Advertisement
ಕೋವಿಡ್ ಕವಚ : ಇದು ಒಂದು ಕೋವಿಡ್ ಪರೀಕ್ಷೆ ಪಾಸಿಟಿವ್ ಬಂದ ರೋಗಿಗೆ ಆಸ್ಪತ್ರೆ ಖರ್ಚನ್ನು ಆತ ಮಾಡಿದ ವಿಮಾ ಮೊತ್ತಕ್ಕೆ ಅನುಗುಣವಾಗಿ ಮರುಪಾವತಿಸುವ Indemnity ಪಾಲಿಸಿಯಾಗಿದೆ. ಈ ಪಾಲಿಸಿಯ ವೈಶಿಷ್ಟ್ಯವೆಂದರೆ ಕೋವಿಡ್ ರೋಗಿಯು ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಪಡೆದ 14 ದಿನಗಳ ಚಿಕಿತ್ಸೆಗೆ ಸಹ ಮರುಪಾವತಿ ನೀಡುವುದು. ಅಲ್ಲದೇ ಆಯುಷ್ ಚಿಕಿತ್ಸೆ, ಆಸ್ಪತ್ರೆಗೆ ಸೇರುವ ಮೊದಲಿನ ದಿನಗಳ ಹಾಗೂ ಅನಂತರದ ದಿನಗಳ ವೆಚ್ಚವನ್ನು ಸಹ ಮರುಪಾವತಿಸಲಾಗುವುದು. ಈ ಪಾಲಿಸಿಯಲ್ಲಿ ಮೂರೂವರೆ (105 ದಿನ), ಆರೂವರೆ (195 ದಿನ) ಮತ್ತು ಒಂಬತುವರೆ ತಿಂಗಳ (285 ದಿನಗಳು) ಅಲ್ಪಾವಧಿ ವಿಮಾ ಸೌಲಭ್ಯ ವಿಮೆ ಪರಿಹಾರ ಮೊತ್ತ ಕನಿಷ್ಠ 50 ಸಾವಿರದಿಂದ ಗರಿಷ್ಠ 5 ಲಕ್ಷ ರೂ. ವರೆಗೆ ಇದೆ. ವೈಯಕ್ತಿಕ ಪಾಲಿಸಿಗಳು ಅಲ್ಲದೆ ಕುಟುಂಬ ಸದಸ್ಯರಿಗೆ ಸಹ ವಿಮೆ ಸೌಲಭ್ಯಗಳನ್ನು ಒಳಗೊಂಡ Family Floater ಪಾಲಿಸಿಗಳು ಸಹ ಲಭ್ಯವಿವೆ. ಪಾಲಿಸಿ ಪಡೆದುಕೊಂಡ 15 ದಿನಗಳ ಅನಂತರ ಸಕ್ರಿಯಗೊಳ್ಳುತ್ತವೆ.
Related Articles
Advertisement
ಕೋವಿಡ್ – 19 ಸಮಯದಲ್ಲಿ ವಿಮೆಗಳು ಸರಕಾರದ ಉದ್ಯೋಗಿಗಳಿಗೆ ಆರೋಗ್ಯ ವಿಮೆ ಸೌಲಭ್ಯ ದೊರಕಿತು. ಅನಂತರ ಅದೇ ರೀತಿಯಲ್ಲಿ ರಾಜ್ಯ ಸರಕಾರದ ಉದ್ಯೋಗಿಗಳಿಗೆ, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬಂದಿಗೆ ಆರೋಗ್ಯ ವಿಮೆ ಸೌಲಭ್ಯ ಸಿಗಲಾರಂಭಿಸಿತು. 1956ರಲ್ಲಿ ದೇಶದಲ್ಲಿ ವಿಮಾ ವ್ಯವಹಾರವು ರಾಷ್ಟ್ರೀಕರಣಗೊಂಡ ಮೇಲೆ ಎಲ್.ಐ.ಸಿ., ಜಿ.ಐ.ಸಿ. ಸಂಸ್ಥೆಗಳು ನಿಗದಿತ ಪ್ರೀಮಿಯಂ ಪಾವತಿಗೆ ಅನುಗುಣವಾಗಿ ಸಾಮಾನ್ಯ ವಿಮೆ ಸೇವೆಗಳನ್ನು ಪ್ರಾರಂಭಿಸಿದವು. 1999ರಲ್ಲಿ ವಿಮಾ ಕಂಪೆನಿಗಳ ನಿಯಂತ್ರಕ ಸಂಸ್ಥೆ (ಐ.