ಮೂಡಬಿದಿರೆ : ಮಾಜಿ ಸೈನಿಕರ ವೇದಿಕೆ ಮೂಡಬಿದಿರೆ, ಮೈತ್ರಿ ಮಹಿಳಾ ಮಂಡಲ ಈದು, ಹಾಗೂ ಶ್ರೀ ಮೂಕಾಂಬಿಕ ಯುವಕ ಸಂಘ ಈದು ಇವುಗಳ ಜಂಟಿ ಆಶ್ರಯದಲ್ಲಿ ಮೂಡಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್‌ನ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರ ಮತ್ತು ಉಚಿತ ಆಳ್ವಾಸ್ ಆರೋಗ್ಯ ಕಾರ್ಡ್ ವಿತರಣೆಯು ಈದು ಗ್ರಾಮದ ಶ್ರೀ ಮೂಜಿಲ್ನಾಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಆಳ್ವಾಸ್ ಹೆಲ್ತ್ ಸೆಂಟರ್ ನಿರ್ದೇಶಕ ಡಾ| ವಿನಯ್ ಆಳ್ವ ಶಿಬಿರವನ್ನು ಉದ್ಘಾಟಿಸಿದರು. ಬಲ್ಯೊಟ್ಟು ಗುರುಕೃಪಾ ಸೇವಾಶ್ರಮದ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನದೊಂದಿಗೆ ಶುಭ ಹಾರೈಸಿದರು. ಕಾರ್ಕಳ ಮಾಜಿ ಶಾಸಕ ಎಚ್. ಗೋಪಾಲ್ ಭಂಡಾರಿ ಮಾತನಾಡಿ, ಆಳ್ವಾಸ್ ಸಂಸ್ಥೆ ಸೇವೆಯನ್ನು ಮೂಲಮಂತ್ರನ್ನಾಗಿಸಿ ನಮ್ಮ ಹಳ್ಳಿಯಲ್ಲಿ ಸೇವೆ ನೀಡುವುದು ಶ್ಲಾಘನೀಯ ಎಂದರು.
ಮಾಜಿ ಸೈನಿಕರ ವೇದಿಕೆ ಮೂಡಬಿದಿರೆ ಅಧ್ಯಕ್ಷ ಲೆ| ರಾಮಚಂದ್ರ ನಾಯ್ಕ, ಈದು ಗ್ರಾ.ಪಂ. ಅಧ್ಯಕ್ಷ ಪುರುಷೋತ್ತಮ್ ರಾವ್, ಮುಜಿಲ್ನಾಯ ಶಾಲೆಯ ಸಂಚಾಲಕ ಪ್ರೇಮ್ ಕುಮಾರ್, ಈದು ಶ್ರೀ ಮೂಜಿಲ್ನಾ ಯ ದೈವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಕುಮಾರ್ ಜೈನ್, ಕಾರ್ಕಳ ಮಹಿಳಾ ಒಕ್ಕೂಟದ ಅಧ್ಯಕ್ಷ ಪ್ರಭಾವತಿ, ಆಳ್ವಾಸ್ ಹೆಲ್ತ್ ಸೆಂಟರ್ ಆಡಳಿತ ಅಧಿಕಾರಿ ಸುಬೇದಾರ್ ಭಾಸ್ಕರ್, ಈದು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವಿಜಯ ಕುಮಾರ್ ಜೈನ್, ಈದು ಮೈತ್ರಿ ಮಹಿಳಾ ಮಂಡಲದ ಅಧ್ಯಕ್ಷೆ ಭಾನು ಭಾಸ್ಕರ್ ಹಾಗೂ ಕಾರ್ಯದರ್ಶಿ ಮಮತಾ, ಈದು ಶ್ರೀ ಮೂಕಾಂಬಿಕ ಯುವಕ ಸಂಘದ ಅಧ್ಯಕ್ಷ ಸತೀಶ್ ಕೋಟ್ಯಾನ್, ಕಾರ್ಯದರ್ಶಿ ಪ್ರವೀಣ್ ಎಸ್.ಪಿ., ಜತೆ ಕಾರ್ಯದರ್ಶಿ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು. ಮಾಜಿ ಸೈನಿಕರನ್ನು ಗೌರವಿಸಲಾಯಿತು. ಮುನ್ನೂರಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಭಾಗವಹಿಸಿದರು. 200ಮಂದಿಗೆ ಆಳ್ವಾಸ್ ಆರೋಗ್ಯ ಕಾರ್ಡ್ ವಿತರಿಸಲಾಯಿತು. ಆಳ್ವಾಸ್ ಹೆಲ್ತ್ ಸೆಂಟರ್‌ನ 12 ಮಂದಿಯ ತಂಡ ಶಿಬಿರವನ್ನು ನಡೆಸಿಕೊಟ್ಟಿತು.
ಈದು ಮಾಜಿ ಅಧ್ಯಕ್ಷ ಮೂಕಾಂಬಿಕ ಯುವಕ ಸಂಘ ನಾರಾಯಣ್ ಪೂಜಾರಿ ಸ್ವಾಗತಿಸಿದರು. ಈದು ಶಾಲಾ ಮುಖ್ಯೋಪಾಧ್ಯಾಯ ಜ್ಞಾನೇಂದ್ರ ಕುಮಾರ್ ಕಾರ್ಯಕ್ರಮ ನಿರ್ವಹಿಸಿ ಈದು ಮೈತ್ರಿ ಮಹಿಳಾ ಮಂಡಲದ ಸದಸ್ಯೆ ಪದ್ಮಜಾ ಶೆಟ್ಟಿ ವಂದಿಸಿದರು. ಉಚಿತ ಆರೋಗ್ಯ ತಪಾಸಣ ಶಿಬಿರದಲ್ಲಿ ಗಣ್ಯರು ಮಾತನಾಡಿದರು.