ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಠಾತ್ ಆಗಿ ಶೀತ, ಕೆಮ್ಮಿನಂತಹ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
ಈ ಹಿನ್ನೆಲೆಯಲ್ಲಿ ಕೆಲವು ಯೋಗಾಸನಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ವೃಕ್ಷಾಸನ: ನೇರವಾಗಿ ನಿಂತುಕೊಳ್ಳಿ ಮತ್ತು ಮುಂದೆ ಯಾವುದಾದರೂ ವಸ್ತುವಿನ ಮೇಲೆ ನೇರ ದೃಷ್ಟಿಯನ್ನಿಡಲು ಪ್ರಯತ್ನಿಸಿ. ನಿಧಾನವಾಗಿ ಉಸಿರಾಡಿ ಮತ್ತು ಎಡದ ಕಾಲನ್ನು ಮೇಲಕ್ಕೆತ್ತಿ ಮತ್ತು ಇದನ್ನು ಬಲದ ತೊಡೆಯ ಮೇಲಿಡಿ. ಎಡದ ಮೊಣಕಾಲು ಹೊರಗಡೆ ನೋಡುತ್ತಲಿರಲಿ. ಸ್ಥಿರವಾಗಿರುವಾಗ ಕೈಗಳನ್ನು ಬಿಡುಗಡೆ ಮಾಡಿ. ಉಸಿರಾಡಿ ಮತ್ತು ನಿಧಾನವಾಗಿ ಕೈಗಳನ್ನು ಹಾಗೆ ತಲೆಯಿಂದ ಮೇಲಕ್ಕೆತ್ತಿ ಕೈ ಮುಗಿಯಿರಿ. ಉಸಿರನ್ನು ಮೇಲಕ್ಕೆ ಎಳೆದುಕೊಂಡು ಹಾಗೆ ಕೆಲವು ಸೆಕೆಂಡು ಕಾಲ ಇರಿ ಮತ್ತು ನಿಧಾನವಾಗಿ ಸಾಮಾನ್ಯ ಭಂಗಿಗೆ ಬನ್ನಿ.
ಲಾಭಗಳು: ಈ ಆಸನವು ಸಮತೋಲ, ಏಕಾಗ್ರತೆ ಮತ್ತು ಕಾಲುಗಳಲ್ಲಿನ ಸ್ಥಿರತೆ ಸುಧಾರಣೆ ಮಾಡುವುದು. ಜತೆಗೆ ಆತ್ಮವಿಶ್ವಾಸ ಹಾಗೂ ಸ್ವಪ್ರಜ್ಞೆ ನಿರ್ಮಿಸುವುದು.
ಚಕ್ರಾಸನ: ಕೈಗಳು, ಮೊಣಕಾಲುಗಳನ್ನು ಹಾಗೆ ನೆಲದ ಮೇಲಿಡಿ. ಮೊಣಕಾಲುಗಳು ಸೊಂಟದ ಸಮಾನವಾಗಿರಲಿ, ಮೊಣಕೈಯು ಭುಜದ ನೇರಕ್ಕಿರಲಿ. ಉಸಿರಾಡುತ್ತಾ ನೀವು ತಲೆಯನ್ನು ಮೇಲಕ್ಕೆತ್ತಿ, ಹಾಗೆ ಎದೆಯ ಭಾಗವನ್ನು ಬಾಣದಂತೆ ಮೇಲಕ್ಕೆತ್ತಿಕೊಳ್ಳಿ. ಇದನ್ನು 2-3 ಸಲ ಹಾಗೆ ಮಾಡಿ ಮತ್ತು ಉಸಿರನ್ನು ಬಿಡುತ್ತಾ ಹಾಗೆ ಹಿಂದಕ್ಕೆ ಬನ್ನಿ.
ಲಾಭಗಳು: ಈ ಯೋಗಾಸನದಿಂದ ಬೆನ್ನುಹುರಿಯ ಸಮಸ್ಯೆ ಕಡಿಮೆಯಾಗುತ್ತದೆ. ಜತೆಗೆ ಇದು ಕುತ್ತಿಗೆ ಮತ್ತು ಬೆನ್ನಿನ ಭಾಗದಲ್ಲಿ ಕಾಣಿಸಿಕೊಳ್ಳುವ ನೋವನ್ನು ನಿವಾರಿಸುವುದರೊಂದಿಗೆ ಗಂಟುಗಳಲ್ಲಿ ಕಾಣಿಸಿಕೊಳ್ಳುವ ನೋವನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯ ಭಾಗದಲ್ಲಿ ಇರುವಂತಹ ಕೆಲವೊಂದು ಅಂಗಾಂಗಗಳಾಗಿರುವಂತಹ ಕಿಡ್ನಿಗೆ ಒಳ್ಳೆಯದು.