ಆರ್.ಡಿ.ಎ.ಐ.) ಸ್ಥಾಪನೆಗೊಂಡ ಅನಂತರ ಹಲವಾರು ಖಾಸಗಿ ಕಂಪೆನಿಗಳು ವಿಮಾ ಸೇವೆ/ ಆರೋಗ್ಯ ವಿಮಾ ಸೇವೆ ನಿಗದಿತ ಪ್ರೀಮಿಯಂ ಪಾವತಿಗೆ ಅನುಸಾರವಾಗಿ ನೀಡಲಾರಂಭಿಸಿವೆ. 2018ರಲ್ಲಿ ಭಾರತ ಸರಕಾರವು ಮುಖ್ಯವಾಗಿ ಬಡತನ ರೇಖೆಗಿಂತ ಕೆಳಗಿರುವವರಿಗೆ (SECC – 2011, ಕರ್ನಾಟಕದಲ್ಲಿ ಬಿ.ಪಿ.ಎಲ್. ಕಾರ್ಡ್ ಹೊಂದಿದವರಿಗೆ) ಆಯುಷ್ಮಾನ್ ಭಾರತ್ ಎಂಬ ಆರೋಗ್ಯ ಭರವಸೆ (Assurance) ಯೋಜನೆಯನ್ನು ಜಾರಿಗೊಳಿಸಿದೆ. ಈಗ ಈ ಮೇಲೆ ಕಾಣಿಸಿದ ವರ್ಗದವರನ್ನು ಬಿಟ್ಟು ಉಳಿದ ಕೆಳ ಮಧ್ಯಮ, ಮಧ್ಯಮ ವರ್ಗದವರಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯಬಿದ್ದಲ್ಲಿ ಸರಕಾರಿ ಆಸ್ಪತ್ರೆಗಳನ್ನು ಅಥವಾ ಆರೋಗ್ಯ ವಿಮೆ ಹೊಂದಿರುವ ಅಗತ್ಯ ಹೆಚ್ಚಾಗಿದೆ.
ವಿಮಾ ಕಂಪೆನಿಗಳು ತಮ್ಮ ಪಾಲಿಸಿಗಳಿಗೆ ಸಂಬಂಧಿಸಿದಂತೆ ನೀಡುವ ಜಾಹೀರಾತುಗಳು ಸ್ಪಷ್ಟವಾಗಿ ಇರುವುದಿಲ್ಲ ಹಾಗೂ ಕ್ಲಿಷ್ಟಕರ ಭಾಷೆಯಲ್ಲಿ ಇರುತ್ತದೆ. ಇದರಿಂದ ಸಾಮಾನ್ಯ ಗ್ರಾಹಕರು ಗೊಂದಲಕ್ಕೀಡಾಗುವ ಸಂದರ್ಭಗಳು ಹೆಚ್ಚು. ಆದ್ದರಿಂದ ಐ.ಆರ್.ಡಿ.ಐ. ಎಲ್ಲಾ ವಿಮಾ ಕಂಪೆನಿಗಳಿಗೆ ಅಕ್ಟೋಬರ್ 1, 2020ರಿಂದ ಅನ್ವಯವಾಗುವಂತೆ ವಿಮಾ ನಿಯಮಗಳನ್ನು ಗ್ರಾಹಕ ಸ್ನೇಹಿಯಾಗಿರುವ ಬದಲಾವಣೆಗಳನ್ನು ಮಾಡುವಂತೆ ಮಾರ್ಗದರ್ಶಿ ನೀಡಿದೆ. ಆ ಪ್ರಕಾರ ವಿಮಾ ಕಂಪೆನಿಗಳು ಪಾಲಿಸಿಯ ವಿವರ, ಷರತ್ತುಗಳು ಮತ್ತು ಪಾಲಿಸಿಯ ಪ್ರಯೋಜನಗಳನ್ನು ಸ್ಪಷ್ಟವಾಗಿ ವಿವರಿಸುವ ಮಾಹಿತಿಗಳನ್ನು ಸರಳ ಭಾಷೆಯಲ್ಲಿ ಪಾಲಿಸಿದಾರರಿಗೆ ನೀಡಬೇಕು. ಅದೇ ತೆರನಾಗಿ ಆರೋಗ್ಯ ವಿಮೆಗಳ ಮಹತ್ವದ ನಿಬಂಧನೆಗಳನ್ನು ಸರಳಗೊಳಿಸುವುದು ಅದರಿಂದಾಗಿ ಗ್ರಾಹಕರಿಗೆ ವಿಮಾ ಪಾಲಿಸಿಗಳನ್ನು, ಪ್ರಯೋಜನಗಳನ್ನು ಅರಿತುಕೊಳ್ಳಲು ಸುಲಭ ಹಾಗೂ ಇತರ ಪಾಲಿಸಿಗಳ ಜೊತೆ ತುಲನೆ ಮಾಡಲು ಸರಳವಾಗಲಿದೆ.
