ಪ್ರತೀ ವರ್ಷ ಫೆಬ್ರವರಿ ತಿಂಗಳ ಕೊನೆಯ ದಿನಾಂಕವನ್ನು ಅಪರೂಪದ ಕಾಯಿಲೆಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಜನರು ಮತ್ತು ನಿರ್ಧಾರ ರೂಪಕರಲ್ಲಿ ಅಪರೂಪದ ಕಾಯಿಲೆಗಳ ಬಗ್ಗೆ ಮತ್ತು ಅವುಗಳು ರೋಗಿಗಳ ಜೀವನದ ಮೇಲೆ ಬೀರುವ ಪ್ರಭಾವದ ಬಗ್ಗೆ ಅರಿವನ್ನು ಮೂಡಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ.
Advertisement
ಸರಿಸುಮಾರು 7 ಸಾವಿರದಷ್ಟು ಅಪರೂಪದ ಕಾಯಿಲೆಗಳು ಇರಬಹುದು; ವೈಯಕ್ತಿಕ ಕಾಯಿಲೆಗಳು ಅಪರೂಪದಲ್ಲಿ ಇರಬಹುದು, ಜಾಗತಿಕವಾಗಿ ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ 30 ಲಕ್ಷ ಎಂದು ಅಂದಾಜಿಸಲಾಗಿದೆ. ಅಪರೂಪದ ಕಾಯಿಲೆಗಳಲ್ಲಿ ಶೇ. 72ರಷ್ಟು ವಂಶವಾಹಿಯಾಗಿದ್ದು, ಈ ಅಪರೂಪದ ವಂಶವಾಹಿ ಅಪರೂಪದ ಕಾಯಿಲೆಗಳಲ್ಲಿ ಶೇ. 70ರಷ್ಟು ಬಾಲ್ಯದಲ್ಲಿಯೇ ಆರಂಭವಾಗುತ್ತವೆ. ಚಯಾಪಚಯ ಕ್ರಿಯೆಯ ಅಂತರ್ಗತ ಪ್ರಮಾದಗಳು (ಇನ್‌ಬಾರ್ನ್ ಎರರ್ ಆಫ್ ಮೆಟಬಾಲಿಸಂ) ಅಪರೂಪದ ಕಾಯಿಲೆಗಳ ಒಂದು ಸಮುಚ್ಚಯವಾಗಿದ್ದು, ನವಜಾತ ಶಿಶುಗಳಲ್ಲಿ ಮತ್ತು ಶಿಶುಗಳಲ್ಲಿ ಕಂಡುಬರುತ್ತದೆ.
Related Articles
– ವಿವರಣೆ ಇಲ್ಲದ ತೂಕನಷ್ಟ ಅಥವಾ ತೂಕ ಗಳಿಸಿಕೊಳ್ಳದೆ ಇರುವುದು ಮತ್ತು ಶಿಶುಗಳು ಮತ್ತು ಮಕ್ಕಳು ನಿರೀಕ್ಷಿತ ಬೆಳವಣಿಗೆ ಕಾಣದೆ ಇರುವುದು.
– ದಣಿವು ಮತ್ತು ಶಕ್ತಿಯ ಕೊರತೆ
– ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆ ಇರುವುದು
– ಸ್ತನ್ಯಪಾನ, ಆಹಾರ ಸೇವನೆ ಸರಿಯಾಗಿಲ್ಲದಿರುವುದು
– ಹೊಟ್ಟೆಯ ಸಮಸ್ಯೆಗಳು ಅಥವಾ ವಾಂತಿ
– ರಕ್ತದಲ್ಲಿ ಅಮೋನಿಯಾ ಅಥವಾ ಆಮ್ಲ ಇರುವುದು
– ಪಿತ್ತಜನಕಾಂಗದ ಚಟುವಟಿಕೆ ಸರಿಯಾಗಿಲ್ಲದಿರುವುದು
– ಶಿಶುಗಳು ಮತ್ತು ಮಕ್ಕಳಲ್ಲಿ ಬೆಳವಣಿಕೆ ನಿಧಾನವಾಗುವುದು, ಬುದ್ಧಿಮಾಂದ್ಯ
– ಸೆಳವು ಇವುಗಳಲ್ಲಿ ಕೆಲವು ಲಕ್ಷಣಗಳನ್ನು ನವಜಾತ ಶಿಶುಗಳ ಪರೀಕ್ಷೆಯ ವೇಳೆ ಪತ್ತೆ ಮಾಡಬಹುದಾಗಿದೆ.
