Advertisement

ಆರೋಗ್ಯವಂತ ಸಮಾಜಕ್ಕೆ ಭಾಷೆಗಿಂತ ಮನಸು ಮುಖ್ಯ

01:25 AM Feb 10, 2019 | |

ವಿದ್ವಾನಗರ: ಆರೋಗ್ಯಕರವಾದ ಸಮಾಜಕ್ಕೆ ಒಳ್ಳೆಯ ಮನಸ್ಸುಗಳಿರಬೇಕು, ಅದಕ್ಕೆ ಭಾಷೆ ಮುಖ್ಯವಲ್ಲ, ಪುಸ್ತಕ ರೂಪದಲ್ಲಿ ಬೇರೆಯವರ ಅರಿವುಗಳನ್ನು ಅಥೆ„ರ್ಸಿಕೊಳ್ಳುವುದರೊಂದಿಗೆ ಸೌಹಾರ್ದತೆಯು ಅಭಿವೃದ್ಧಿಯು ಸಾಧ್ಯ ಎಂಬುದಾಗಿ ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎಂ.ರವಿಕುಮಾರ್‌ ಹೇಳಿದರು.

Advertisement

ಕಾಸರಗೋಡು ಹೊಸಬಸ್‌ನಿಲ್ದಾಣ ಪರಿಸರದ ಸ್ಪೀಡ್‌ ವೇ ಇನ್‌ ಸಭಾಂಗಣದಲ್ಲಿ ಶನಿವಾರ ಕೈರಳಿ ಪ್ರಕಾಶನದ ಉದಯೋನ್ಮುಖ ಕವಿ-ಕವಯತ್ರಿಯರ ಕವನ ಸಂಕಲನವಾದ ಗಡಿನಾಡ ಕಾವ್ಯ ಕೈರಳಿ ನೂತನ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಕ್ರೀಡಾ ಅಂಕಣಗಾರ ಎಸ್‌.ಜಗದೀಶ್ಚಂದ್ರ ಅಂಚನ್‌ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.

ಪ್ರಸ್ತುತ ಪುಸ್ತಕ ಓದುವಿಕೆ ಕಡಿಕಾರ್ಯಕ್ರಮವನ್ನು ಶಾಸಕ ಎನ್‌.ಎ.ನೆಲ್ಲಿಕುನ್ನು, ಉದ್ಘಾಟಿದರು. ಮಧುರೈ ಕಾಮರಾಜ ವಿವಿಯ ವಿಶ್ರಾಂತ ಕನ್ನಡ ವಿಭಾಗ ಮುಖ್ಯಸ್ಥ ಹರಿಕೃಷ್ಣ ಭರಣ್ಯ, ಅಧ್ಯಕ್ಷತೆ ವಹಿಸಿದ್ದರು,.

ಕೃತಿಗಾರರಾದ ಕೇಳು ಮಾಸ್ತರ್‌ ಅಗಲ್ಪಾಡಿ, ರವಿ ನಾಯ್ಕಪು, ಶ್ರೀಕಾಂತ್‌ ನೆಟ್ಟಣಿಗೆ ಅವರನ್ನು ಸನ್ಮಾನಿಸಲಾಯಿತು. ಕೈರಳಿ ಪ್ರಕಾಶನದ ವತಿಯಿಂದ ಶಾಸಕ ಎನ್‌.ಎ.ನೆಲ್ಲಿಕುನ್ನು ಹಾಗೂ ವಾರ್ತಾ ಇಲಾಖೆ ನಿರ್ದೇಶಕ ಎಂ.ರವಿಕುಮಾರ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೇಳು ಮಾಸ್ತರ್‌ ಅಗಲ್ಪಾಡಿ ಅವರ ಕಾಸರಗೋಡಿನ ಸಿರಿಗನ್ನಡ ಸಾಹಿತಿಗಳು ಕೃತಿಯ ವಿಮರ್ಶೆಯನ್ನು ಮಂಗಳೂರು ಅಲೋಶಿಯಸ್‌ ಸಂಧ್ಯಾ ಕಾಲೇಜು ಕನ್ನಡ ವಿಭಾಗ ಉಪನ್ಯಾಸಕ ಕೆ.ಮಹಾಲಿಂಗ ಭಟ್ ಮಾಡಿದರು. ಅದೇ ಸಂದರ್ಭದಲ್ಲಿ ರವಿ ನಾಯ್ಕಪು ಅವರ ದಾನಗಂಗೆ ಪುಸ್ತಕವನ್ನು ಸಾಹಿತಿ, ಹಿರಿಯ ಪತ್ರಕರ್ತ ಮಲಾರ್‌ ಜಯರಾಮ ರೈ ಮತ್ತು ಶ್ರೀಕಾಂತ್‌ ನೆಟ್ಟಣಿಗೆ ಅವರ ದೀಪದ ಔನ್ನತ್ಯ ಕೃತಿಯ ವಿಮರ್ಶೆಯನ್ನು ನಿವೃತ್ತ ಬ್ಯಾಂಕ್‌ ಅಧಿಕಾರಿ ಎಸ್‌.ಜಗನ್ನಾಥ ಶೆಟ್ಟಿ ನಿರ್ವಹಿಸಿದರು.

Advertisement

ಕೈರಳಿ ಪ್ರಕಾಶನದ ಪ್ರಕಾಶಕ ಎ.ಆರ್‌.ಸುಬ್ಬಯ್ಯಕಟ್ಟೆ, ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಜಿ.ಪಂ ಸದಸ್ಯ ಅಡ್ವಾ.ಕೆ.ಶ್ರೀಕಾಂತ್‌, ಹರಿದಾಸ ಜಯಾನಂದ ಕುಮಾರ್‌ ಹೊಸದುರ್ಗ, ಗಡಿನಾಡ ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ನಿವೃತ್ತ ಉಪಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ಮಾತನಾಡಿದರು. ಸಂಧ್ಯಾಗೀತಾ ಬಾಯಾರು ಪ್ರಾರ್ಥನೆ ಹಾಡಿದರು. ಪ್ರೊ.ಎ.ಶ್ರೀನಾಥ್‌ ಪ್ರಾಸ್ತಾವಿಸಿ ದರು. ಎ.ಎನ್‌.ನೆಟ್ಟಣಿಗೆ ಸ್ವಾಗತಿಸಿ, ಝಡ್‌ ಎ.ಕೈಯಾರ್‌ ವಂದಿಸಿದರು. ಪುರುಷೋತ್ತಮ ಭಟ್ ಪೈವಳಿಕೆ, ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ರಿತಿಖ್‌ ಯಾದವ, ವಸಂತ ಭಾರಡ್ಕ, ಸಮನ್ವಿತಾ ಗಣೇಶ್‌, ಆಭಿಜ್ನಾ, ಮುರಳಿ ನೀರ್ಚಾಲ್‌ ಗಾಯನದ ಮೂಲಕ ಮನ ರಂಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next