Advertisement

ಮೂತ್ರಕೋಶದ ಕಲ್ಲಿನ ನಿವಾರಣೆಗೆ ಬಾಳೆ ದಿಂಡಿನ ಪಲ್ಯ

04:55 PM Feb 09, 2021 | Team Udayavani |

ಮನುಷ್ಯನ ದೇಹದ  ಆರೋಗ್ಯವನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುವಲ್ಲಿ ಹಲವು ನೈಸರ್ಗಿಕ  ಆಹಾರ ಉತ್ಪನ್ನಗಳು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅಂತಹ ನೈಸರ್ಗಿಕ  ಆಹಾರ ಉತ್ಪನ್ನಗಳಲ್ಲಿ  ಬಾಳೆ ಕೂಡಾ ಒಂದು.

Advertisement

ಬಾಳೆ ಹಣ್ಣನ್ನು ಸೇವಿಸುವುದರಿಂದ ದೇಹದ ತೂಕ ನಿರ್ವಹಣೆ ಸೇರಿದಂತೆ ಹಲವು ಉಪಯೋಗಗಳಿವೆ. ಇನ್ನು ಬಾಳೆ ಎಲೆಯಲ್ಲಿ ಊಟ ಮಾಡುವುದೂ ಕೂಡಾ ಆರೋಗ್ಯಕ್ಕೆ ಪೂರಕವಾದ  ಅಂಶವಾಗಿದೆ. ಈ ನಡುವೆ ಬಾಳೆ ದಿಂಡಿನ ಪಲ್ಯ ಕೂಡಾ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ.

ಬಾಳೆ ದಿಂಡಿನ ಪಲ್ಯ ವನ್ನು ಸೇವಿಸುವುದರಿಂದ ರಕ್ತ ಶುದ್ಧೀಕರಣ, ಮೂತ್ರಕೋಶದ ಕಲ್ಲಿನ ನಿವಾರಣೆ ಮತ್ತು ಕರಳಿನಲ್ಲಿ ಸಿಕ್ಕಿಹಾಕಿಕೊಂಡಿರುವ ಕೂದಲಿನ್ನು ಹೊರ ಹಾಕುವಲ್ಲಿ ಸಹಾಯಕವಾಗಿದೆ.

ಬಾಳೆ ದಿಂಡಿನ ಪಲ್ಯ ಮಾಡಲು ಬೇಕಾಗುವ ಸಾಮಾಗ್ರಿಗಳು

ಬಾಳೆ ದಿಂಡು, ಜೀರಿಗೆ, ಕೊತ್ತಂಬರಿ ಕಾಳು, ಉದ್ದಿನ ಬೇಳೆ, ಕಡಲೆ ಬೆಳೆ, ಎಣ್ಣೆ, ಸಾಸಿವೆ, ಬೆಳ್ಳುಳ್ಳಿ,ತೆಂಗಿನ ಕಾಯಿ, ಕರಿಬೇವು ಮತ್ತು ಉಪ್ಪು.

Advertisement

ಬಾಳೆ ದಿಂಡಿನ ಪಲ್ಯ ಮಾಡುವ ವಿಧಾನ

ಮೊದಲು ಬಾಳೆ ದಿಂಡನ್ನು ಸುಲಿದು ಮೇಲಿನ ಸಿಪ್ಪೆ ತೆಗೆದುಕೊಂಡು, ಸಣ್ಣ ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ. (ತುಂಡುಗಳನ್ನು ಮಾಡುವಾಗ ನೂಲಿನಂತಹ ಅಂಶ ಸಿಗುತ್ತದೆ ಅದನ್ನು ಬೇರ್ಪಡಿಕೊಳ್ಳಿ) ನಂತರ ಸಣ್ಣ ಬೆಂಕಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಿ.

ಒಂದು ಚಮಚ ಜೀರಿಗೆ, ಒಂದು ಚಮಚ ಕೊತ್ತಂಬರಿ ಕಾಳು, ಒಂದು ಚಮಚ ಉದ್ದಿನ ಬೇಳೆ, ಒಂದು ಚಮಚ ಕಡಲೆ ಬೇಳೆ ಯನ್ನು ಹುರಿದುಕೊಂಡು ತುರಿದ  ತೆಂಗಿನ ಕಾಯಿ ಯನ್ನು ಸೇರಿಸಿ ಪುಡಿ ಮಾಡಿಕೊಳ್ಳಿ.

ಇದನ್ನೂ ಓದಿ:ತೆರಿಗೆ ಸಂಗ್ರಹದಲ್ಲಿ ಸುಧಾರಣೆ, ಮಾರ್ಚ್ ಮೊದಲ ವಾರ ರಾಜ್ಯ ಬಜೆಟ್ ಮಂಡನೆ: ಸಿಎಂ

ಹೀಗೆ ಪುಡಿ ಮಾಡಿಕೊಂಡ ಸಾಮಾಗ್ರಿಗಳಿಗೆ ಹುರಿದ ಬಾಳೆ ದಿಂಡನ್ನು ಸೇರಿಸಿ ಎರಡು ಲೋಟದಷ್ಟು ನೀರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಬೆರಸಿ ಕುದಿಸಿ. ನಂತರ ಸ್ಪಲ್ಪ   ಎಣ್ಣೆಯನ್ನು ಕಾಯಿಸಿ ಅದಕ್ಕೆ ಸಾಸಿವೆ ಬೆಳ್ಳುಳ್ಳಿ ಹಾಗೂ ಕರಿ ಬೇವಿನ ಸೊಪ್ಪನ್ನು ಸೇರಿಸಿ ಒಗ್ಗರಣೆ ತಯಾರಿಸಿಕೊಂಡು ಮಿಶ್ರಣಕ್ಕೆ ಹಾಕಿ.

-ಶಾಂತಿ ಕೊಡಚಾದ್ರಿ

 

Advertisement

Udayavani is now on Telegram. Click here to join our channel and stay updated with the latest news.

Next