Advertisement

e-cigarettes ಮಾರಾಟ; 15 ವೆಬ್‌ಸೈಟ್‌ಗಳಿಗೆ ನೋಟಿಸ್‌ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ

07:43 PM Jul 18, 2023 | Team Udayavani |

ನವದೆಹಲಿ: ಭಾರತದಲ್ಲಿ ನಿಷೇಧಿತ ಇ-ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿರುವ 15 ವೆಬ್‌ಸೈಟ್‌ಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ನೋಟಿಸ್ ಕಳುಹಿಸಿದ್ದು, ಉತ್ಪನ್ನಗಳ ಜಾಹೀರಾತು ಮತ್ತು ಮಾರಾಟವನ್ನು ನಿಲ್ಲಿಸುವಂತೆ ಸೂಚಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಇ-ಸಿಗರೇಟ್‌ಗಳ ಜಾಹೀರಾತು ಮತ್ತು ಮಾರಾಟವನ್ನು ಸಚಿವಾಲಯವು 6 ವೆಬ್‌ಸೈಟ್‌ಗಳ ಮೇಲೆ ನಿಗಾ ಇರಿಸಲಾಗಿದೆ ಮತ್ತು ಶೀಘ್ರದಲ್ಲೇ ಅವರಿಗೆ ನೋಟಿಸ್‌ ನೀಡುವ ಸಾಧ್ಯತೆಗಳಿವೆ.

15 ವೆಬ್‌ಸೈಟ್‌ಗಳಿಗೆ ನೋಟಿಸ್ ನೀಡಿದ್ದು,ಅದರಲ್ಲಿ ನಾಲ್ಕು ವೆಬ್‌ಸೈಟ್‌ಗಳು ಈಗಾಗಲೇ ತಮ್ಮ ಕಾರ್ಯಾ ಚಟುವಟಿಕೆಗಳನ್ನು ನಿಲ್ಲಿಸಿವೆ. ಉಳಿದ ವೆಬ್‌ಸೈಟ್‌ ಗಳು ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಜ್ಯದ ಯಾವುದೇ ಭಾಗದಲ್ಲಿ ಇ-ಸಿಗರೇಟ್‌ ಉತ್ಪಾದನೆ, ಆಮದು, ವಿತರಣೆ, ಮಾರಾಟ ಹಾಗೂ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next