Advertisement
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಿಪಕ್ಷಗಳು ಹೇಳಿದ್ದನ್ನೆಲ್ಲಾ ಅಲ್ಲಗಳೆಯಲ್ಲು ಆಗಲ್ಲ. ಮುಂದುವರೆದ ದೇಶಗಳಲ್ಲೂ ಹೆಚ್ಚು ಸಾವುಗಳಾಗಿವೆ. ಅಲ್ಲಿನ ಸರ್ಕಾರಗಳು ವಿಫಲ ಅಂತ ಹೇಳಬಹುದಾ? ಹಾಗೆ ಹೇಳಲು ಆಗಲ್ಲ ಸದ್ಯದ ಕ್ರಮಗಳು ಸಾಲೋದಿಲ್ಲ ಅಂತ ಒಪ್ಪುತ್ತೇನೆ. ಆರೋಗ್ಯ ಮೂಲಭೂತ ಸೌಕರ್ಯ ಒದಗಿಸಿದ್ದೀವಿ ಆದರೆ ಓವರ್ ನೈಟ್ ವೈದ್ಯರನ್ನು ಸೃಷ್ಟಿಸಲು ಆಗಲ್ಲ ಎಂದರು.
Related Articles
Advertisement
ಜನ ಗುಂಪು ಸೇರಬಾರದು. ಗುಂಪು ಸೇರೋದ್ರಿಂದಲೇ ಕೋವಿಡ್ ಬರ್ತಿರೋದು. ಕ್ಲೋಸ್ಡ್ ಸರ್ಕ್ಯೂಟ್ ನಲ್ಲಿ ಗುಂಪಿದ್ರೆ ಗಾಳಿ ಮೂಲಕವೂ ವೈರಸ್ ಹರಡುತ್ತದೆ. ಡ್ರಾಪ್ ಲೆಟ್ ಗಳ ಮೂಲಕವೂ ಹರಡುತ್ತದೆ. ಇದಕ್ಕೆ ಕಡಿವಾಣ ಹಾಕಲು ಕಠಿಣ ನಿಯಮಗಳನ್ನು ಜಾರಿ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಶಾಸಕ ರೇಣುಕಾಚಾರ್ಯ ಕುರಿತು ಮಾತಾನಾಡಿದ ಅವರು, ರೇಣುಕಾಚಾರ್ಯ ವಿಚಾರ ನನಗೆ ಗೊತ್ತಿಲ್ಲ ಅದರ ಮಾಹಿತಿ ಪಡೆದು ಮಾತಾನಾಡುತ್ತೇನೆ. ಬಹುಶ: ಅವರು ಬೇರೆ ಆಸ್ಪತ್ರೆಗೆ ದಾಖಲಾಗಲು ಬಂದಿರಬಹುದು. ಪಾಸಿಟಿವ್ ರೋಗಿಗಳನ್ನು ಒಂದೆಡೆಯಿಂದ ಮತ್ತೊಂದು ಕಡೆಗೆ ನಾವೇ ಬೇರೆ ಕಡೆ ಶಿಫ್ಟ್ ಮಾಡಿದ್ದೀವಿ ಖುದ್ದು ಅವರೇ ಬಂದಿರುವ ಬಗ್ಗೆ ತಿಳ್ಕೊಂಡು ಮಾತಾಡ್ತೇನೆ ಎಂದು ಹೇಳಿದರು.