Advertisement
ನವಜಾತ ಶಿಶು ಪರೀಕ್ಷೆ ಎಂದರೇನು?ನವಜಾತ ಶಿಶುಗಳಲ್ಲಿ ಜನ್ಮಜಾತವಾಗಿ ಇರುವ ಚಯಾಪಚಯ/ ವಂಶವಾಹಿ ಸಮಸ್ಯೆಗಳನ್ನು ಪತ್ತೆಹಚ್ಚಲು ಈ ಮಾದರಿಯ ರಕ್ತಪರೀಕ್ಷೆಗಳನ್ನು ನಡೆಸಲಾಗುತ್ತದೆ. ನವಜಾತ ಶಿಶು ತಪಾಸಣೆಯು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಸಾಮಾನ್ಯವಾಗಿರುವ ಅಥವಾ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಚಯಾಪಚಯ/ ವಂಶವಾಹಿ ಸಮಸ್ಯೆಗಳನ್ನು ಪತ್ತೆಹಚ್ಚುವ ಪರೀಕ್ಷೆಗಳ ಗುತ್ಛವನ್ನು ಒಳಗೊಂಡಿರುತ್ತದೆ. ಲಕ್ಷಣಾಧಾರಿತವಾಗಿ ಅಥವಾ ವೈದ್ಯಕೀಯವಾಗಿ ಪತ್ತೆಯಾದಲ್ಲಿ ಭೌಗೋಳಿಕವಾಗಿ ಅಪರೂಪಕ್ಕೆ ಗುರುತಿಸಲ್ಪಡುವ ಇತರ ಅನಾರೋಗ್ಯಗಳಿಗಾಗಿಯೂ ಪರೀಕ್ಷೆಗಳನ್ನು ನಿರ್ದಿಷ್ಟ ಮಗುವಿನ ಅಗತ್ಯಗಳಿಗೆ ಅನುಸಾರವಾಗಿ ನಡೆಸಲಾಗುತ್ತದೆ. ಆದರೆ ರೂಢಿಗತ ನವಜಾತ ಶಿಶು ಪರೀಕ್ಷೆಗಳು ಈ ಅತ್ಯಂತ ಅಪರೂಪವಾಗಿ ಗುರುತಿಸಲ್ಪಡುವ ಕಾಯಿಲೆಗಳ ಸಮೂಹದ ಪರೀಕ್ಷೆಗಳನ್ನು ಒಳಗೊಳ್ಳುವುದಿಲ್ಲ. ನವಜಾತ ಶಿಶು ಪರೀಕ್ಷೆಯನ್ನು
ಯಾಕೆ ನಡೆಸಲೇಬೇಕು?
– ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕಿಂತ ಮುನ್ನವೇ ಅನಾರೋಗ್ಯಗಳನ್ನು ಪತ್ತೆ ಮಾಡಲು.
