ಮಂಗಳೂರು: ನರ್ಸಿಂಗ್ ಹೋಮ್ಸ್ ಆ್ಯಂಡ್ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಪದಾಧಿಕಾರಿಗಳ ಜತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ನಗರದಲ್ಲಿ ಮಂಗಳವಾರ ಮಹತ್ವದ ಸಭೆ ನಡೆಸಿದರು.
ಈಗಾಗಲೇ ಜಾರಿಯಲ್ಲಿರುವ ಆಯುಷ್ಮಾನ್ ಭಾರತ ಯೋಜನೆಯ ಆಸ್ಪತ್ರೆ ರೆಫರಲ್ ವ್ಯವಸ್ಥೆ ಸರಿಪಡಿಸುವ ಕುರಿತು ಸಚಿವರದಲ್ಲಿ ಮನವಿ ಮಾಡಲಾಯಿತು. ಅಲ್ಲದೆ ಟ್ರೇಡ್ ಲೈಸನ್ಸ್ ನವೀಕರಣ, ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ವಿಮೆ ಹೆಚ್ಚಳ, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿಯ ನಿರಾಕ್ಷೇಪಣ ಪತ್ರ ಪಡೆಯುವಲ್ಲಿ ಇರುವ ತೊಂದರೆ ಸರಿಪಡಿಸಬೇಕು ಸಹಿತ ವಿವಿಧ ವಿಚಾರಗಳ ಬಗ್ಗೆ ಸಚಿವರ ಗಮನಕ್ಕೆ
ತರಲಾಯಿತು.
ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರಕಾರದೊಂದಿಗೆ ಖಾಸಗಿ ವಲಯದ ಸಹಕಾರವೂ ಅಗತ್ಯವಾಗಿ ಈ ನಿಟ್ಟಿನಲ್ಲಿ ಕುಂದು ಕೊರತೆ ಆಲಿಸಿದ್ದು, ಸರಕಾರದ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳ ಪ್ರಮುಖರು ಸಭೆಯಲ್ಲಿದ್ದರು.