Advertisement

ಆರೋಗ್ಯಕರ ಕಡಲೆಪುರಿ (ಮಂಡಕ್ಕಿ)

06:00 AM Aug 17, 2018 | |

ಉಪ್ಪು , ಖಾರ, ಈರುಳ್ಳಿ ಬೆರೆಸಿದ ಮಂಡಕ್ಕಿಯನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಪುರಿ ಬಹಳ ಹಗುರವಾಗಿದ್ದು, ತಿಂದರೂ ತಿಂದಿಲ್ಲವೇನೋ ಎನ್ನಿಸುವ ಆಹಾರ. ಅಲ್ಲದೆ, ಇದರಿಂದ ಎಷ್ಟೋ ಆರೋಗ್ಯ ಪ್ರಯೋಜನಗಳಿವೆ. ಇದರಲ್ಲಿ ಕೊಬ್ಬಿನ ಅಂಶ, ಕ್ಯಾಲೋರಿ ಬಹಳ ಕಡಿಮೆ. ಪುರಿ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

Advertisement

ಪುರಿ ಬಹಳ ಹಗುರವಾದ ಆಹಾರ. ಇದರಲ್ಲಿ ನಾರಿನಂಶ ಹೆಚ್ಚಾಗಿದೆ. ಹಾಗಾಗಿಯೇ ಜೀರ್ಣಿಸಿಕೊಳ್ಳಲು ತುಂಬ ಸುಲಭ. ಒಳ್ಳೆಯ ಜೀರ್ಣಕಾರಿಯಾಗಿರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. ಕರುಳಿನ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಆದ್ದರಿಂದ ಜೀರ್ಣಕ್ರಿಯೆ ವೇಗವಾಗಿ ತಿಂದಂತೆಯೇ ಇಲ್ಲದೆ ಹಗುರವಾಗಿರುತ್ತದೆ.

ಪುರಿಯಲ್ಲಿ ವಿಟಮಿನ್‌ “ಡಿ’, ವಿಟಮಿನ್‌ “ಬಿ’ ಕಾಂಪ್ಲೆಕ್ಸ್‌ ನಲ್ಲಿರುವ ರೈಬೋ ಪ್ಲೇವಿನ್‌, ಥಯಾಮಿನ್‌ ಹೆಚ್ಚಾಗಿದೆ. ಜೊತೆಗೆ ಕ್ಯಾಲ್ಸಿಯಂ, ಐರನ್‌ ಕೂಡ ಹೆಚ್ಚಾಗಿ ಇದೆ. ಹಾಗಾಗಿ ಇವು ಮೂಳೆ, ಹಲ್ಲುಗಳನ್ನು ಬಲಶಾಲಿಯಾಗಿರುವಂತೆ ಮಾಡುತ್ತದೆ. ಇದು ಆಸ್ಟಿಯೋಪೋರೋಸಿಸ್ಸನ್ನು ನಿವಾರಿಸುತ್ತದೆ. ಇದು ಚರ್ಮಕ್ಕೆ ಒಳ್ಳೆಯದು. ಜತೆಗೆ, ಒಳ್ಳೆಯ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

ಪುರಿಯಲ್ಲಿ ಕಾಬೋಹೈಡ್ರೇಟ್ಸ್‌ ಹೆಚ್ಚಾಗಿದೆ. ಆದ್ದರಿಂದ ಸ್ವಲ್ಪವೇ ತಿಂದರೂ ದೇಹವು ಹಗುರವಾಗಿರುವುದೇ ಅಲ್ಲದೆ ಹೆಚ್ಚು ಶಕ್ತಿ ಸಿಗುವಂತೆ ಮಾಡುತ್ತದೆ. ಕೆಲವರು ಕೆಲಸ ಚುರುಕಾಗಿ ಮಾಡಬೇಕೆಂದುಕೊಂಡಾಗ ಬ್ರೇಕ್‌ಫಾಸ್ಟ್‌ಗೆ ಇದನ್ನು ಉಪಯೋಗಿಸುತ್ತಾರೆ. ಇದು ಮೆದುಳಿಗೆ ಚುರುಕುತನವನ್ನು ಕೊಡುತ್ತದೆ. ಜೊತೆಗೆ ನರಮಂಡಲವನ್ನು ಉತ್ತೇಜನಗೊಳಿಸುತ್ತದೆ. 

ಪುರಿ ಬುದ್ಧಿಶಕ್ತಿಯನ್ನು, ಕಲಿಯುವ ಶಕ್ತಿಯನ್ನೂ ಬೆಳೆಸುತ್ತದೆ. ಪುರಿಯಲ್ಲಿರುವ ಶಕ್ತಿಯುತವಾದ ಆ್ಯಂಟಿ ಆಕ್ಸಿಡೆಂಟ್ಸ್‌ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕು ಬಾರದಂತೆ ತಡೆಯುತ್ತದೆ. ಕ್ಯಾನ್ಸರ್‌ಗೆ ಕಾರಣವಾಗುವ ಪ್ರೀರ್ಯಾಡಿಕಲ್ಲನ್ನು ನಿವಾರಿಸುತ್ತದೆ. ಇದರಲ್ಲಿ ಕಾಬೋì ಹೈಡ್ರೇಟ್ಸ್‌ ಹೆಚ್ಚಿಗೆ ಇರುವುದರಿಂದ ಡಯಾಬಿಟಿಸ್‌ ಇರುವವರು ಇದನ್ನು ಮಿತವಾಗಿ ತಿನ್ನಬೇಕು. ತೂಕ ಇಳಿಸಬೇಕೆಂದುಕೊಂಡವರಿಗೆ ಪುರಿಯಿಂದ ಮಾಡಿದ ಸ್ನ್ಯಾಕ್ಸ್‌ ಒಳ್ಳೆಯದು. ಅಕ್ಕಿಯಂತೆಯೇ ಪುರಿಯಲ್ಲಿ ಕಾಬೋìಹೈಡ್ರೇಡ್ಸ್‌ ಹೆಚ್ಚಾಗಿದೆ.

Advertisement

ಪುರಿ ಹಗುರವಾಗಿರುತ್ತದೆ ಎಂದುಕೊಂಡು ಅದನ್ನು ಹೆಚ್ಚಿಗೆ ತಿನ್ನದೆ ಮಿತವಾಗಿ ತಿನ್ನುವುದು ಒಳ್ಳೆಯದು. ಪುರಿಯನ್ನು ಬೆಲ್ಲ ಸೇರಿಸಿ ಉಂಡೆಯನ್ನೂ ತಯಾರಿಸುತ್ತಾರೆ.

ಸುಮ

Advertisement

Udayavani is now on Telegram. Click here to join our channel and stay updated with the latest news.

Next