Advertisement

ಆರೋಗ್ಯ ರಕ್ಷಾ ಸಮಿತಿ: ಸಂಗ್ರಹಿತ ಹಣ ಆ ದಿನವೇ ಜಮೆಗೆ ಆದೇಶ

09:20 PM Jun 20, 2024 | Team Udayavani |

ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಆರೋಗ್ಯ ರಕ್ಷಾ ಸಮಿತಿ ಹಣವನ್ನು ಆಯಾ ದಿನವೇ ಬ್ಯಾಂಕ್‌ ಖಾತೆಗೆ ಜಮೆ ಮಾಡುವಂತೆ ಆರೋಗ್ಯ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಮೂಲಕ ಹಣ ದುರುಪಯೋಗ ತಪ್ಪಿಸಲು ಕ್ರಮ ವಹಿಸಲಾಗಿದೆ.

Advertisement

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಹಣ ದುರ್ಬಳಕೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ಒಪಿಡಿ ಚೀಟಿ ಹಂಚಿಕೆಯಿಂದ ಸಂಗ್ರಹವಾಗುವ ಹಣವನ್ನು ಕಾಲ ಕಾಲಕ್ಕೆ ಡಿಇಒ ಸಿಬಂದಿ ಆಡಳಿತ ವಿಭಾಗದ ಕಾಯಂ ನೌಕರರಿಗೆ ಒಪ್ಪಿಸಬೇಕು. ಅವರು ಆಸ್ಪತ್ರೆಯಲ್ಲಿ ನಮೂದಾಗಿರುವ ಲೆಕ್ಕವನ್ನು ಪರಿಶೀಲನೆ ನಡೆಸಿ, ಮೇಲ್ವಿಚಾರಕ ಸಿಬಂದಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಹಣ ಸಂಗ್ರಹವಾದ 2 ದಿನದೊಳಗೆ ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕು ಎಂದು ಸೂಚಿಸಲಾಗಿದೆ.

ಈ ಪ್ರಕ್ರಿಯೆಯಲ್ಲಿ ಯಾವುದಾದರೂ ತಡವಾಗಿ ಹಣ ಜಮೆ ಮಾಡುವುದು ಅಥವಾ ದುರುಪಯೋಗ ಕಂಡುಬಂದರೆ ಜಿಲ್ಲಾಮಟ್ಟದ ಜಿಲ್ಲಾ ಶಸ್ತ್ರಚಿಕಿತ್ಸಕರು, ತಾಲೂಕು ಮಟ್ಟದ ಅಧಿಕಾರಿಗಳು, ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬಂದಿ ಹಾಗೂ ಅಧಿಕಾರಿ ವರ್ಗ ನೇರ ಹೊಣೆಯಾಗಲಿದೆ. ಇವರ ಮೇಲೆ ಕಾನೂನು ಕ್ರಮ ವಹಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next