Advertisement

ಹೆಲ್ತ್‌ ಇವರಿಗೆ ವೆಲ್ತ್‌ ; ಸಾಂಕ್ರಾಮಿಕ ಕಾಲದಲ್ಲಿ ಹೆಲ್ತ್‌ಕೇರ್‌ ಗಳಿಕೆ “ಪ್ಲಸ್‌’

01:17 AM Jan 07, 2021 | Team Udayavani |

ಸಾಂಕ್ರಾಮಿಕ ಸೃಷ್ಟಿಸಿದ ಸನ್ನಿವೇಶದಿಂದಾಗಿ 2020ರಲ್ಲಿ ಫಾರ್ಮಾ ಮತ್ತು ಹೆಲ್ತ್‌ಕೇರ್‌ ವಲಯದ “ಬಿಲಿಯನೇರ್‌’ಗಳು ಲಾಭದ ಏಣಿಯೇರಿ ಕುಳಿತಿದ್ದಾರೆ. ಈ ವಲಯದಲ್ಲಿ ಮತ್ತಷ್ಟು ಹೊಸ ಪ್ರವರ್ತಕರು “ಸೂಪರ್‌ ರಿಚ್‌ ಕ್ಲಬ್‌’ ಪ್ರವೇಶಿಸಿದ್ದಾರೆ…

Advertisement

17 ಸೂಪರ್‌ ರಿಚ್‌ ಉದ್ಯಮಿಗಳು!
2020ರಲ್ಲಿ ಫಾರ್ಮಾ ಮತ್ತು ಹೆಲ್ತ್‌ಕೇರ್‌ ರಂಗದಲ್ಲಿ 17 ಆಗರ್ಭ ಶ್ರೀಮಂತರು ಹೊರಹೊಮ್ಮಿದ್ದಾರೆ. 2019ರಲ್ಲಿ ಈ ಸಂಖ್ಯೆ ಕೇವಲ 10 ಇತ್ತು! ಈ 17 ಮಂದಿಯ ಸಂಯೋಜಿತ ಸಂಪತ್ತು 4,35,000 ಕೋಟಿ ರೂ.! ಅಂದರೆ, 2019ಕ್ಕೆ ಹೋಲಿಸಿದರೆ, 2020ರಲ್ಲಿ ಈ ಕ್ಲಬ್‌ ಶೇ.61ರಷ್ಟು ಲಾಭ ಕಂಡಿದೆ. ಅಂದರೆ, ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ 1,35,000 ಕೋಟಿ ರೂ. ಬೊಕ್ಕಸಕ್ಕೆ ಬಿದ್ದಿದೆ!

ಲಾಭ ಆಗಿದ್ದು ಹೇಗೆ?
ಔಷಧ ತಯಾರಕರು, ಹಾಸ್ಪಿಟಲ್‌ ಆಪರೇಟರ್‌ಗಳು, ಡಯಾಗ್ನಾಸ್ಟಿಕ್‌ ಸಂಸ್ಥೆಗಳು, ಕೆಮಿಕಲ್‌ ಕಂಪೆನಿಗಳ ಷೇರುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದೇ, ಇವರ ಲಾಭಕ್ಕೆ ಪ್ರಮುಖ ಕಾರಣ. ಅಲ್ಲದೆ, ಸರಕಾರಗಳು ಈ ವಲಯದಲ್ಲಿ ಹೆಚ್ಚು ಹೂಡಿಕೆ ಮಾಡಿದ್ದರಿಂದಾಗಿ ಉತ್ಪನ್ನಗಳ ಮಾರಾಟದಿಂದಲೂ ಲಾಭ ಕಂಡುಕೊಂಡಿದ್ದಾರೆ.


Advertisement

Udayavani is now on Telegram. Click here to join our channel and stay updated with the latest news.

Next