Advertisement

 ಆರೋಗ್ಯ ಸಂಜೀವಿನಿ ಈ ಶುಂಠಿ- ಜೀರಿಗೆ ಕಷಾಯ

08:12 PM Feb 02, 2021 | Team Udayavani |

ಚಳಿಗಾಲ, ಮಳೆಗಾಲವನ್ನು ಒಳಗೊಂಡಂತೆ ವಾತಾವರಣದ ಬದಲಾವಣೆಯಿಂದ ಶೀತ ಜ್ವರದಂತಹ ಸಮಸ್ಯೆಗಳು ಎಲ್ಲರನ್ನೂ ಬಾಧಿಸುತ್ತವೆ.   ಈ ಸಮಯದಲ್ಲಿ ಆರೋಗ್ಯವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳುವುದು ಅತೀ ಮುಖ್ಯ . ಕೋವಿಡ್ ಆರಂಭದ ನಂತರವಂತೂ ಈ ಹಿಂದೆ ಸಾಮಾನ್ಯವಾಗಿದ್ದ ಶೀತ ಜ್ವರಗಳಿಗೂ ಜನರು ಹೆದರುವಂತಾಗಿದೆ.

Advertisement

ತಂಪಿನ ವಾತಾವರಣದಿಂದಾಗಿ ಆರೋಗ್ಯವನ್ನು ಬಾಧಿಸುವ ಸಾಮಾನ್ಯ ಶೀತ, ಜ್ವರದಂತಹ ಸಮಸ್ಯೆಗಳಿಗೆ ಮನೆಯಲ್ಲಿಯೇ ತಯಾರಿಸಬಹುದಾದ ಶುಂಠಿ- ಜೀರಿಗೆ ಕಷಾಯವು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಶುಂಠಿ- ಜೀರಿಗೆ ಕಷಾಯ ಮಾಡಲು ಬೇಕಾಗುವ ಸಾಮಾಗ್ರಿಗಳು

ಶುಂಠಿ, ಜೀರಿಗೆ, ಕಾಳು ಮೆಣಸು, ಕೊತ್ತಂಬರಿ, ತುಳಸಿ, ಲವಂಗ, ನೆಲನೆಲ್ಲಿ, ಅರಶಿಣ, ಬೆಲ್ಲ

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಎಸಿಬಿ ಶಾಕ್: ಮಂಗಳೂರು ಸೇರಿದಂತೆ ರಾಜ್ಯದ 7 ಕಡೆಗಳಲ್ಲಿ ದಾಳಿ

Advertisement

ಮಾಡುವ ವಿಧಾನ

ಎರಡು ಲೋಟ ಕಷಾಯವನ್ನು ಮಾಡಲು ಎರಡು ಸಣ್ಣ ತುಂಡುಗಳಷ್ಟು ಶುಂಠಿ, ಒಂದು ಚಮಚ ಕಾಳುಮೆಣಸಿನ ಪುಡಿ, ಒಂದು ಚಮಚ ಜೀರಿಗೆ, ಒಂದು ಚಮಚ ಕೊತ್ತಂಬರಿ, ಹತ್ತು ತುಳಸಿ ಎಲೆ, ಎರಡು ಲವಂಗ, 2 ಏಲಕ್ಕಿ ಗೆ  ಒಂದು ಚಮಚ ಅರಶಿಣವನ್ನು ಬೆರಸಿ ಪುಡಿ ಮಾಡಿಕೊಳ್ಳಿ. ಹೀಗೆ ತಯಾರಿಸಲಾದ ಪುಡಿಗೆ ರೋಗ ನಿರೋಧಕ  ಶಕ್ತಿಯನ್ನು ಒಳಗೊಂಡಿರುವ ನೆಲನೆಲ್ಲಿ ಗಿಡದ ಸೊಪ್ಪನ್ನು ಪುಡಿ ಮಾಡಿ ಸೇರಿಸಿ. ನಂತರ ಎರಡು ಲೋಟ ನೀರಿಗೆ ಈ  ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ಹೀಗೆ ಕುದಿಸಿದ ನಂತರ ಸ್ವಲ್ಪ ಬೆಲ್ಲವನ್ನು ಸೇರಿಸಬಹುದು. (ಮಧುಮೇಹಿಗಳು ಬೆಲ್ಲವನ್ನು ಬೆರಸದೆ ಕುಡಿಯುವುದು ಉತ್ತಮ)

ಶಾಂತಿ ಕೊಡಚಾದ್ರಿ

Advertisement

Udayavani is now on Telegram. Click here to join our channel and stay updated with the latest news.

Next