Advertisement
ಮುಂಬರುವ ಹಬ್ಬಗಳ ಋತುವನ್ನು ಗಮನದಲ್ಲಿ ಇರಿಸಿಕೊಂಡು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್ ಈ ಸಲಹೆ ನೀಡಿದ್ದಾರೆ. ದೇಶಾದ್ಯಂತ ಕೊರೊನಾ ವ್ಯಾಪಿಸುವಿಕೆ ಮುಂದುವರಿದಿರುವ ಕಾರಣ ದೇಶವಾಸಿಗಳು ತಮ್ಮ ಸುರಕ್ಷೆಯೊಂದಿಗೆ ರಾಜಿ ಮಾಡಿಕೊಳ್ಳಬಾರದು ಎಂಬ ಸದುದ್ದೇಶದಿಂದ ಅವರು ಈ ಹಿತವಚನ ಹೇಳಿದ್ದಾರೆ.
ಮನೆಯ ಹೊರಗೆ ಬೆಂಕಿ ಇದೆ ಎಂಬುದು ಗೊತ್ತಿದ್ದರೂ ಧರ್ಮ ಹೇಳುತ್ತದೆ ಎಂದು ನಾವು ಹೊರಗೆ ಹೋಗುವುದಿಲ್ಲ. ಜೀವಗಳನ್ನು ಅಪಾಯಕ್ಕೆ ತಳ್ಳಿ ಹಬ್ಬಗಳನ್ನು ಆಚರಿಸಬೇಕು ಎಂದು ಯಾವ ಧರ್ಮವೂ ಹೇಳುವುದಿಲ್ಲ. ಪ್ರಸ್ತುತ ನಮ್ಮೆಲ್ಲರ ಗುರಿ ಒಂದೇ – ಕೊರೊನಾ ಸೋಂಕನ್ನು ನಾಶ ಮಾಡುವುದು. ಅದನ್ನೇ ನಮ್ಮ ಧರ್ಮವೆಂದು ಭಾವಿಸೋಣ. ಮನೆಗಳಲ್ಲೇ ಇದ್ದು ಕುಟುಂಬ ಸದಸ್ಯರ ಜತೆಗೂಡಿ ಹಬ್ಬದ ಸಂಭ್ರಮವನ್ನು ಸವಿಯೋಣ ಎಂದು ಹರ್ಷವರ್ಧನ್ ಕರೆ ನೀಡಿದ್ದಾರೆ.