Advertisement

ಆರೋಗ್ಯ ಕೇಂದ್ರಕ್ಕೆ ಬೀಗ: ಆಕ್ರೋಶ?

11:52 AM Dec 01, 2019 | Team Udayavani |

ಮಂಡ್ಯ: ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮುಚ್ಚಬೇಕೆಂದು ವರದಿ ನೀಡಿರುವುದನ್ನು ಖಂಡಿಸಿ ಶನಿವಾರ ನಗರದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Advertisement

ಸಿಲ್ವರ್‌ ಜ್ಯೂಬಿಲಿ ಉದ್ಯಾನದಲ್ಲಿ ಜಮಾವಣೆಗೊಂಡಗ್ರಾಮಸ್ಥರು, ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆ ತೆರಳಿ ಜಿಲ್ಲಾಡಳಿತ ಮತ್ತು ಜಿಪಂಗೆ ಮನವಿ ಸಲ್ಲಿಸಿದರು.

25 ವರ್ಷದಿಂದ ಗ್ರಾಮದಲ್ಲಿ ಆರೋಗ್ಯ ಕೇಂದ್ರವಿದೆ. ಈ ಭಾಗದ ಜನರಿಗೆ ಅಂದರೆ ಹೆಮ್ಮಿಗೆ, ಶಿಂಗಟಗೆರೆ, ಕಡಿಲವಾಗಿಲು, ಮಾದರಹಳ್ಳಿ, ಹರಳಹಳ್ಳಿ, ಕೆ.ಶೆಟ್ಟಹಳ್ಳಿ,ಅಂಬರಹಳ್ಳಿ ಗ್ರಾಮಸ್ಥರಿಗೆ ಅನುಕೂಲವಾಗಿದೆ. ಆದರೆ,ಈ ನಡುವೆ ಆರೋಗ್ಯ ಇಲಾಖೆ ಕೇಂದ್ರವನ್ನು ಮುಚ್ಚುವ ಸಂಬಂಧ ವರದಿ ಸಲ್ಲಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ಏಳೆಂಟು ಹಳ್ಳಿಯ ನೂರಾರು ಜನರಿಗೆ ಚಿಕಿತ್ಸೆ ನೀಡುತ್ತಿರುವ ಕೇಂದ್ರವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಅಂತೆಯೇ, ಯಥಾಸ್ಥಿತಿಕಾಪಾಡಿಕೊಂಡು ಹೋಗಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಪ್ರತಿಭಟನೆ ಬೇರೆ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ರೈತದ ಸಂಘದ ಅಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್‌, ರವಿ, ಸಿದ್ದಪ್ಪ, ಸಿದ್ದೇಗೌಡ, ಶಂಕರಲಿಂಗಯ್ಯ, ಬಸವರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next