Advertisement
ಆರೋಗ್ಯಕರ ಜೀವನವೆಂದರೆ ಉತ್ತಮ ಆರೋಗ್ಯ ಮತ್ತು ವಿವೇಕಯುತ ಮನಸ್ಸು. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಲು ಬಯಸಿದರೆ, ಪ್ರತಿದಿನ ಉತ್ತಮ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಮನಸ್ಸು ಮತ್ತು ದೇಹಕ್ಕೆ ಸೂಕ್ತ ಆಗಿರುವುದನ್ನು ಮಾತ್ರ ಮಾಡಬೇಕು. ಜೀವನಶೈಲಿ ಮತ್ತು ಅಭ್ಯಾಸಗಳನ್ನು ಚೆನ್ನಾಗಿ ನಿರ್ವಣೆ ಮಾಡುವುದರಿಂದ ವ್ಯಕ್ತಿಯ ಬಗ್ಗೆ ಸದಭಿಪ್ರಾಯ ಮೂಡುತ್ತದೆ. ಇದು ವ್ಯಕ್ತಿಯ ಸ್ವಾಭಿಮಾನ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ. ವ್ಯಕ್ತಿಯು ಈಗಾಗಲೇ ಅನಾರೋಗ್ಯಕರ ಜೀವನಶೈಲಿಗೆ ಒಗ್ಗಿಕೊಂಡಿದ್ದರೆ ಅದನ್ನು ಸುಧಾರಿಸಲು ಸಾಕಷ್ಟು ಉತ್ತಮ ಅವಕಾಶಗಳು ಇವೆ. ಪ್ರತಿದಿನದ ನಮ್ಮ ದಿನಚರಿಯಲ್ಲಿ ಪಾಲಿಸಬೇಕಾದ ಕೆಲವು ಆರೋಗ್ಯಕರ ಅಭ್ಯಾಸಗಳಿದ್ದು, ಅವುಗಳು ನಮ್ಮ ಜೀವನಶೈಲಿಯನ್ನು ಸುಧಾರಿಸುತ್ತದೆ. ವ್ಯಕ್ತಿಯ ಜೀವನಶೈಲಿಯನ್ನು ಉತ್ತಮಪಡಿಸಲು ಪ್ರಮುಖ ಐದು ಅಭ್ಯಾಸಗಳೆಂದರೆ,
Related Articles
Advertisement
ಸರಿಯಾದ ಸಮಯಕ್ಕೆ ನಿದ್ರೆ: ಮನುಷ್ಯನ ದೈನಂದಿನ ಮಲಗುವ ಸಮಯವು ಆತನ ಮನಸ್ಥಿತಿ ಮತ್ತು ಆರೋಗ್ಯದ ನಿರ್ಧಾರಕ. ಪ್ರತಿದಿನ ಸರಿಯಾದ ಸಮಯಕ್ಕೆ ಮಲಗದೇ ಇದ್ದರೆ ಅದು ದಿನವಿಡೀ ನಮ್ಮ ಜೀವನಶೈಲಿಯ ಮೇಲೆ ಪ್ರಭಾವ ಬೀರುತ್ತದೆ. ತಡವಾಗಿ ನಿದ್ರಿಸಿದರೆ ಅದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳುಗೆಡವುತ್ತದೆ. ಆರೋಗ್ಯಕರ ಜೀವನದ ಜೀವಾಳವೇ ಧಾರಾಳ ನಿದ್ರೆ ಮಾಡುವುದು. ತಡವಾಗಿ ಮಲಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು.
ಪೋಷಕಾಂಶಯುಕ್ತ ಆಹಾರ ಸೇವನೆ: ಮನುಷ್ಯ ಸದಾ ಆರೋಗ್ಯವಾಗಿ ಇರಲು ಹೆಚ್ಚಿನ ಪೋಷಕಾಂ ಶ ಇರುವ ಆಹಾರವನ್ನು ಸೇವಿಸಬೇಕು. ಸಮತೋಲಿತ ಆಹಾರ ಕ್ರಮವು ಮನುಷ್ಯನ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ದೇಹ ಮತ್ತು ಮನಸ್ಸಿನ ಕಾರ್ಯನಿರ್ವಹಣೆ ಸರಿಯಾಗಿ ಇರಬೇಕೆಂದರೆ ಉತ್ತಮ ಆಹಾರಕ್ರಮಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಆಹಾರಕ್ರಮ ಸುಧಾರಣೆಯೇ ಜೀವನಶೈಲಿಯ ಸುಧಾರಣೆಯ ಪ್ರಮುಖ ಹೆಜ್ಜೆ. ಆರೋಗ್ಯವೇ ಭಾಗ್ಯ ಎನ್ನುವ ಮಾತಿನಂತೆ ಮನುಷ್ಯನು ಅಮೂಲ್ಯವಾದ ತನ್ನ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಅದಕ್ಕಾಗಿ ಉತ್ತ ಮಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು.
ಆರೋಗ್ಯಕರ ಜೀವನಶೈಲಿಯು ಹಲವು ರೋಗಗಳನ್ನು ತಡೆದು ದೀರ್ಘಕಾಲದ ಕಾಯಿಲೆಗಳಿಂದ ನಮ್ಮನ್ನು ದೂರ ಇರಿಸುತ್ತದೆ. ಒಳ್ಳೆಯ ಅಭ್ಯಾಸಗಳು ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ದೇಹ ಸದೃಢವಾಗಿ ಇಡುತ್ತದೆ. ವ್ಯಕ್ತಿಯ ಒಟ್ಟಾರೆ ಆರೋಗ್ಯವು ಆತ ಯಾವ ರೀತಿಯ ಜೀವನ ಶೈಲಿಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎನ್ನುವುದನ್ನು ಅವಲಂಬಿಸಿದೆ ಎನ್ನುವುದನ್ನು ಮರೆಯಬಾರದು.
- ಸಂತೋಷ್ ರಾವ್ ಪೆರ್ಮುಡ
ಬೆಳ್ತಂಗಡಿ