Advertisement
ಜಿಲ್ಲಾ ಸರ್ವೇಕ್ಷಣ ಘಟಕದ ವತಿಯಿಂದ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ವೆನ್ಲ್ಯಾಕ್ ನ ನೂತನ ಕಟ್ಟಡದಲ್ಲಿ ಆರಂಭಿಸಲಾದ ಪ್ರಯೋಗಾಲಯವನ್ನು ಸಚಿವ ಯು.ಟಿ. ಖಾದರ್ ಮಂಗಳವಾರ ಉದ್ಘಾಟಿಸಿದರು. ತಾಂತ್ರಿಕ ಉಪ ಕರಣಗಳು ಕೆಲವೇ ದಿನಗಳಲ್ಲಿ ಕೇಂದ್ರಕ್ಕೆ ಬರಲಿವೆ. ಬಳಿಕ ಖಾಸಗಿ ಪ್ರಯೋಗಾಲಯಗಳ ಅವಲಂಬನೆ ತಪ್ಪಲಿದೆ.
ಹೊಸದಿಲ್ಲಿಯ ಕೇಂದ್ರ ಕಣ್ಗಾವಲು ಘಟಕ, ಬೆಂಗಳೂರಿನ ರಾಜ್ಯ ಕಣ್ಗಾವಲು ಘಟಕದ ನಿಯಮಾನುಸಾರ ಈ ಪ್ರಯೋಗಾಲಯದಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕೂನ್‌ಗುನ್ಯಾ, ಇಲಿಜ್ವರ, ಕಾಮಾಲೆ, ಟೈಫಾಯ್ಡ, ಟೈಫಸ್, ಮಲೇರಿಯಾ ಪರೀಕ್ಷೆ ನಡೆಸಲಾಗುವುದು. ರುಬೆಲಾ, ಮೀಸೆಲ್ಸ್, ಎಚ್1ಎನ್1, ಎಬೋಲಾ, ನಿಫಾ, ಜಿಕಾ ರೋಗಿಯ ಪ್ರಯೋಗಾ ಲಯ ಮಾದರಿಗಳನ್ನು ತಜ್ಞ ವೈದ್ಯರು ಸಂಗ್ರಹಿಸಿ ಮಣಿಪಾಲ, ಬೆಂಗಳೂರು, ಹೊಸದಿಲ್ಲಿಯ ಉನ್ನತ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಪಡೆಯುವ ಸೌಲಭ್ಯವಿದೆ. ಜಿಲ್ಲೆಯ ಎಲ್ಲ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ನೀರಿನ ಬ್ಯಾಕ್ಟೀರಿಯಾ ಲಜಿಕಲ್ ಪರೀಕ್ಷೆ ಮಾಡಲು ಅಗತ್ಯ ಸಾಧನಗಳು, ಮಲೇರಿಯಾ ಪರೀಕ್ಷೆಗೆ ಜೆಎಸ್‌ಬಿ ಸ್ಟೈನ್ ಅನ್ನು ನೂತನ ಕೇಂದ್ರದಲ್ಲಿ ತಯಾರಿಸಲಾಗುತ್ತದೆ.