ಟರ್ಮ್ ಇನೂರೆನ್ಸ್ : ಇದೊಂದು ಡೆತ್ ಬೆನಿಫಿಟ್ ಇರುವ ಪಾಲಿಸಿಯಾಗಿದ್ದು ವಿಮಾ ಮೊತ್ತ ಇತರ ಸಾಂಪ್ರದಾಯಿಕ ವಿಮಾ ಪ್ರೀಮಿಯಂ ಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಇರುತ್ತದೆ. ವಿಮಾ ಕಂಪೆನಿಗಳು ವಿಮಾ ಮೊತ್ತವನ್ನು ಮಾನವ ಜೀವನದ ಬೆಲೆ (Human Life Value) ಎಂಬ ಪರಿಕಲ್ಪನೆ ಮೇಲೆ ಮಾಡಲಾಗುವುದು. ಉದಾ: 30 ವರ್ಷದ ವ್ಯಕ್ತಿಗೆ ವರ್ಷಕ್ಕೆ ರೂ. 10 ಲಕ್ಷ ಆದಾಯ ಇರುವ ವ್ಯಕ್ತಿಯು ಆದಾಯದ 30 ಪಟ್ಟು ವಿಮಾ ಮೊತ್ತಕ್ಕೆ ವಿಮೆ ಮಾಡಲು ಅರ್ಹರಿರುತ್ತಾರೆ. ವ್ಯಕ್ತಿಗೆ ವಯಸ್ಸು ಹೆಚ್ಚಾದಂತೆ ಹೊಸದಾಗಿ ಈ ವಿಮೆ ಮಾಡಲು ವಿಮೆ ಮೊತ್ತದ ಅರ್ಹತೆ ಕಡಿಮೆಯಾಗುತ್ತದೆ. ಹಾಗೂ ವಾರ್ಷಿಕ ಪ್ರೀಮಿಯಂ ಹೆಚ್ಚಾಗುತ್ತದೆ. ಸಾಮಾನ್ಯವಾಗಿ 10 ಲಕ್ಷ ವಾರ್ಷಿಕ ಆದಾಯವಿರುವ 30 ವರ್ಷದ ವ್ಯಕ್ತಿಯು 30 ವರ್ಷಕ್ಕೆ ಒಂದು ಕೋಟಿ ರೂಪಾಯಿ ವಿಮಾ ಮೊತ್ತ ಬಯಸಿದ್ದಲ್ಲಿ ವಾರ್ಷಿಕ ಸುಮಾರು 15 ಸಾವಿರ ರೂಪಾಯಿ ಪ್ರೀಮಿಯಂ ಕಟ್ಟಬೇಕಾಗಬಹುದು. ಆ ವ್ಯಕ್ತಿಯು 60 ವರ್ಷದ ಒಳಗೆ ಮೃತಪಟ್ಟಲ್ಲಿ ವ್ಯಕ್ತಿಯ ನಾಮಿನಿಗೆ ಒಂದು ಕೋಟಿ ರೂಪಾಯಿ ವಿಮಾ ಮೊತ್ತ ದೊರೆಯುವುದಾದರೆ, ಒಂದು ವೇಳೆ ವ್ಯಕ್ತಿ 60 ವರ್ಷದವರೆಗೆ ಬದುಕಿದ್ದರೆ ಅವರಿಗೆ ಯಾವುದೇ ಮೆಚ್ಯುರಿಟಿ ಬೆನಿಫಿಟ್ ಸಿಗುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮೆಚ್ಯುರಿಟಿ ಬೆನಿಫಿಟ್ ಮತ್ತು ಡೆತ್ ಬೆನಿಫಿಟ್ ಇರುವ ಹೈಬ್ರಿಡ್ ಪಾಲಿಸಿಗಳು ಸ್ವಲ್ಪ ಹೆಚ್ಚು ಪ್ರೀಮಿಯಂಗೆ ಲಭ್ಯವಿವೆ.
