Advertisement
ಪಿತ್ತದ ಸಮಸ್ಯೆ ಇರುವವರು ತಮ್ಮ ಆಹಾರ ಕ್ರಮಗಳಲ್ಲಿ ಸ್ಪಲ್ಪ ಬದಲಾವಣೆಗಳನ್ನು ಮಾಡಿಕೊಂಡರೂ ಅಜೀರ್ಣ, ಎದೆ ಮತ್ತು ಗಂಟಲಿನಲ್ಲಿ ಉರಿ ಅನುಭವ, ತಲೆ ಸುತ್ತು, ಹುಳಿತೇಗು, ವಾಂತಿ ಮುಂತಾದ ವಿವಿಧ ಬಗೆಯ ಸಮಸ್ಯೆಗಳಿಂದ ಬಳಲುತ್ತಾರೆ.
Related Articles
- ನೆಲ್ಲಿ ಕಾಯಿ ಚೂರ್ಣವನ್ನು ಅಥವಾ ನೆಲ್ಲಿಕಾಯಿಯ ರಸವನ್ನು ಸೇವನೆ ಮಾಡುವುದರಿಂದ ಪಿತ್ತದ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದಾಗಿದೆ.
- ಕಡಲೆಕಾಯಿ ಸಿಪ್ಪೆಯ ಚೂರ್ಣವನ್ನು ತಯಾರಿಸಿಕೊಂಡು ಅದಕ್ಕೆ ಸಕ್ಕರೆ ಬೆರೆಸಿ, ತುಪ್ಪದಲ್ಲಿ ಕಲಸಿ ಸೇವಿಸಿದರೆ ಪಿತ್ತದ ಸಮಸ್ಯೆ ಶಮನವಾಗುತ್ತದೆ.( ಎರಡು ವಾರ ಎರಡು ಹೊತ್ತು )
- ಅಮೃತ ಬಳ್ಳಿಯ ರಸವನ್ನು ಸೇವಿಸುವುದು ಪಿತ್ತ ಸಮಸ್ಯೆ ದೂರವಾಗುತ್ತದೆ.
Advertisement
ಈ ಎಲ್ಲಾ ವಸ್ತುಗಳಷ್ಟೇ ಅಲ್ಲದೆ, ದಾಳಿಂಬೆ ರಸ, ಬೇಲದ ಹಣ್ಣಿನ ರಸ, ಲಿಂಬೆ ರಸ, ಹೇರಳೆ ಹಣ್ಣಿನ(ಕಂಚಿಕಾಯಿ)ರಸವನ್ನು ಸೇವಿಸುವುದರಿಂದಲೂ ಪಿತ್ತದ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.