Advertisement
ಹೆಚ್ಚು ಹಾವಳಿ: ಕಳೆದ ಒಂದು ತಿಂಗಳ ಹಿಂದೆ ನಗರದಲ್ಲಿ ನಕಲಿ ವೈದ್ಯನೊಬ್ಬ ರೋಗಿಗಳಿಗೆ ಬಟ್ಟೆ ಮೇಲೆ ಚುಚ್ಚು ಮದ್ದು ನೀಡಿದ ಘಟನೆ ಜಿಲ್ಲೆಯ ರೋಗಿಗಳನ್ನು ಬೆಚ್ಚಿ ಬೀಳಿಸಿತ್ತು. ಈ ಬೆಳವಣಿಗೆ ಮಾಸುವ ಮುನ್ನವೇ ಇದೀಗ ಜಿಲ್ಲೆಯಲ್ಲಿ ಹಳ್ಳಿಗಳಲ್ಲಿ ಎಗ್ಗಿಲ್ಲದೇ ನಕಲಿ ವೈದ್ಯರ ಹಾವಳಿ ಹೆಚ್ಚಿಕೊಳ್ಳಲು ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ಸಿಂದಗಿ, ಇಂಡಿ, ದೇವರಹಿಪ್ಪರಗಿ, ತಾಳಿಕೋಟೆ, ಮುದ್ದೇಬಿಹಾಳ ತಾಲೂಕಿನ ಭಾಗದಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದೆ.
ಕನಿಷ್ಠ ಸಾಮಾನ್ಯ ಪದವಿಯನ್ನೂ ಪಡೆಯದೇ ತಮ್ಮನ್ನು ತಾವು ವೈದ್ಯರೆಂದು ಬಿಂಬಿಸಿಕೊಳ್ಳುತ್ತ ಅಮಾಯಕ ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಅಚ್ಚರಿ ಸಂಗತಿ ಎಂದರೆ ನಕಲಿ ವೈದ್ಯರ ಹಾವಳಿ ನಿಯಂತ್ರಣಕ್ಕೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮುಂದಾದರೂ, ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯರೇ ನಕಲಿ ವೈದ್ಯರ ನೆರವಿಗೆ ನಿಂತು ರಕ್ಷಣೆ ನೀಡುತ್ತಿರುವುದು ನಕಲಿ ವೈದ್ಯರ ಲಾಬಿಗೆ ಸಾಕ್ಷಿ ನೀಡುತ್ತಿದೆ.
Related Articles
Advertisement
ಇದು ಕೂಡ ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ತೊಡಕಾಗುತ್ತಿದೆ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ನಕಲಿ ವೈದ್ಯರಿಂದ ದೊಡ್ಡ ದುರಂತ ಸಂಭವಿಸುವ ಮುನ್ನವೇ ಅಕ್ರಮ ವೈದ್ಯಕೀಯ ಚಟುವಟಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿ¨
ಒಂದು ವಾರದಲ್ಲಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿಗೆ ಕಡಿವಾಣ ಹಾಕಲು ನೋಡಲ್ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ವೈದ್ಯಕೀಯ ತಂಡ ರಚಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಬರುವ 10 ದಿನಗಳಲ್ಲಿ ನಕಲಿ ವೈದ್ಯರು ತಕ್ಷಣ ಚಟುವಟಿಕೆ ನಿಲ್ಲಿಸಲು ಗಡುವು ನೀಡಲಾಗುತ್ತದೆ. ಆಗಲೂ ತಮ್ಮ ಅಕ್ರಮ ದಂಧೆ ನಿಲ್ಲಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ. ಡಾ| ಮಹೇಂದ್ರ ಕಾಪ್ಸೆ ಡಿಎಚ್‌ಒ, ವಿಜಯಪುರ ಜಿ.ಎಸ್. ಕಮತರ