30 ವರ್ಷದ ಅದೇ ವ್ಯಕ್ತಿಯು ಸಾಂಪ್ರದಾಯಿಕವಾದ ಪಾಲಿಸಿಗಳಲ್ಲಿ ಒಂದು ಕೋಟಿ ವಿಮಾ ಮೊತ್ತ ಪಡೆಯಬೇಕಾದರೆ ವಾರ್ಷಿಕ ಸುಮಾರು 3 ಲಕ್ಷ ರೂಪಾಯಿಗೂ ಹೆಚ್ಚು ಪ್ರೀಮಿಯಂ ತೆರಬೇಕಾಗುತ್ತದೆ. ಟರ್ಮ್ ವಿಮೆಯ ಪ್ರೀಮಿಯಂ ಒಮ್ಮೆ ಖರೀದಿಸಿದರೆ ವಿಮೆ ಅವಧಿ ಮುಗಿಯುವವರೆಗೆ ಒಂದೇ ಆಗಿರುವುದರಿಂದ ಕಡಿಮೆ ವಯಸ್ಸಿನಲ್ಲಿ ಈ ಪಾಲಿಸಿಯೊಡನೆ ಬರುವ ಗಂಭೀರ ಖಾಯಿಲೆಗಳು, ಅಪಘಾತ ಚಿಕಿತ್ಸೆ ಕವರೇಜ್ ಪ್ಯಾಕೇಜ್ ಸೇರಿಸಿ ಪಡೆದುಕೊಳ್ಳುವುದು ಉತ್ತಮ. ಈ ವಿಮೆಯ ಪ್ರೀಮಿಯಂಗಳನ್ನು ಮಾಸಿಕ, ತ್ತೈಮಾಸಿಕ ಅಥವಾ ವರ್ಷಕ್ಕೊಮ್ಮೆ ಪಾವತಿಸಬಹುದು. ಒಂದು ವೇಳೆ ಪಾಲಿಸಿದಾರರಿಗೆ ಗಂಭೀರ ಖಾಯಿಲೆ, ಶಾಶ್ವತ ಅಂಗವೈಕಲ್ಯ ಉಂಟಾದರೆ ಮುಂದೆ ಆ ಪಾಲಿಸಿಯ ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಆದರೆ ಆ
ಪಾಲಿಸಿಯ ಎಲ್ಲಾ ಬೆನಿಫಿಟ್‌ಗಳು ಹಾಗೆಯೇ ವಿಮಾ ಅವಧಿ ಮುಗಿಯುವರೆಗೆ ಮುಂದುವರಿಯುವುದು. ಈ ಎಲ್ಲಾ ವಿಮೆಗಳಿಗೆ ಕಟ್ಟಿದ ಪ್ರೀಮಿಯಂ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ಸಹ ಇದೆ.
ಆರೋಗ್ಯ ವಿಮೆಗಳು : ಗಮನಿಸಬೇಕಾದ ಅಂಶಗಳು :
ಮಾರುಕಟ್ಟೆಯಲ್ಲಿ ಇಂದು ಹಲವಾರು ವಿಮಾ ಕಂಪೆನಿಗಳ ಹಲವಾರು ತೆರನಾದ ಆರೋಗ್ಯ ವಿಮೆ ಪಾಲಿಸಿಗಳಿವೆ. ಈ ಎಲ್ಲ ಪಾಲಿಸಿಗಳು ಅವುಗಳದ್ದೇ ಆದ ಉದ್ದೇಶ, ಸ್ವರೂಪ ಹಾಗೂ ಪ್ರೀಮಿಯಂ ದರ ಹೊಂದಿದೆ. ಆದ್ದರಿಂದ ಪ್ರತೀ ವ್ಯಕ್ತಿ ಅವನಿಗೆ ಅಥವಾ ಅವನ ಕುಟುಂಬಕ್ಕೆ ಸರಿ ಹೊಂದುವ ಆರೋಗ್ಯ ವಿಮೆ ಕೊಳ್ಳುವುದು ಬಲು ಗೊಂದಲಮಯವಾದ ಕೆಲಸವಾಗಿದೆ. ಆರೋಗ್ಯ ವಿಮೆ ಕೊಳ್ಳುವಾಗ ಸಾಮಾನ್ಯವಾಗಿ ಗಮನ ನೀಡಬೇಕಾದ ಅಂಶಗಳೆಂದರೆ –
- ನೀವು ಸಾಮಾನ್ಯವಾಗಿ ಚಿಕಿತ್ಸೆ ಬಯಸುವ ಆಸ್ಪತ್ರೆಗಳಲ್ಲಿ ಆ ವಿಮಾ ಕಂಪೆನಿಯ ಸೇವಾ ಲಭ್ಯತೆ.
