Advertisement
ಭರತನಾಟ್ಯ ಪ್ರೌಢಿಮೆಯನ್ನು ಕುರಿತು ಜಕ್ಕನ ಕವಿ ಅದ್ಭುತವಾಗಿ ವರ್ಣಿಸುತ್ತಲೇ, ನಾಟ್ಯಶಾಸ್ತ್ರದ ಎಷ್ಟೋ ರಹಸ್ಯಗಳನ್ನು ಕೂಡ ತನ್ನ ಗ್ರಂಥದಲ್ಲಿ ಬರೆದಿದ್ದಾನೆ. ಸಾಹಿತ್ಯದ ಭಾವಕ್ಕೆ ಸರಿ ತೂಗುವಂತಹ ಹಸ್ತಮುದ್ರಿಕೆಗಳನ್ನು ಊರ್ವಶಿ ನಯನಾನಂದಕರವಾಗಿ ಅಂದು ಪ್ರದರ್ಶಿಸಿದಳೆಂದು, ನಾಟ್ಯದ ಸೂಕ್ತ ಭಾವ ಭಂಗಿಗಳು, ತಾಳ ವೈವಿಧ್ಯವನ್ನು ತನ್ನ ಕಾಲಿನ ಅಂದುಗೆಗಳ ಧ್ವನಿಗೆ ಸಮನ್ವಯಿಸುತ್ತಾ ತನ್ನ ನಾಟ್ಯವನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದಳಂತೆ, ತಾಳ, ನೃತ್ಯ, ಭಂಗಿಗಳಿಗೆ ಪ್ರಾಣಾಧಾರವಾದ ಆಂಗಿಕ ಅಭಿನಯ, ನೇತ್ರವಿಲಾಸ, ಪಾದ ವಿನ್ಯಾಸಗಳಿಗಿರುವ ಪ್ರಾಧಾನ್ಯತೆಯನ್ನು ತನ್ನ ಗ್ರಂಥದಲ್ಲಿ ಅರ್ವಶಿಯ ನಾಟ್ಯದ ಮೂಲಕ ಜಕ್ಕನ ಕವಿ ತಿಳಿಸಿದ್ದಾನೆ.
Related Articles
Advertisement
ನಮ್ಮ ದೇಶದಲ್ಲಿ ಶಾಸ್ತ್ರೀಯ ನೃತ್ಯಗಳ ಜತೆಗೆ ಜಾನಪದ ನಾಟ್ಯರೂಪಗಳೂ ಪ್ರಚುರ ಪಡೆದಿವೆ. ಸಾಧಾರಣ ವ್ಯಾಯಾಮಗಳಿಗೆ ಹೋಲಿಸಿದರೆ ನೃತ್ಯದ ಅಭ್ಯಾಸದಿಂದ ಮೆದುಳಿನಲ್ಲಿಯ ‘ಹಿಪ್ಪೋಕ್ಷಾಂಪಸ್’ ಭಾಗವು ಚೆನ್ನಾಗಿ ಅಭಿವೃದ್ಧಿಯಾಗಿ ಮುಪ್ಪನ್ನು ಮುಂದೂಡುತ್ತದೆಯಂತೆ. ಇದರ ಜತೆಗೆ ನಾಟ್ಯದಿಂದ ದೇಹ, ದೇಹದ ಎಲ್ಲ ಅಂಗಾಂಗಗಳು ದೃಢವಾಗಿ, ಆರೋಗ್ಯಕರವಾಗಿರುತ್ತವೆಯೆಂದು ಅವರು ಹೇಳುತ್ತಾರೆ. ಮುಪ್ಪನ್ನು ಮುಂದೂಡುವುದಕ್ಕಿಂತ ಸಂತೋಷದ ಕೆಲಸ ಬದುಕಿನಲ್ಲಿ ಯಾವುದಿರುತ್ತದೆ ಹೇಳಿ? ಸುಂದರವಾದ, ದೃಢವಾದ, ಆರೋಗ್ಯಕರವಾದ ದೇಹ ಯಾರಿಗೆ, ತಾನೇ ಬೇಡ? ಹಾಗಾಗಿ ಪ್ರತಿಯೊಬ್ಬರೂ ಯಾವುದಾದರೂ ಒಂದು ರೀತಿಯ ನಾಟ್ಯವನ್ನು ಕಲಿತು ಆರೋಗ್ಯಕರವಾಗಿರುವುದು ಬಹಳ ಒಳ್ಳೆಯದೆಂದು ತಜ್ಞರ ಅಭಿಪ್ರಾಯ.
- ಸೌಮ್ಯಾ ಕಾಗಲ್
ಬಸವೇಶ್ವರ ಕಲಾ ಮಹಾವಿದ್ಯಾಲಯ
ಬಾಗಲಕೋಟೆ