Advertisement

ಸೂರ್ಯ ನಮಸ್ಕಾರದ ಹಲವು ಉಪಯೋಗ

05:45 PM Mar 02, 2021 | Team Udayavani |

ಈ ಲೋಕಕ್ಕೆ ಬೆಳಕನ್ನೂ, ಆ ಬೆಳಕಿನ ಮೂಲಕವೇ ಆರೋಗ್ಯ ದಯಪಾಲಿಸುತ್ತಿರುವ ಸೂರ್ಯದೇವನಿಗೆ ನಮಸ್ಕರಿಸುವ ರೀತಿಯಲ್ಲಿ ಮಾಡುವ ಆಸನವೇ- ಸೂರ್ಯ ನಮಸ್ಕಾರ. ಈ ಆಸನವನ್ನು ಸಾಮಾನ್ಯವಾಗಿ ಬೆಳಗ್ಗೆ ಅಥವಾ ಸಂಜೆ ಮಾಡಲಾಗುತ್ತದೆ. ಖಾಲಿಹೊಟ್ಟೆಯಲ್ಲಿ ಇರುವ ಯಾವುದೇ ಸಮಯದಲ್ಲಿ ಈ ಆಸನ ಮಾಡಿದರೂ ಪರಿಣಾಮಕಾರಿ.

Advertisement

ಸೂರ್ಯ ನಮಸ್ಕಾರವನ್ನು ಒಂದು ಚಾಪೆ ಅಥವಾ ಜಮಖಾನ ಹಾಸಿಕೊಂಡು ಮಾಡುವುದು ಒಳಿತು. ಕಾರಣ, ಈ ಆಸನ ಮಾಡುವಾಗ ಕೈ ಮತ್ತು ಕಾಲುಗಳನ್ನು ಮೇಲೆ, ಕೆಳಗೆ ಮತ್ತು ಆಚೀಚೆಗೆ ಚಾಚುತ್ತಾ ಇರಬೇಕಾಗುತ್ತದೆ. ಮೂಗು ಮತ್ತು ಮಂಡಿಯ ಭಾಗ ಕೆಲವೊಮ್ಮೆ ನೆಲಕ್ಕೆ ತಾಕುತ್ತದೆ.

ಬರಿನೆಲದ ಮೇಲೆ ಈ ಆಸನ ಮಾಡಲು ಹೋದರೆ ಆಕಸ್ಮಿಕವಾಗಿ ಬಿದ್ದು ಗಾಯವೂ ಆಗಿಬಿಡುವ ಸಾಧ್ಯತೆ ಇರುತ್ತದೆ. 12 ರೀತಿಯಲ್ಲಿ ಸೂರ್ಯನಮಸ್ಕಾರದ ಭಂಗಿಗಳನ್ನು ಮಾಡಬಹುದು ಎಂದು ಯೋಗತಜ್ಞರು ಹೇಳುವುದುಂಟು. ಆರಂಭದ ದಿನಗಳಲ್ಲಿ 10 ನಿಮಿಷ ಸೂರ್ಯ ನಮಸ್ಕಾರ ಮಾಡಿದರೆ ಸಾಕು. ವಾರದ ನಂತರ ಈ ಅವಧಿಯನ್ನು ಹೆಚ್ಚಿಸಿಕೊಳ್ಳಬಹುದು.

ಆಸನ ಮಾಡುವುದರಿಂದ ಇರುವ ಅನುಕೂಲಗಳು ಹಲವು?: ಮುಖ್ಯವಾಗಿ, ಕೈ ಮತ್ತು ಕಾಲಿನ ಸ್ನಾಯುಗಳು ಬಲಿಷ್ಠವಾಗುತ್ತವೆ.ಅಷ್ಟೇ ಅಲ್ಲ, ಈ ಆಸನ ಮಾಡುವುದರಿಂದ ಒತ್ತಡ ಕಡಿಮೆ ಮಾಡಬಹುದು. ಏಕಾಗ್ರತೆ ಹೆಚ್ಚಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next