Advertisement

Health Scheme; ಆಯುಷ್ಮಾನ್‌ ಭಾರತ್‌ ವಿಮೆ ಮೊತ್ತ ದುಪ್ಪಟ್ಟು?

12:50 AM Jul 09, 2024 | Team Udayavani |

ಹೊಸದಿಲ್ಲಿ: ನರೇಂದ್ರ ಮೋದಿ 3.0 ಸರಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆಗೆ ಸಿದ್ಧತೆ ನಡೆದಿದ್ದು, “ಆಯುಷ್ಮಾನ್‌ ಭಾರತ್‌’ ವಿಮೆ ಮೊತ್ತವನ್ನು ದುಪ್ಪಟ್ಟು ಅಂದರೆ 10 ಲಕ್ಷ ರೂ.ಗೆ ಹೆಚ್ಚಳದ ಘೋಷಣೆಯನ್ನು ನಿರೀಕ್ಷಿಸಲಾಗುತ್ತಿದೆ! ಜತೆಗೆ, 70 ವರ್ಷ ಮೇಲ್ಪಟ್ಟ ಎಲ್ಲರನ್ನೂ ವಿಮೆ ವ್ಯಾಪ್ತಿಗೆ ಸೇರಿಸುವ ಸಾಧ್ಯತೆಗಳೂ ಇವೆ.

Advertisement

ಆಯುಷ್ಮಾನ್‌ ವಿಮೆ ಮೊತ್ತವನ್ನು ದುಪ್ಪಟ್ಟು ಮಾಡಿದರೆ ಸರಕಾರದ ಖಜಾನೆಗೆ ವರ್ಷಕ್ಕೆ 12,076 ಕೋಟಿ ರೂ. ಹೊರೆ ಯಾಗಲಿದೆ. ಈ ಕುರಿತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ವರದಿ ಸಿದ್ಧಪಡಿಸಿದೆ. ಮುಂದಿನ 3 ವರ್ಷಗಳವರೆಗೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ವಿಮೆ ಮೊತ್ತವನ್ನು ದುಪ್ಪಟ್ಟು ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದು ಜಾರಿಯಾದರೆ ದೇಶದ ಮೂರರ ಎರಡು ಭಾಗದಷ್ಟು ಜನರು ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ.

2024ರ ಮಧ್ಯಾಂತರ ಬಜೆಟ್‌ನಲ್ಲಿ ಕೇಂದ್ರ ಆಯುಷ್ಮಾನ್‌ ಭಾರತ್‌ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗಾಗಿ ಹಂಚಿಕೆಯನ್ನು ಹೆಚ್ಚಿಸಿದೆ. 72 ಸಾವಿರ ಕೋಟಿ ರೂ. ವೆಚ್ಚದಲ್ಲಿ ಇದು 12 ಕೋಟಿ ಕುಟುಂಬಗಳಿಗೆ ದ್ವಿತೀಯ ಮತ್ತು ತೃತೀಯ ಆರೈಕೆ ಆಸ್ಪತ್ರೆಗೆ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ಆರೋಗ್ಯ ವಿಮೆ ಒದಗಿಸುತ್ತದೆ. ಆಯುಷ್ಮಾನ್‌ ಭಾರತ್‌ ಆರೋಗ್ಯ ಮೂಲಸೌಕರ್ಯ ಮಿಷನ್‌ ಕೇಂದ್ರವು 646 ಕೋಟಿ ರೂ. ನಿಗದಿಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next