ಇಂದು ಹೆಚ್ಚಿನ ಮಕ್ಕಳಲ್ಲಿ ಸಾಮಾಜಿಕ ಅಭದ್ರತೆ ಕಾಡುತ್ತಿರುತ್ತದೆ. ಇದರ ಹಿಂದಿನ ಕಾರಣವನ್ನು ಇತ್ತೀಚೆಗೆ ಅಧ್ಯಯನವೊಂದು ಕಂಡು ಹಿಡಿದಿದೆ. ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಯಾವ ಮಕ್ಕಳ ಜನನದ ಸಮಯದಲ್ಲಿ ತೊಂದರೆ ಉಂಟಾಗಿರುತ್ತದೆಯೋ ಅಂಥ ಮಕ್ಕಳಲ್ಲಿ ಸಾಮಾಜಿಕ ಅಭದ್ರತೆ ಹೆಚ್ಚಾಗಿ ಕಾಡುತ್ತದೆ ಎಂಬುದು ಈ ಅಧ್ಯಯನದಲ್ಲಿ ದೃಢಪಟ್ಟಿದೆ. ಈ ಅಧ್ಯಯನದಲ್ಲಿ 9ರಿಂದ 12 ವರ್ಷದವರೆಗಿನ 149 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Advertisement
ಚಹಾ ಬಿಸಿ ಬಿಸಿಯಾಗಿದ್ದರೆ ಮಾತ್ರ ಸ್ವಾದ ಎನ್ನುತ್ತಾರೆ ಚಹಾ ಪ್ರಿಯರು. ಆದರೆ ಬಿಸಿಯಾದ ಚಹಾ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಸಂಶೋಧನೆ ಯೊಂದರಿಂದ ದೃಢಪಟ್ಟಿದೆ. ಇಂಟರ್‌ನ್ಯಾಶನಲ್ ಜರ್ನಲ್‌ನ ಆಫ್ ಕ್ಯಾನ್ಸರ್ ನಡೆಸಿದ ನೂತನ ಸಂಶೋಧನೆ ಪ್ರಕಾರ ಹೆಚ್ಚು ಬಿಸಿ ಚಹಾ ಕುಡಿಯುವುದರಿಂದ ಅನ್ನನಾಳದ ಕ್ಯಾನ್ಸರ್‌ಗೆ ಆಹ್ವಾನ ಮಾಡಿದಂತೆ ಎಂದು ತಿಳಿಸಿದೆ. ಅಮೆರಿಕ ಕ್ಯಾನ್ಸರ್ ಸೊಸೈಟಿ ನೀಡಿದ ವರದಿ ಪ್ರಕಾರ 17,650 ಅನ್ನನಾಳದ ಕ್ಯಾನ್ಸರ್ ಪತ್ತೆಯಾಗಿದ್ದು, ಇದರಲ್ಲಿ 16,000 ಜನರು ಮರಣ ಹೊಂದಿದ್ದಾರೆ. ಅಲ್ಲದೇ ಆಹಾರದಲ್ಲಿ ಸದಾ ಮಾಂಸ, ಕಡಿಮೆ ಹಣ್ಣು , ತರಕಾರಿ ತಿನ್ನುವುದು ಕೂಡ ಅನ್ನನಾಳದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎನ್ನಲಾಗಿದೆ.