Advertisement

ಅರಣ್ಯದಲ್ಲಿ ಸಂಚರಿಸಿ ಹಾಡಿಗಳಿಗೆ ಚಿಕಿತ್ಸೆ ನೀಡುವ ಆರೋಗ್ಯ ಸಿಬ್ಬಂದಿ

04:05 PM Aug 14, 2021 | Team Udayavani |

ಎಚ್‌.ಡಿ.ಕೋಟೆ:ಕೋವಿಡ್‌ ಸಂದರ್ಭದಲ್ಲೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಅರಣ್ಯ ಮಾರ್ಗದಲ್ಲಿ ಜೀವದ ಹಂಗು ತೊರೆದು ಗಿರಿಜನರ ಮನೆ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡುವ ಮೂಲಕ ಸಮುದಾಯದ ಆರೋಗ್ಯಕ್ಕಾಗಿ ಶ್ರಮಿಸುತ್ತಿದ್ದಾರೆ.
ಎಚ್‌.ಡಿ.ಕೋಟೆ ನಾಗರಹೊಳೆ ಹಾಗೂ ಬಂಡೀಪುರ ಅಭಯಾರಣ್ಯದಿಂದ ಆವೃತ್ತ ವಾಗಿರುವ ತಾಲೂಕು.

Advertisement

ಈ ತಾಲೂಕಿನಲ್ಲಿ ಬಹುತೇಕ ಹಾಡಿಗಳು ಅರಣ್ಯದ ಮಧ್ಯ ದಲ್ಲಿರುವುದು ವಿಶೇಷ ಅನಿಸಿದರೂ ಈ ಹಾಡಿಗಳ ಮಂದಿ ಆರೋಗ್ಯ ಕಾಪಾಡುವ ಹೊಣೆ ಆರೋಗ್ಯ ಇಲಾಖೆ ಅದರಲ್ಲೂ ವಿಶೇಷವಾಗಿ ಆಶಾ ಕಾರ್ಯಕರ್ತೆಯರ ಮೇಲಿದೆ. ಅರಣ್ಯದ ಮಧ್ಯದಲ್ಲಿ ವಾಸಿವಾಗಿರುವ ತಾಲೂಕಿನ ಕೇರಳ ಗಡಿಭಾಗದ ಡಿ.ಬಿ.ಕುಪ್ಪೆ,ಮಚ್ಚಾರು, ವಡಕನಮಾಳ, ಬಾವಲಿ, ಬಳ್ಳೆಹಾಡಿ, ಆನೆಮಾಳ ಮತ್ತಿತರ ಹಾಡಿಗಳಿಗೆ ತೆರಳಲು ಸಮರ್ಪಕ ರಸ್ತೆ ಮಾರ್ಗವಿಲ್ಲ. ಹೀಗಾಗಿ ವಾಹನಗಳು ಸಂಚರಿಸುವುದಿಲ್ಲ. ಅರಣ್ಯ ಮಾರ್ಗದ ಕಾಲು ದಾರಿಯಲ್ಲೇಯೇ ಕಾಲ್ನಡಿಗೆಯಲ್ಲೇ ಸಾಗಬೇಕಿದೆ. ಪರಿಸ್ಥಿತಿ ಹೀಗಿದ್ದರೂ ಆಶಾ,ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಅರಣ್ಯ ಮಾರ್ಗದಲ್ಲಿ ಕಾಲ್ನಡಿಗೆ ಯಲ್ಲಿ ಸಂಚರಿಸಿ, ಕೋವಿಡ್‌ ಲಸಿಕೆ, ಚಿಕಿತ್ಸೆ ಸೇರಿ ದಂತೆ ಇನ್ನಿತರ ಆರೋಗ್ಯ ಸೇವೆಗಳನ್ನು ಆದಿವಾಸಿಗರ ಮನೆ ಬಾಗಿಲು ತಲುಪಿಸಲು ಶ್ರಮಿಸುತ್ತಿದ್ದಾರೆ.

ಇದನ್ನೂ ಓದಿ:ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ, ಯಾವುದೇ ಸಂದರ್ಭದಲ್ಲಿ ಪತನವಾಗಬಹುದು: ಸಿದ್ದರಾಮಯ್ಯ

ಇದೀಗ ಮಳೆಗಾಲವಾಗಿರುವುದರಿಂದ ಅರಣ್ಯ ಮಾರ್ಗದ ಕಾಲುದಾರಿ ಕೆಸರಿನಿಂದ ಕೂಡಿದ್ದು, ನಡೆಯಲು ಸಾಧ್ಯವಾಗದ ಸ್ಥಿತಿ ಇದೆ. ಆಯತಪ್ಪಿ
ಬಿದ್ದರೆ ಅವರನ್ನು ಎತ್ತಿಕೊಂಡೇ ಸಾಗಬೇಕಿದೆ. ಆದರೂ ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆ ಯರು ತಮ್ಮ ಕೈಗಳಲ್ಲಿ ಆಹಾರ ಹಾಗೂ ಔಷಧ ಕಿಟ್‌ಗಳನ್ನು ಹಿಡಿದುಕೊಂಡು ಪ್ರಯಾಸಪಟ್ಟು ಕಾಲ್ನಡಿಗೆಯಲ್ಲಿ ಸಂಚರಿಸಿ, ಚಿಕಿತ್ಸೆ ನೀಡುತ್ತಿದ್ದಾರೆ. ಅರಣ್ಯದಲ್ಲಿ ಕ್ರೂರ ಪ್ರಾಣಿಗಳು, ಹಾವು ಚೇಳುಗಳಂತಹ ವಿಷಜಂತುಗಳಿದ್ದರೂ ಸಮುದಾಯದ ಆರೋಗ್ಯಕ್ಕಾಗಿ ಜೀವ ಹಂಗು ತೊರೆದು ಸೇವೆ ಮಾಡುತ್ತಿದ್ದಾರೆ.

ಸಮಯದ ಪರಿವಿಲ್ಲದೇ ಸಮುದಾಯ ಆರೋಗ್ಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ಈ ಸಿಬ್ಬಂದಿಗಳ ಕಾರ್ಯವೈಖರಿಗೆ ಗಿರಿಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ವಲಯದಲ್ಲೂ ಶ್ಲಾಘನೆ ವ್ಯಕ್ತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next