Advertisement

ಎಳ್ಳಿನ ಸೇವನೆಯಿಂದ ಆರೋಗ್ಯಕ್ಕೆ ಹಲವು ಉಪಯೋಗ

02:38 PM Nov 15, 2022 | Team Udayavani |

ಎಳ್ಳಿನಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿರುವುದರಿಂದ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಹಾಗೆಯೇ ಡಿಎನ್‌ಎ ಕಣಗಳಿಗೆ ಹಾನಿಯಾಗದಂತೆ ರಕ್ಷಣೆ ಮಾಡುತ್ತದೆ. ಕ್ಯಾನ್ಸರ್‌ ಶಮನಕಾರಿ ಪ್ರತಿದಿನ 100 ಮಿ.ಗ್ರಾಂ. ಎಳ್ಳು ತಿನ್ನುವುದರಿಂದ ಕರುಳಿನ ಕ್ಯಾನ್ಸರ್‌ ತಡೆಯಬಹುದು. ಎಳ್ಳೆಣ್ಣೆಯಲ್ಲಿ ಆ್ಯಂಟಿಆಕ್ಸೆಡ್‌ ಅಂಶವಿರುವುದರಿಂದ ಎದೆ ಉರಿ ಮುಂತಾದ ಹೃದಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

Advertisement

ಉಸಿರಾಟ ತೊಂದರೆಗೆ ಸಹಕಾರಿ
ಉಸಿರಾಟದ ತೊಂದರೆ ಇರುವವರು ಎಳ್ಳು ತಿನ್ನುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಇದರಲ್ಲಿ ಮ್ಯಾಗ್ನೇಷಿಯಂ ಅಂಶ ಇರುವುದರಿಂದ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಆದ್ದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಬಳಸಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಶ್ವಾಸಕೋಶವನ್ನು ಶುದ್ದಿಗೊಳಿಸುವಲ್ಲಿ ಎಳ್ಳಿನ ಪಾತ್ರ ಮುಖ್ಯವಾದದ್ದು.

ಜೀರ್ಣಕ್ರಿಯೆಗೆ ಸಹಕಾರಿ
ಎಳ್ಳಿನಲ್ಲಿರುವ ಹೆಚ್ಚಿನ ಫೈಬರ್‌ ಅಂಶ ಆಹಾರ ಬೇಗನೇ ಜೀರ್ಣವಾಗುವಂತೆ ಮಾಡುತ್ತದೆ. ಇದರಿಂದ ದೇಹದ ಕ್ರಿಯೆಗಳು ಸರಾಗವಾಗಿ ನಡೆಯಲು ಸಹಕರಿಸುತ್ತದೆ. ಎಳ್ಳು ಸೇವನೆಯಿಂದ ಸುಸ್ತು ಕಡಿಮೆಯಾಗುವುದಲ್ಲದೆ, ದೇಹದ ಶಕ್ತಿ ಹೆಚ್ಚುತ್ತದೆ.

