Advertisement

Health Minister: ಹೃದಯಾಘಾತಕ್ಕೆ ಕೋವಿಡ್ ಕಾರಣ !? ಸಚಿವ ಮನ್ಸುಖ್ ಮಾಂಡವಿಯಾ

08:22 PM Oct 30, 2023 | |

ಗಾಂಧಿನಗರ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಗಳ ಪ್ರಕರಣ ಹೆಚ್ಚುತ್ತಿದ್ದು, ಗುಜರಾತ್‌ನಲ್ಲಿ ನವರಾತ್ರಿ ಸಂದರ್ಭದಲ್ಲಿ ಗರ್ಭಾ ನೃತ್ಯ ಮಾಡುತ್ತಲೇ 10 ಮಂದಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದು ಆತಂಕ ಮೂಡಿಸಿತ್ತು. ಇದೀಗ ಅಂಥ ಸಾವುಗಳಿಗೆ ಕೊರೊನಾ ಕಾರಣವೆನ್ನುವಂಥ ಸುಳಿವನ್ನು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಬಹಿರಂಗ ಪಡಿಸಿದ್ದಾರೆ.

Advertisement

ಗುಜರಾತಿ ಮಾಧ್ಯಮವೊಂದರ ಜತೆಗೆ ಮಾತನಾಡುತ್ತಾ ಗರ್ಬಾ ನೃತ್ಯ ಸಂದರ್ಭದಲ್ಲಿ ನಡೆದ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವ ಮಾಂಡವಿಯ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ನಡೆಸಿರುವ ಅಧ್ಯಯನದ ವರದಿಯ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಅದರಂತೆ ಕೊರೊನಾದಿಂದ ಗಂಭೀರವಾಗಿ ತೊಂದರೆಗೀಡಾಗಿದ್ದ ವ್ಯಕ್ತಿಗಳು ಸೋಂಕು ಗುಣಪಟ್ಟ ಬಳಿಕವೂ 1 ರಿಂದ 2 ವರ್ಷಗಳವರೆಗೆ ಅತಿಯಾದ ವ್ಯಾಯಾಮ ಹಾಗೂ ತೀವ್ರತರದ ಕೆಲಸಗಳನ್ನು ಮಾಡಬಾರದು. ಇದರಿಂದ ದೂರ ಇದ್ದಷ್ಟು ಅವರು ಏಕಾಏಕಿ ಹೃದಯಸ್ತಂಭನದಂಥ ಸಮಸ್ಯೆಯಿಂದ ಪಾರಾಗಬಹುದು ಎಂದಿದ್ದಾರೆ. ಈ ಮೂಲಕ ಇತ್ತೀಚೆಗಿನ ಹೃದಯಸ್ತಂಭನ ಪ್ರಕರಣಗಳಿಗೆ ಕೊರೊನಾ ಕಾರಣ ಎನ್ನುವಂಥ ವಾದಕ್ಕೆ ಪುಷ್ಟಿ ಸಿಕ್ಕಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next