚ್ಚು ಗದ್ದಲವಿರುವ ಪ್ರದೇಶಗಳಲ್ಲಿ ವಾಸಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೆ ಒಳಗಾಗು ತ್ತಾರೆ. ಅದರಲ್ಲಿಯೂ ವಿಮಾನ ನಿಲ್ದಾಣದ ಸಮೀಪವಿರುವ ಪ್ರದೇಶಗಳಲ್ಲಿನ ಜನರು ಹೃದಯಾಘಾತಕ್ಕೀಡಾಗುವ ಸಾಧ್ಯತೆ ಅಧಿಕವಾಗಿದೆ.
ರಕ್ತದೊತ್ತಡವನ್ನು ಹೆಚ್ಚಿಸುತ್ತದೆ :
ವಿಶ್ವ ಆರೋಗ್ಯ ಸಂಸ್ಥೆ 2018ರಲ್ಲಿ ಹೃದಯಾಘಾತಗಳ ಬಗ್ಗೆ ಪರಿಶೀಲನೆ ನಡೆಸಿ ವರದಿಯನ್ನು ಬಿಡುಗಡೆ ಮಾಡಿತ್ತು. ಆ ವರದಿಯ ಪ್ರಕಾರ ಶಬ್ದದ ಮಟ್ಟವು 65 ಡೆಸಿಬಲ್‌ಗಳ ಸಮೀಪವಿದ್ದರೆ ಅಂತಹ ಪ್ರದೇಶವನ್ನು ಅಥವಾ ಅದರ ಹತ್ತಿರವಿರುವ ಸ್ಥಳವನ್ನು ಶಬ್ದ ಮಾಲಿನ್ಯದ ಪ್ರದೇಶ ಎಂದು ಗುರುತಿಸಲಾಗುತ್ತದೆ.
ಸಂಶೋಧನೆಯ ಪ್ರಕಾರ, ಈ ಸ್ಥಳ ಗಳಲ್ಲಿ ವಾಸಿಸುವ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸ ಲಾಗುತ್ತದೆ. ಇಲ್ಲಿನ ಜನರು ಭಾರೀ ಶಬ್ದದಿಂದಾಗಿ ಕಿವುಡು ತನ, ನಿದ್ರೆಯ ಕಿರಿ ಕಿರಿ, ಒತ್ತಡ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಶಬ್ದದ ಮಟ್ಟವು ರಾತ್ರಿ ವೇಳೆ 30 ಡೆಸಿಬಲ್ ಮತ್ತು ಹಗಲಿನಲ್ಲಿ 50 ಡೆಸಿಬಲ್‌ಗಳಾಗಿರ ಬೇಕು. ಇದಕ್ಕಿಂತ ಹೆಚ್ಚಿನ ಮಟ್ಟದ ಶಬ್ದವಿದ್ದಲ್ಲಿ ದೇಹದಲ್ಲಿನ ರಕ್ತನಾಳಗಳು ಸಂಕುಚಿತಗೊಳ್ಳಲು ಪ್ರಾರಂಭವಾಗುತ್ತದೆ. ಅಲ್ಲದೆ ಹೃದಯ ಬಡಿತ, ರಕ್ತದೊತ್ತಡ ಹೆಚ್ಚಾಗುತ್ತದೆ.
ಯಾವ ಮಟ್ಟದ ಶಬ್ದ ಮಾನವರಿಗೆ ಅಪಾಯಕಾರಿ? :
ದೀರ್ಘಕಾಲದವೆರೆಗೆ 70 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದವಿದ್ದಲ್ಲಿ ಕಿವಿಗೆ ಹಾನಿಯಾಗುತ್ತದೆ. 120 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಕಿವಿಗಳಿಗೆ ತತ್‌ಕ್ಷಣದ ಹಾನಿಯುಂಟು ಮಾಡುತ್ತದೆ. ಶಬ್ದ ಮಾಲಿನ್ಯ ಎನ್ನುವುದು ಗಂಭೀರ ಸಾರ್ವಜನಿಕ ಸಮಸ್ಯೆಯಾಗಿದ್ದು ವಿಶ್ವಾದ್ಯಂತ 1.3 ಶತಕೋಟಿ ಜನರು ಈ ಸ್ಥಿತಿಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಾಗತಿಕ ಜನಸಂಖ್ಯೆಯ ಶೇ. 10ರಷ್ಟು ಮಂದಿ ಶ್ರವಣ ದೋಷಕ್ಕೆ ಒಳಗಾಗುತ್ತಾರೆ.