– ಬೇಗ ಚಿಕಿತ್ಸೆ ನೀಡಿ ದೀರ್ಘಕಾಲದಲ್ಲಿ ಉಂಟಾಗ ಬಲ್ಲ ಸರಿಪಡಿಸಲಾದ ನರಶಾಸ್ತ್ರೀಯ ಮತ್ತು ಬೆಳವಣಿಗೆ ಸಂಬಂಧಿಸಿ ಹಾನಿಗಳನ್ನು ತಪ್ಪಿಸಲು. ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ
ನವಜಾತ ಶಿಶು ಪರೀಕ್ಷೆ ಪ್ಯಾನೆಲ್
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನವಜಾತ ಶಿಶು ವಿಭಾಗದ ಪರೀಕ್ಷಾ ತಂಡವು ಕರಾವಳಿ ಪ್ರದೇಶದಲ್ಲಿ ಸಾಮಾನ್ಯವಾಗಿ ಪತ್ತೆಯಾಗುವ ಚಯಾಪಚಯ (ಜೀರ್ಣಕ್ರಿಯೆಗೆ ಸಂಬಂಧಿಸಿದ) ಪರೀಕ್ಷೆಗಳನ್ನು ನವಜಾತ ಶಿಶುಗಳಿಗೆ ನಡೆಸುತ್ತದೆ. ಇವುಗಳಲ್ಲಿ ಜನ್ಮಜಾತವಾಗಿ ಕಂಡುಬರುವ ತೀವ್ರತರದ ಗಳಗಂಡ ರೋಗ ಲಕ್ಷಣಗಳು ಅಥವಾ ಹೈಪೋಥೈರಾಡಿಸಂ, ಅಡ್ರಿನಲ್ ಗ್ರಂಥಿಯಲ್ಲಿ ಕಂಡುಬರುವ ಸಮಸ್ಯೆಗಳು (ಅಡ್ರಿನಲ್ ಹೈಪರ್‌ಪ್ಲಾಸಿಯ-ಸಿ. ಎ. ಎಚ್ ), ಕಾಮಾಲೆ ಕಾಯಿಲೆ ಅಥವಾ ಜಾಂಡಿಸ್ ಲಕ್ಷಣಗಳು ಪಿತ್ತಜನಕಾಂಗದ ಅಸಮರ್ಪಕ ಕಾರ್ಯವೈಖರಿಯಿಂದ ಕಂಡುಬರುವ ಗ್ಯಾಲಕ್ಟೋಸೇವಿಯಾ, ಅತೀ ಅಪರೂಪ ಅಂದರೆ ಲಕ್ಷಕ್ಕೆ ಒಂದು ಶಿಶುವಿನಲ್ಲಿ ಪ್ರೊಟೀನ್ ಕೊರತೆಯಿಂದ ಕಂಡುಬರುವ ಫೇನಿಲ್ಕೆಟೊನೂರಿಯ, ವಿಟಮಿನ್ ಕೊರತೆಯಿಂದ ಕಂಡುಬರುವ ಬಯೋಟಿನಿಡೇಸ್ ಕಾಯಿಲೆ ಲಕ್ಷಣಗಳು ಮತ್ತು ಅಮೈನೋ ಲವಣಗಳ ಅಸಹಜತೆಯಿಂದ ಉಂಟಾಗುವ ಎಂ.ಎಸ್.ಯು.ಡಿ ಅಥವಾ ಕಾಯಿಲೆ ಲಕ್ಷಣಗಳು ಸಾಮಾನ್ಯವಾಗಿವೆ. ನವಜಾತ ಶಿಶು ಪರೀಕ್ಷೆಯ
ವರದಿ ಪಾಸಿಟಿವ್ ಆಗಿದ್ದಲ್ಲಿ ಏನು
ಮಾಡಲಾಗುತ್ತದೆ?
ನವಜಾತ ಶಿಶು ಪರೀಕ್ಷೆ ನಡೆಸಲಾದ ಯಾವುದೇ ಅಪರೂಪದ ಕಾಯಿಲೆಗೆ ಶಿಶು ಪಾಸಿಟಿವ್ ವರದಿ ಬಂದಿದ್ದಲ್ಲಿ ಹಾನಿಯನ್ನು ತಡೆಯಲು ತತ್‌ಕ್ಷಣ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದಲ್ಲದೆ ರೋಗಪತ್ತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಪರೀಕ್ಷೆ ನಡೆಸಲಾಗುತ್ತದೆ.
ಈ ಚಯಾಪಚಯ ಕ್ರಿಯೆಯ ಸಮಸ್ಯೆಗಳಿಗೆ ಚಿಕಿತ್ಸೆಯ ಆಯ್ಕೆಗಳೇನು?
