ಚಿಕ್ಕಬಳ್ಳಾಪುರ: ಕೋವಿಡ್ ನಂತರ ಆರೋಗ್ಯದ ಮೇಲಿನ ಕಾಳಜಿ ಹೆಚ್ಚಿದ್ದು, ಆರೋಗ್ಯ ವೃದ್ಧಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಹಕಾರಿ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ಶನಿವಾರ ಆಯೋಜಿಸಿದ್ದ ಕಂದಾಯ ಇಲಾಖೆಯ ಅಂತರ ತಾಲೂಕು ಕ್ರಿಕೆಟ್ ಮತ್ತು ಥ್ರೋ ಬಾಲ್ ಪಂದ್ಯಾವಳಿಗಳು ಕ್ರೀಡಾಕೂಟದ ಆರ್‌ಪಿಎಲ್- 2022 ರೆವೀಮಿಯರ್ ಲೀಗ್‌ನ್ನು ಪಾರಿವಾಳವನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.
ಕಂದಾಯ ಇಲಾಖೆ ಎಲ್ಲಾ ಇಲಾಖೆಗಳ ಮಾತೃ ಇಲಾಖೆ. ಎಲ್ಲಾ ಇಲಾಖೆಗಳು ಕೈ ಜೋಡಿಸಿದಾಗ ಯಾವುದೇ ಯೋಜನೆಯು ಸಂಪೂರ್ಣವಾಗಿ ಯಶಸ್ವಿಯಾಗುತ್ತದೆ. ನಿವೇಶನ ರಹಿತರ ನಿವೇಶನ ಹಂಚಿಕೆಗಾಗಿ 1100 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಜಿಲ್ಲೆಯಾದ್ಯಂತ 45 ಸಾವಿರ ಸೆ„ಟ್‌ಗಳನ್ನು ಹಂಚಿಕೆ ಕಾರ್ಯ ಪ್ರಗತಿ ಯಲ್ಲಿದೆ,ಸಕಾಲ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ಜಿಲ್ಲೆ ಮಾದರಿಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರ್‌ಗಳು ಸಕ್ರಿಯವಾಗಿ ಕೆಲಸ ಮಾಡಿದ್ದಕ್ಕೆ ಅಭಿನಂದನೆಗಳನ್ನು ತಿಳಿಸಿದರು ಜಿಪಂ ಸಿಇಒ ಪಿ.ಶಿವಶಂಕರ್ ಮಾತನಾಡಿ, ಸರ್ಕಾರಿ ನೌಕರರು ತಮ್ಮ ನೌಕರಿ ನಿರ್ವಹಣೆ ಜತೆಗೆ ಕ್ರೀಡೆಯ ಬಗ್ಗೆ ಒಲವನ್ನು ತೋರಬೇಕು ಕ್ರೀಡಾಸ್ಪೂರ್ತಿ ಯನ್ನು ಬೆಳೆಸಿಕೊಳ್ಳಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡಿ, ಕ್ರಿಕೆಟ್ ಎಂಬುದು ಹೆಚ್ಚು ಹುಮ್ಮಸ್ಸು ನೀಡುವ ಆಟವಾಗಿದೆ. ಕ್ರೀಡೆಗೆ ಯಾವುದೇ ವಯಸ್ಸಿನ ಮಿತಿ ,ತಾರತಮ್ಯ ಇರುವುದಿಲ್ಲಾ. ಆಟವನ್ನು ಖುಷಿಯಿಂದ,ಹುಮ್ಮಸ್ಸಿನಿಂದ ಆಡಬೇಕು ಎಂದರು.
ಈ ವೇಳೆ ಜಿಲ್ಲಾಧಿಕಾರಿ ಆರ್. ಲತಾ ಅವರು ಕ್ರಿಕೆಟನ್ನು ಆಡುವ ಮೂಲಕ ನೌಕರರಿಗೆ ಸ್ಪೂರ್ತಿಯನ್ನು ನೀಡಿದರು.ನಂತರ ಮಹಿಳಾ ಥ್ರೋಬಾಲ್ ಪಂದ್ಯಾ ವಳಿಯಲ್ಲಿ ಸ್ವತಃ ತಾವೇ ಖುದ್ದಾಗಿ ಆಟ ಆಡಿ ಮಹಿಳಾ ಆಟಗಾರರನ್ನು ಮನರಂಜಿಸಿದರು.
ಪಂದ್ಯಾವಳಿಗೆ ಡಿಸಿ ರಾಯಲ್ಸ್, ಎಸಿ ರೈಸಿಂಗ್ ಸ್ಟಾರ್, ರೆವಿನ್ಯೂ ರಾಕರ್ಸ್ ಚಿಕ್ಕಬಳ್ಳಾಪುರ, ಗೌರಿಬಿದ ನೂರು ಹಂಟರ್ಸ್, ರಾಯಲ್ ಚಾಲೆಂಜರ್ಸ್ ಚಿಂತಾಮಣಿ, ಕಂದಾಯ ಕದಂಬಾಸ್ ಗುಡಿಬಂಡೆ, ರೆವಿನ್ಯೂ ಚಾಲೆಂಜರ್ಸ್ ಶಿಡ್ಲಘಟ್ಟ ಮತ್ತು ಬಾಗೇಪಲ್ಲಿ ವಾರಿಯರ್ಸ್ ತಂಡಗಳು ಪಾಲ್ಗೊಂಡಿದ್ದವು. ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಉಪವಿಭಾಗಾಕಾರಿ ಡಾ.ಜಿ.ಸಂತೋಷ್ ಕುಮಾರ್, ಚುನಾವಣಾ ತಹಶೀಲ್ದಾರ್ ಮೈಕಲ್ ಬೇಜಂಮಿನ್, ಚಿಕ್ಕಬಳ್ಳಾಪುರ ತಹಶೀಲ್ದಾರ್ ಗಣಪತಿ ಶಾಸ್ತ್ರೀ, ಗೌರಿಬಿದನೂರು ತಹಶೀಲ್ದಾರ್ ಶ್ರೀನಿವಾಸ್, ಬಾಗೇಪಲ್ಲಿ ತಹಶೀಲ್ದಾರ್ ರವಿ.ವೈ., ಗುಡಿಬಂಡೆ ತಹಶೀಲ್ದಾರ್ ಸಿಗ್ಬತುಲ್ಲಾ, ಶಿಡ್ಲಘಟ್ಟ ತಹಶೀಲ್ದಾರ್ ರಾಜೀವ್ ಬಿ.ಎಸ್., ಚಿಂತಾಮಣಿ ತಹಸೀಲ್ದಾರ್ ಡಿ.ಹನುಮಂತರಾಯಪ್ಪ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ಕೃಷ್ಣಪ್ಪ.ಎನ್ ಉಪಸ್ಥಿತರಿದ್ದರು.