Advertisement

ನಿಯಮಿತ ವ್ಯಾಯಾಮದಿಂದ ಆರೋಗ್ಯ

11:16 AM May 29, 2022 | Team Udayavani |

ಹುಬ್ಬಳ್ಳಿ: ಇಲ್ಲಿನ ಅಮರಗೋಳ ಎಪಿಎಂಸಿಯ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಹಾಗೂ ಡಾ| ಮಹೇಶ ನಾಲವಾಡ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ಸುಚಿರಾಯು ಆಸ್ಪತ್ರೆ, ಎಚ್‌ಸಿಜಿ ಸ್ಕ್ಯಾನ್ ಸೆಂಟರ್‌ ಆಶ್ರಯದಲ್ಲಿ ಶನಿವಾರ ಸಂಘದ ಕಟ್ಟಡದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

Advertisement

ಶಿಬಿರ ಉದ್ಘಾಟಿಸಿ ಮಾತನಾಡಿದ ಡಾ| ಮಹೇಶ ನಾಲವಾಡ, ಮನುಷ್ಯ ದೈಹಿಕವಾಗಿ, ಮಾನಸಿಕವಾಗಿ, ಭೌತಿಕವಾಗಿ, ಸಾಮಾಜಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಸಂಪೂರ್ಣ ಆರೋಗ್ಯವಾಗಿರುತ್ತಾನೆ. ಸಮತೋಲನ ಆಹಾರ ಸೇವನೆ, ಸರಿಯಾಗಿ ನಿದ್ರೆ, ದೈಹಿಕ ಚಟುವಟಿಕೆ, ಯೋಗಾಭ್ಯಾಸ, ವ್ಯಾಯಾಮ ನಿಯಮಿತವಾಗಿ ಮಾಡುವುದರಿಂದ ಸದೃಢವಾಗಿರಲು ಸಾಧ್ಯ.‌

ಸರಕಾರವು ಕೆಲವು ಆರೋಗ್ಯ ಕಾರ್ಡ್‌ಗಳನ್ನು ಮಾಡಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಎಪಿಎಂಸಿ ಕಾರ್ಯದರ್ಶಿ ಪ್ರಭಾಕರ ಅಂಗಡಿ, ಮಾಜಿ ಅಧ್ಯಕ್ಷ ಬಸವರಾಜ ಗಾಣಿಗೇರ, ಸಂಘದ ಮಾಜಿ ಅಧ್ಯಕ್ಷ ಜಗದೀಶಗೌಡ ಪಾಟೀಲ, ರಾಜಣ್ಣ ಬತ್ಲಿ, ಚಂದ್ರಶೇಖರ ಪೂಜಾರ, ಮಲ್ಲಿಕಾರ್ಜುನ ಬೋರಟ್ಟಿ, ಸಲೀಂ ಬ್ಯಾಹಟ್ಟಿ, ಶಿವನಗೌಡ ಪಾಟೀಲ, ಎ.ಎಸ್‌. ಬಾಳಿಕಾಯಿ, ಎಸ್‌.ಎಸ್‌. ಹೊಸಕಟ್ಟಿ, ಶಂಕರಣ್ಣ ಕೊಕಾಟಿ, ಜಿ.ಆರ್‌. ಬೆಲ್ಲದ, ಎ.ಆರ್‌. ನದಾಫ, ಸುರೇಶ ಓಸ್ತುವಾಲ, ಬಿ.ಜಿ. ಹೊಸಗೌಡ್ರ ಮೊದಲಾದವರಿದ್ದರು.

ಶಿಬಿರದಲ್ಲಿ ಆರ್ಥೋಪಿಡಿಕ್‌ ಡಾ| ವಿವೇಕ ಪಾಟೀಲ, ಚಿಕ್ಕಮಕ್ಕಳ ತಜ್ಞ ಡಾ| ಸೋಹೆಲ್‌ ಅಣಬಿ, ಸರ್ಜನ್‌ ಡಾ| ಸಂಜೀವ ನೇವನಾಳ, ಇಎನ್‌ಟಿ ಡಾ| ಪುನೀತ, ಮೂತ್ರಕೋಶ ತಜ್ಞ ಡಾ| ಭುವನೇಶ ಆರಾಧ್ಯ, ರೇಡಿಯೇಶನ್‌ ಡಾ| ಮಿಲ್ಲಿಂದ ಶೆಟ್ಟಿ, ಕ್ಯಾನ್ಸರ್‌ ತಜ್ಞ ಡಾ| ವಿಶಾಲ ಕುಲಕರ್ಣಿ, ಮುಖ್ಯ ವೈದ್ಯಕೀಯ ನಿರ್ವಾಹಕ ಡಾ| ಜಯಕಿಶನ್‌, ಮೆಡಿಕಲ್‌ ಹೆಡ್‌ ಡಾ| ವಿಶಾಕ ಮಧುರಕರ, ಡಯಟಿಸ್ಟ್‌ ಡಾ| ದೀಪಾ, ಡಾ| ಎಸ್‌. ಎ. ಪಾಟೀಲ ಅವರು ರಕ್ತದೊತ್ತಡ, ಮಧುಮೇಹ, ಕಣ್ಣು, ಮೂತ್ರಕೋಶ ತಪಾಸಣೆ, ತೂಕ, ಇಸಿಜಿ, ಚಿಕ್ಕಮಕ್ಕಳ ತಪಾಸಣೆ, ಕಿವಿ, ಮೂಗು, ಗಂಟಲು, ಸ್ತ್ರೀ ರೋಗ ತಪಾಸಣೆ, ಕ್ಯಾನ್ಸರ್‌ ಇತರೆ ಕಾಯಿಲೆಗಳ ತಪಾಸಣೆ ಮಾಡಿದರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಗೀತಾ ಬ್ಯಾಲ್ಯಾಳ, ರಾಜೇಶ್ವರಿ ಅವರು ಕೊರೊನಾ ಬೂಸ್ಟರ್‌ ಡೋಸ್‌ ಲಸಿಕೆ ನೀಡಿದರು.

Advertisement

ರಾಜಶೇಖರ ವಾಲಿ ಸ್ವಾಗತಿಸಿದರು. ರಾಜಕಿರಣ ಮೆಣಸಿನಕಾಯಿ ನಿರೂಪಿಸಿದರು. ಶಿಬಿರದಲ್ಲಿ 200ಕ್ಕೂ ಹೆಚ್ಚು ವ್ಯಾಪಾರಸ್ಥರು, ರೈತರು, ಕಾರ್ಮಿಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next