ಚಯಾಪಚಯ ಕ್ರಿಯೆಯ ಸಮಸ್ಯೆಗಳಿಗೆ ಚಿಕಿತ್ಸೆಯು ನಿರ್ದಿಷ್ಟ ರೋಗಸ್ಥಿತಿಯನ್ನು ಅವಲಂಬಿಸಿರುತ್ತದೆ. ಸಾಮಾನ್ಯ ಚಿಕಿತ್ಸೆಗಳು ಈ ಕೆಳಗಿನಂತಿವೆ:
– ಆಹಾರಾಭ್ಯಾಸ ಮತ್ತು ಜೀವನಶೈಲಿಯಲ್ಲಿ ಬದಲಾವಣೆ: ದೇಹವು ನಿರ್ವಹಿಸಲು ಮತ್ತು ಅರಗಿಸಿಕೊಳ್ಳಲು ಸಾಧ್ಯವಾಗದ ಕೆಲವು ನಿರ್ದಿಷ್ಟ ಆಹಾರಗಳನ್ನು ವರ್ಜಿಸುವುದು.
– ಔಷಧ: ನಿರ್ದಿಷ್ಟ ಲಕ್ಷಣಗಳನ್ನು ನಿಯಂತ್ರಿಸಲು, ಹೆಚ್ಚು ಆರೋಗ್ಯವಾಗಲು ಮತ್ತು ಮಾರಣಾಂತಿಕವಾದ ತುರ್ತುಪರಿಸ್ಥಿತಿಗಳನ್ನು ದೂರ ಮಾಡಲು ಔಷಧಗಳನ್ನು ಉಪಯೋಗಿಸಲಾಗುತ್ತದೆ.
– ಕಿಣ್ವ ಬದಲಾವಣೆ ಚಿಕಿತ್ಸೆ: ಕಿಣ್ವ ಇಲ್ಲದಿರುವ ಅಥವಾ ಕಡಿಮೆ ಇರುವ ಸಮಸ್ಯೆಯನ್ನು ಪರಿಹರಿಸಲು ಇಂಜೆಕ್ಷನ್ ನೀಡುವುದರಿಂದ ಕೆಲವು ನಿರ್ದಿಷ್ಟ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ.
ಆರೋಗ್ಯಯುತ ಶಿಶುಜನನ ಪ್ರತೀ ತಾಯ್ತಂದೆಯ ಕನಸಾಗಿರುತ್ತದೆ ಮತ್ತು ನಮ್ಮ ಭವಿಷ್ಯದ ಆಧಾರ ಸ್ತಂಭವಾಗಿರುತ್ತದೆ. ಚಯಾಪಚಯ ಕ್ರಿಯೆಯ ಅಪರೂಪವಾದ ಕಾಯಿಲೆಗಳ ಪರೀಕ್ಷೆಯನ್ನು ನಡೆಸುವ ಮೂಲಕ ಪ್ರತೀ ನವಜಾತ ಶಿಶುವಿನ ಸಮಗ್ರ ಸೌಖ್ಯ ಮತ್ತು ಕ್ಷೇಮವನ್ನು ಖಚಿತಪಡಿಸಿಕೊಳ್ಳುವುದು ಅವರ ಆರೋಗ್ಯವನ್ನು ಭದ್ರಪಡಿಸಿಕೊಳ್ಳುವಲ್ಲಿ ನಿರ್ಣಾಯಕ ವಾಗಿದೆ. ಮಾತ್ರವಲ್ಲದೆ ಅವರಿಗೆ ಯಾವುದೇ ವಿಧ ವಾದ ಐಎಂಡಿ ಬಾಧಿಸಿದ್ದರೂ ಅತ್ಯುತ್ತಮ ಗುಣ ಮಟ್ಟದ ಜೀವನವನ್ನು ಖಾತರಿಪಡಿಸುವುದಕ್ಕೆ ಮುಖ್ಯ ವಾಗಿರುತ್ತದೆ. ಆದರೆ ಹೆತ್ತವರು ಮತ್ತು ಶಿಶುವಿಗೆ ಪ್ರಾಥಮಿಕ ಆರೈಕೆಯನ್ನು ಒದಗಿಸುವವರಲ್ಲಿ ಅರಿವು ಮೂಡಿಸುವುದು, ವೈದ್ಯಕೀಯ ಪರೀಕ್ಷೆ ಸೌಲಭ್ಯಗಳ ಲಭ್ಯತೆ, ಪರೀಕ್ಷೆಗಳು ಮತ್ತು ಖಚಿತಪಡಿಸಿಕೊಳ್ಳುವ ಪರೀಕ್ಷೆಗಳು ಕೈಗೆಟಕುವಂತಿರುವುದರ ಸಹಿತ ಈ ನಿಟ್ಟಿನಲ್ಲಿ ಆಗಬೇಕಾದ್ದು ಇನ್ನೂ ಬಹಳವಿದೆ. ಚಿಕಿತ್ಸಾತ್ಮಕ ಕ್ರಮಗಳು, “ವಿಶೇಷ ಮಕ್ಕಳ’ ಬಗ್ಗೆ ಸಮಾಜದಲ್ಲಿರುವ ವಕ್ರದೃಷ್ಟಿಯನ್ನು ಹೋಗಲಾಡಿಸುವುದು, ಚಿಕಿತ್ಸೆಗೆ ಒಳಪಡುವುದು ಮತ್ತು ಅನುಸರಣೆಗಾಗಿ ಆಪ್ತಸಮಾ ಲೋಚನೆ ಅಗತ್ಯವಾಗಿದೆ. ಕಳೆದ ಕೆಲವು ದಶಕಗಳಲ್ಲಿ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸಾಕಷ್ಟು ಮುನ್ನಡೆ ಸಾಧಿಸ ಲಾಗಿದೆ. ಎಲ್ಲ ಭಾಗೀದಾರಿಗಳ ಸಕ್ರಿಯ ಪ್ರಯತ್ನಗಳ ಮೂಲಕ “ಪ್ರತೀ ನವಜಾತ ಶಿಶುವಿಗೂ ಪರೀಕ್ಷೆ ಮತ್ತು ಅತ್ಯುತ್ತಮ ಆರೋಗ್ಯ ಆರೈಕೆಯನ್ನು ಒದಗಿಸುವ’ ನಮ್ಮ ಗುರಿಯನ್ನು ಸಾಧಿಸಬಲ್ಲೆವೆಂಬ ವಿಶ್ವಾಸವಿದೆ.
ಪ್ರತೀ ನವಜಾತ ಶಿಶುವನ್ನೂ ಭೌಗೋಳಿಕವಾಗಿ ಇರುವ ಐಇಎಂಗಳಿಗಾಗಿ ಪರೀಕ್ಷೆಗೆ ಒಳಪಡಿಸಬೇಕು, ಏಕೆಂದರೆ, “ಪ್ರತೀ ಶಿಶು, ಪ್ರತೀ ಬದುಕು ಕೂಡ ಅತ್ಯಮೂಲ್ಯವಾಗಿದೆ’. ನವಜಾತ ಶಿಶು ಪರೀಕ್ಷೆಯನ್ನು ಹೇಗೆ ನಡೆಸಲಾಗುತ್ತದೆ?
– ವಿಶೇಷ ಪೇಪರ್ ಒಂದರಲ್ಲಿ ನವಜಾತ ಶಿಶುವಿನ ಹಿಮ್ಮಡಿಯಿಂದ ತೆಗೆಯಲಾದ ಕೆಲವು ಹನಿ ರಕ್ತದಿಂದ.
– ಪರೀಕ್ಷೆ ನಡೆಸಲು ಸೂಕ್ತವಾದ ಸಮಯ 48ರಿಂದ 72 ತಾಸುಗಳು ಡಾ| ಲೆಸ್ಲಿ ಎಡ್ವರ್ಡ್ ಲೂಯಿಸ್
ಪ್ರೊಫೆಸರ್ ಮತ್ತು ಹೆಡ್, ಕೊಆರ್ಡಿನೇಟರ್, ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ನ್ಯೂಬಾರ್ನ್ ಎರರ್ ಆಫ್ ಮೆಟಬಾಲಿಸಂ, ಪೀಡಿಯಾಟ್ರಿಕ್ಸ್ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ
ವೈ.ಎಸ್. ಫಣೀಂದ್ರ ಎಂ.
ರಿಸರ್ಚ್ ಸ್ಕಾಲರ್, ಪೀಡಿಯಾಟ್ರಿಕ್ಸ್ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