Advertisement

ವ್ಯಸನಮುಕ್ತ ಯುವಕರಿಂದ ಬಲಿಷ್ಠ ಭಾರತ: ಡಾ|ಭಂಡಾರಿ

07:20 AM Sep 02, 2017 | Team Udayavani |

ಉಡುಪಿ: ವಿಶ್ವದಾದ್ಯಂತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರ್ಧದಷ್ಟು ರೋಗಿಗಳು ವಿವಿಧ ಮಾದಕ ದ್ರವ್ಯ ಸೇವನೆಯಿಂದ ಆರೋಗ್ಯ ಹಾನಿ ಮಾಡಿಕೊಂಡವರಾಗಿದ್ದಾರೆ. ಆರೋಗ್ಯವಂತ ಹಾಗೂ ಸದೃಢ ದೇಶ ಕಟ್ಟಲು ಮಾದಕ ವ್ಯಸನಗಳನ್ನು ತ್ಯಜಿಸಬೇಕಾದ ಅಗತ್ಯವಿದೆ ಎಂದು ಮನೋರೋಗ ತಜ್ಞ ಡಾ| ಪಿ.ವಿ. ಭಂಡಾರಿ ಹೇಳಿದರು.

Advertisement

ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಜರಗಿದ ಸದ್ಭಾವನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಾದಕ ವ್ಯಸನದಿಂದಲೇ ಕೌಟುಂಬಿಕ ಹಿಂಸೆ, ಕೊಲೆ, ಸುಲಿಗೆ, ಅತ್ಯಾಚಾರದಂತ ಅಪರಾಧ, ರಸ್ತೆ ಅಪಘಾತಗಳು ಹೆಚ್ಚಾಗಿರುತ್ತದೆ. ಕಾನೂನು ವಿದ್ಯಾರ್ಥಿಗಳು ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸಬೇಕು ಎಂದರು.

ಪ್ರಾಂಶುಪಾಲ ಪ್ರೊ| ಪ್ರಕಾಶ್‌ ಕಣಿವೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಸಿಸಿಲಿಯಾ ಡಿ’ಸೋಜ, ಎನ್ನೆನ್ನೆಸ್‌ ಯೋಜನಾಧಿಕಾರಿ ಸುರೇಖಾ ಕೆ. ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಮನೋಜ್‌ ಗೌಡ ಸ್ವಾಗತಿಸಿದರು. ಶರತ್‌ ಪ್ರಮಾಣ ವಚನ ಬೋಧಿಸಿದರು. ಸಮತಾ ಕಾರ್ಯಕ್ರಮ ನಿರ್ವಹಿಸಿದರು. ಸೌಮ್ಯಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next