Advertisement

ಆರೋಗ್ಯದ ಕಾಳಜಿ ಅತ್ಯಗತ್ಯ: ರಶ್ಮಿ

12:43 PM Sep 28, 2020 | Suhan S |

ಬಂಟ್ವಾಳ, ಸೆ. 27: ಬಂಟ್ವಾಳ ಕಂದಾಯ ಇಲಾಖೆ, ದೇರಳಕಟ್ಟೆ ಕೆ.ಎಸ್‌. ಹೆಗ್ಡೆ ಆಸ್ಪತ್ರೆ ಹಾಗೂ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಬಂಟ್ವಾಳ ತಾಲೂಕು ಕಂದಾಯ ಇಲಾಖೆ ಸಿಬಂದಿಯ ಆರೋಗ್ಯ ತಪಾಸಣೆ ಶಿಬಿರ ರವಿವಾರ ಬಿ.ಸಿ. ರೋಡ್‌ನ‌ ಮಿನಿ ವಿಧಾನಸೌಧದಲ್ಲಿ ನಡೆಯಿತು.

Advertisement

ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌. ಆರೋಗ್ಯ ಶಿಬಿರವನ್ನು ಉದ್ಘಾಟಿಸಿ, ನಮ್ಮೆಲ್ಲರ ಕರ್ತವ್ಯದ ಒತ್ತಡಗಳ ಮಧ್ಯೆಯೂ ಆರೋಗ್ಯದ ಕಾಳಜಿ ಅತೀ ಅಗತ್ಯವಾಗಿದ್ದು, ಹೀಗಾಗಿ ಅದನ್ನು ಯಾರೂ ಕಡೆಗಣಿಸದೆ ವೈದ್ಯರ ಸಲಹೆ ಪಡೆಯಬೇಕಿದೆ. ಇಲಾಖೆಯ ಪ್ರತಿಯೊಬ್ಬ ಸಿಬಂದಿಯೂ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಿದೆ ಎಂದರು.

ವೈದ್ಯ ಡಾ| ಸುರೇಶ್‌ ಉಪಸ್ಥಿತರಿದ್ದರು. ಕೆ.ಎಸ್‌. ಹೆಗ್ಡೆ ಆಸ್ಪತ್ರೆಯ ಹೃದಯ ತಜ್ಞ ಡಾ| ಕೆ. ಸುಬ್ರಹ್ಮಣ್ಯ ಅವರು ಹೃದಯ ಸಂಬಂಧಿ ಕಾಯಿಲೆ ಹಾಗೂ ಮುಂಜಾಗ್ರತೆಗಳ ಕುರಿತು ಮಾಹಿತಿ ನೀಡಿದರು. ಡಾ| ಪ್ರೇರಣಾ ಅವರು ಉತ್ತಮ ಜೀವನ ಪದ್ಧತಿಗಳ ಕುರಿತು ಮಾಹಿತಿ ಒದಗಿಸಿದರು. ಮನಃಶಾಸ್ತ್ರಜ್ಞ ಡಾ| ಸಂತೋಷ್‌ ಪ್ರಭು ಅವರು ಮಾನಸಿಕ ಆರೋಗ್ಯ ಸಮತೋಲನ ಕುರಿತು ತಿಳಿಸಿದರು.

ಡಾ| ಗೋವಿಂದರಾಜ್‌ ಭಟ್‌ ಅವರು ಪ್ರಥಮ ಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಕಂದಾಯ ಇಲಾಖೆಯ ಎಲ್ಲ ಸಿಬಂದಿ, ಭೂಮಾಪನ ಇಲಾಖೆ ಸಿಬಂದಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿದರು. ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next