- ಪಾಲಿಸಿಯ ಅಡಿಯಲ್ಲಿ ಕವರ್ ಆಗುವ ಕಾಯಿಲೆಗಳ ಚಿಕಿತ್ಸೆಗಳು. ಪಾಲಿಸಿಯ ಅಡಿಯಲ್ಲಿ ಕವರ್ ಆಗದೇ ಇರುವ ಚಿಕಿತ್ಸೆಗಳು , ಸೇವೆಗಳು.
- ಆಸ್ಪತ್ರೆಗೆ ದಾಖಲಾದರೆ ಸಿಗುವ ಕೊಠಡಿ, ಐಸಿಯುಗಳ ದೈನಂದಿನ ವೆಚ್ಚದ ಮರುಪಾವತಿ ಮಿತಿ.
- ವಿಮೆ ಖರೀದಿ ಮಾಡುವಾಗ ಆದಾಗಲೇ ಇರುವ ಕಾಯಿಲೆಗಳ ಚಿಕಿತ್ಸೆಗಳ ಮರುಪಾವತಿ ಸೌಲಭ್ಯ.
- ಆಸ್ಪತ್ರೆಗೆ ದಾಖಲಾಗುವ ಮೊದಲಿನ ಕೆಲ ದಿನಗಳ ವೆಚ್ಚ ಹಾಗೂ ಆಸ್ಪತ್ರೆಯಿಂದ ಬಿಡುಗಡೆಯಾದ ಅನಂತರ ಕೆಲ ದಿನಗಳ ವೆಚ್ಚ ಮರುಪಾವತಿ ಲಭ್ಯತೆ.
- ಆಸ್ಪತ್ರೆಗಳ ಟಿಪಿಎಗಳಿಲ್ಲದೇ ಕ್ಯಾಶ್‌ಲೆಸ್ ಇರುವ ಸೇವೆಗಳು.
- ಒ.ಪಿ.ಡಿ. ಸೇವೆಗಳು, ಟೆಲಿ ಮೆಡಿಸಿನ್ ಸೇವೆಗಳ ಮರುಪಾವತಿ ಲಭ್ಯತೆ.
- ಉತ್ತಮ ICR (Incurred Claim Ratio) ಇರುವ ಪಾಲಿಸಿಗಳು.
- ಸ್ಪರ್ಧಾತ್ಮಕವಾಗಿರುವ ಪ್ರೀಮಿಯಂ ಮತ್ತು ಟಾಪ್ ಅಪ್ ಸೌಲಭ್ಯ ಇರುವ ಪಾಲಿಸಿಗಳು ವಯಸ್ಸು ಚಿಕ್ಕದಿದ್ದು ವ್ಯಕ್ತಿಯು ಆರೋಗ್ಯವಾಗಿದ್ದಲ್ಲಿ ಕಡಿಮೆ ಪ್ರೀಮಿಯಂಗೆ ಉತ್ತಮ ಆರೋಗ್ಯ ವಿಮೆ ದೊರಕುತ್ತದೆ. ವಯಸ್ಸು ಹೆಚ್ಚಿದಂತೆ ಕಾಯಿಲೆಗಳು ಆವರಿಸಿದಂತೆ ಪ್ರೀಮಿಯಂ ಮೊತ್ತ ಹೆಚ್ಚಾಗುತ್ತದೆ. ಆರೋಗ್ಯ ವಿಮೆ ಪಾಲಿಸಿಗಳನ್ನು ಕುಟುಂಬದ ಸದಸ್ಯರಿಗೂ ಜತೆಯಾಗಿಕೊಳ್ಳಬಹುದಾಗಿದೆ. ಕುಟುಂಬ ಆರೋಗ್ಯ ವಿಮೆ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳಿರುವ ಕುಟುಂಬಕ್ಕೆ ಸಾಮಾನ್ಯವಾಗಿ ವಾರ್ಷಿಕ 10,000 ರೂ. ಪ್ರೀಮಿಯಂಗೆ ಐದು ಲಕ್ಷ ರೂ.ವರೆಗೆ ವಿಮಾ ಕವರೇಜ್ ಸೌಲಭ್ಯ ಸಿಗಬಹುದು. ಆದರೆ ಬೇರೆ ಬೇರೆ ವಿಮಾ ಕಂಪೆನಿಗಳಲ್ಲಿ ಪ್ರೀಮಿಯಂ ದರ ಬೇರೆ ಬೇರೆ ಆಗಿರುತ್ತದೆ ಹಾಗೂ ಪ್ರತೀ ವರ್ಷ ಆರೋಗ್ಯ ವಿಮೆಯ ಪ್ರೀಮಿಯಂ ಬದಲಾಗುವುದು/ಹೆಚ್ಚಾಗುವುದು.