ದೇಹದಲ್ಲಿನ ಅಧಿಕ ಬೊಜ್ಜು ಹಾಗೂ ಕೊಬ್ಬಿನಾಂಶವನ್ನು ಕಡಿಮೆಗೊಳಿಸಲು ಎಳ್ಳು ಸಹಕಾರಿ. ಚರ್ಮ, ಮೂಳೆ, ನರಮಂಡಲ, ಮಾಂಸಖಂಡಗಳನ್ನು ಪೋಷಿಸುತ್ತದೆ. ಎಳ್ಳಿನಲ್ಲಿ ಸಾಕಷ್ಟು ಪ್ರಮಾಣದ ನಾರಿನಾಂಶವಿದ್ದು ಮಲಬದ್ಧತೆ, ಮೂಲವ್ಯಾಧಿಯಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಚರ್ಮದ ಆರೋಗ್ಯಕ್ಕೆ
ಎಳ್ಳಿನಲ್ಲಿರುವ ಸತುವಿನ ಅಂಶ ಚರ್ಮದ ಆರೊಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದೆ. ಸೂರ್ಯನ ಕಿರಣದಿಂದ ಚರ್ಮ ಕಪ್ಪಾಗಿದ್ದರೆ ಎಳ್ಳನ್ನು ಸೇವಿಸಿ, ಇದರಿಂದ ಚರ್ಮ ಸುಕ್ಕು ಗಟ್ಟುವುದನ್ನು ತಪ್ಪಿಸಬಹುದು. ಚರ್ಮದ ಮೇಲಿನ ಗಾಯ , ಬಿರುಕು, ಕಲೆಗಳನ್ನು ಹೊಗಲಾಡಿಸಿ ತ್ವಚೆಯನ್ನು ಕೋಮಲಗೊಳಿಸಲು ಎಳ್ಳು ಸಹಕಾರಿ. ಮುಖದಲ್ಲಿ ಕಪ್ಪು ಕಲೆಯನ್ನು ಹೊಗಲಾಡಿಸಲು ಕಪ್ಪು ಎಳ್ಳನ್ನು ಹಾಲಲ್ಲಿ ನೆನೆಸಿ, ರುಬ್ಬಿ ಸಾಯಂಕಾಲ ಮುಖಕ್ಕೆ ಲೇಪಿಸಿಕೊಂಡು ಅರ್ಧಗಂಟೆ ಬಳಿಕ ಮುಖ ತೊಳೆಯಿರಿ ಇದರಿಂದ ತ್ವಚೆ ಇನ್ನಷ್ಟು ಕೋಮಲವಾಗುತ್ತದೆ.

Advertisement

ಕೂದಲಿನ ಆರೈಕೆ
ಎಳ್ಳಿನ ಎಣ್ಣೆ ಲೇಪಿಸಿಕೊಳ್ಳುವುದರಿಮದ ಕೂದಲಿನ ಆರೊಗ್ಯವನ್ನು ಕಾಪಾಡಲು ಸಹಕಾರಿ. ದಂತ ಪಂಕ್ತಿಗಳು ಗಟ್ಟಿಯಾಗುವಂತೆ ಮಾಡುತ್ತದೆ. ಏಕಾಗ್ರತೆ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎಳ್ಳು ಸೇವನೆ ತುಂಬಾನೆ ಸಹಕಾರಿ.

ಪ್ರತಿ ನಿತ್ಯ ಎಳ್ಳು ಪಾನಕ ಸೇವಿಸಿದರೆ ಸಂಧಿಗಳ ನೋವು ಮತ್ತು ಸವೆತವನ್ನು ತಡೆಗಟ್ಟಬಹುದು. ಎಳ್ಳೆಣ್ಣೆಯಲ್ಲಿ ವಿಟಮಿನ್‌ ಇ ಹಾಗೂ ಕೀಟಾಣು, ವೈರಾಣು ನಾಶಕ ಗುಣಗಳಿರುವುದರಿಂದ ವಸಡಿನ ರಕ್ತಸ್ರಾವ, ಹಲ್ಲು ನೋವು, ಹಲ್ಲು ಹುಳುಕಾಗುವಿಕೆ, ಬಾಯಿ ಹುಣ್ಣಿನ ಸಮಸ್ಯೆಯನ್ನು ಸುಲಭವಾಗಿ ಹೋಗಲಾಡಿಸಬಹುದು. ಕಪ್ಪೆಳ್ಳನ್ನು ಹುರಿದು ಹುಡಿ ಮಾಡಿ, ಒಂದು ಲೋಟ ನೀರಿನಲ್ಲಿ ಕುದಿಸಿ ಸ್ವಲ್ಪ ಬೆಲ್ಲ ಸೇರಿಸಿ ದಿನಕ್ಕೊಮ್ಮೆ ಕುಡಿಯುವುದರಿಂದ ಮಹಿಳೆಯರಿಗೆ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next