Advertisement

ಎಸ್‌.ಎಂ.ಶೆಟ್ಟಿ ಕಾಲೇಜಿಗೆ ಹೆಲ್ದೀ ವರ್ಕ್‌ ಪ್ಲೇಸ್‌ ಪ್ರಶಸ್ತಿ

04:17 PM Dec 05, 2017 | Team Udayavani |

ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಪ್ರತಿಷ್ಠಿತ ಎಸ್‌. ಎಂ. ಶೆಟ್ಟಿ ವಿಜ್ಞಾನ, ವಾಣಿಜ್ಯ ಹಾಗೂ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಕಾಲೇಜಿಗೆ ಆರೋಗ್ಯ ವರ್ಲ್ಡ್-ಎನ್‌ಜಿಓ ಸಂಸ್ಥೆಯ ಪ್ರತಿಷ್ಠಿತ ವಾರ್ಷಿಕ ಹೆಲ್ದೀ ವರ್ಕ್‌ ಪ್ಲೇಸ್‌-2017 ಪ್ರಶಸ್ತಿ ಲಭಿಸಿದೆ.

Advertisement

ನ. 9 ರಂದು ಬೆಂಗಳೂರಿನ ವಿವಾಂತ ತಾಜ್‌ನಲ್ಲಿ ಜರಗಿದ ಸಮಾರಂಭದಲ್ಲಿ ಆರೋಗ್ಯ  ವಲ್‌ x ಟ್ರಸ್ಟ್‌ ಕಾರ್ಯಾಧ್ಯಕ್ಷ ಡಾ| ನಳಿನಿ ಸಾಲಿಗ್ರಾಮ ಹಾಗೂ ಗಣ್ಯರು ಬಂಟರ ಸಂಘ ಎಸ್‌. ಎಂ. ಶೆಟ್ಟಿ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಧರ್‌ ಶೆಟ್ಟಿ ಅವರಿಗೆ ಕಾಲೇಜಿನ ಪರವಾಗಿ ಪ್ರಶಸ್ತಿ ಪ್ರದಾನಿಸಿದರು.

ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಉತ್ಪಾದನಾ ಕಂಪೆನಿಗಳು, ಸಾಮಾಜಿಕ ಸಂಸ್ಥೆಗಳು, ಸಾಫ್ಟ್‌ವೇರ್‌ ಕಂಪೆನಿಗಳು, ಶಿಕ್ಷಣ ಸಂಸ್ಥೆಗಳು ಹೀಗೆ ಸುಮಾರು 50 ಸಂಸ್ಥೆಗಳ ಈ ಪ್ರಶಸ್ತಿ ವಿತರಣ ಸಮಾರಂಭದಲ್ಲಿ ಪಾಲ್ಗೊಂಡಿದ್ದವು. ಇದೇ ಸಂದರ್ಭದಲ್ಲಿ ಚರ್ಚಾಗೋಷ್ಠಿ, ಅನುಭವಗಳ ಹಂಚಿಕೆಯನ್ನು ನಡೆಸಲಾಯಿತು.

ಯಾವುದೇ ಸಂಸ್ಥೆಯು ಆರೋಗ್ಯ ಪೂರ್ಣವಾಗಿ ಬೆಳೆಯಬೇಕಾದರೆ ಮಾಲಕರು ಮತ್ತು ಸಿಬಂದಿಗಳ ಆರೋಗ್ಯಪೂರ್ಣ ಸಂಬಂಧ ಅಗತ್ಯವಿರುತ್ತದೆ. ಕೆಲಸ ಕಾರ್ಯಗಳ ಒತ್ತಡದಿಂದಾಗಿ ಇಂದು ಮಾನಸಿಕ ಅಸಮತೋಲನ, ಆತಂಕ, ಖನ್ನತೆ, ರಕ್ತದೊತ್ತಡ, ಡಯಾ ಬಿಟೀಸ್‌ ಮೊದಲಾದ ಆತಂಕಕಾರಿ ಬೆಳವಣಿಗೆಗಳು  ಸಾಮಾನ್ಯವಾಗಿವೆ. ಅದನ್ನು ತಡೆಗಟ್ಟುವಲ್ಲಿ ಸಂಸ್ಥೆಯ ಮಾಲಕರು ಸಿಬಂದಿಗಳೊಂದಿಗೆ ಅನ್ಯೋನ್ಯತೆಯಿಂದ ಇರಬೇಕಾಗದ ವಿಚಾರಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಆರೋಗ್ಯ ವರ್ಲ್ಡ್ ಎನ್‌ಜಿಓ ಸಂಸ್ಥೆ ಈ ಸಂಬಂಧ ಉತ್ತಮ ಕಾರ್ಯನಿರ್ವಹಿಸುತ್ತಿದೆ.
 

Advertisement

Udayavani is now on Telegram. Click here to join our channel and stay updated with the latest news.

Next