Advertisement
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ರಕ್ತದಲ್ಲಿರುವ ಸಕ್ಕರೆ ಅಂಶ ನಿಯಂತ್ರಣದಲ್ಲಿಡಲು ಬೀಟ್‌ರೂಟ್ ಉಪಕಾರಿಯಾಗಿದೆ. ಮುಖ್ಯವಾಗಿ ನಮ್ಮ ರಕ್ತದಲ್ಲಿ ಕೆಂಪು ರಕ್ತಕಣಗಳ ಕೊರತೆಯಿಂದಾಗಿ ಉಂಟಾಗುವ ಅನೀಮಿಯಾ ಸ್ಥಿತಿಗೂ ಬೀಟ್‌ರೂಟ್ ಸಹಾಯಕ. ಬೀಟ್‌ರೂಟ್ ನಲ್ಲಿ ಹಲವಾರು ವಿಧದ ವಿಟಮಿನ್ ಗಳು ಖನಿಜಾಂಶಗಳು ಇವೆ. ಬೀಟ್ ರೂಟ್ ತಿಂದರೆ ಅಥವಾ ಅದರ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬೀಟ್‌ರೂಟ್ ನಲ್ಲಿ ಕಬ್ಬಿಣದ ಅಂಶ ಅತಿ ಹೆಚ್ಚಿರುವ ಕಾರಣ ರಕ್ತಹೀನತೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಹೀಮೋಗ್ಲೋಬಿನ್ ಕೊರತೆ ಇರುವವರು ವಾರಕ್ಕೊಮ್ಮೆಯಾದರೂ ಬೀಟ್‌ರೂಟ್ ಪಲ್ಯ ಸೇವನೆ ಮಾಡುವುದು ಒಳ್ಳೆಯದು. ಕ್ಯಾನ್ಸರ್ ತಡೆಗಟ್ಟಲು:
ಬೀಟ್‌ರೂಟ್‌ನಲ್ಲಿರುವ ಬೀಟಾಸಯಾನಿನ್ ಪೋಷಕಾಂಶ ರಕ್ತದಲ್ಲಿರುವ ಕ್ಯಾನ್ಸರ್ ಕಾರಕ ಕಣಗಳನ್ನು ಹೊಡೆದೋಡಿಸಲು ಸಹಾಯಕ ಎನ್ನಲಾಗುತ್ತದೆ. ಬೀಟ್‌ರೂಟ್ ನಿಯಮಿತ ಸೇವನೆಯಿಂದ ಪ್ರಾರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಪೂರ್ಣವಾಗಿ ಗುಣವಾಗಬಲ್ಲದು. ಬೀಟ್‌ರೂಟ್ ಸೇವಿಸುವುದರಿಂದ ದೇಹದಲ್ಲಿ ಕ್ಯಾನ್ಸರ್ ಕಾರಕ ಕಣಗಳು ಉತ್ಪತ್ತಿಯಾಗದಂತೆ ಬೀಟಾಸಯಾನಿನ್ ತಡೆಯುತ್ತದೆ.
Related Articles
ಬೀಟ್‌ರೂಟ್ ನಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಫೈಬರ್ ಮತ್ತು ರೋಗನಿರೋಧಕ ಶಕ್ತಿ ಸಮೃದ್ಧವಾಗಿದೆ. ಇದು ರಕ್ತ ಶುದ್ದೀಕರಿಸಲು ಸಹಾಯ ಮಾಡುತ್ತದೆ.
Advertisement
ಬೀಟ್‌ರೂಟ್ ಜ್ಯೂಸ್:ಬೀಟ್‌ರೂಟ್ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಹೃದಯ ಆರೋಗ್ಯಕರವಾಗಿರುತ್ತದೆ. ಅಧಿಕ ರಕ್ತದೊತ್ತಡ ಇರುವವರಿಗೆ ಬೀಟ್‌ರೂಟ್ ಜ್ಯೂಸ್ ಉತ್ತಮ ಔಷದಿ ಎಂದು ಹೇಳಬಹುದು. ಮುಖ/ ಚರ್ಮದ ಕಾಂತಿ:
ಬೀಟ್‌ರೂಟ್ ಸಿಪ್ಪೆ ಸುಲಿದ ಬಳಿಕ ಈ ಸಿಪ್ಪೆಗಳನ್ನು ಬಿಸಾಡುತ್ತೇವೆ. ಆದರೆ ಇದೊಂದು ಉತ್ತಮ ಸೌಂದರ್ಯವರ್ಧಕ ಎಂದು ಹೇಳಬಹುದು. ಸಿಪ್ಪೆಗಳನ್ನು ಮಿಕ್ಸಿಯಲ್ಲಿ ಅರೆದು ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ತೊಳೆದುಕೊಳ್ಳಬೇಕು. ಆದ್ದರಿಂದ ನಯವಾದ, ಕಲೆಯಿಲ್ಲದ, ಕಾಂತಿಯುಕ್ತ ಚರ್ಮ ಪಡೆಯಲು ಸಾಧ್ಯ. ಬೀಟ್ ರೂಟ್ ಜ್ಯೂಸ್ ಚರ್ಮವನ್ನು ನಿರ್ವಿಷಗೊಳಿಸುವ ಕೆಲಸ ಮಾಡುತ್ತದೆ. ಮುಖದಲ್ಲಿನ ರಂಧ್ರಗಳನ್ನು ತೆರವುಗೊಳಿಸುತ್ತದೆ. ಚರ್ಮ ಹೊಳೆಯುವಂತೆ ಮಾಡುತ್ತದೆ. ವಯಸ್ಸಾದಂತೆ ಕಾಣುವುದರಿಮದ ತಪ್ಪಿಸಿಕೊಳ್ಳಲು:
ಬೀಟ್‌ರೂಟ್ ಜ್ಯೂಸ್ ನಿತ್ಯ ಕುಡಿದರೆ ಅದರಿಂದ ವಯಸ್ಸಾಗುವ ಲಕ್ಷಣಗಳನ್ನು ತಡೆಯಬಹುದಾಗಿದೆ. ಬೀಟ್‌ರೂಟ್‌ನಲ್ಲಿ ಇರುವಂತಹ ಫಾಲಟೆ ಅಂಶ ಈ ಕಾರ್ಯಕ್ಕೆ ಕಾರಣ. ಇದು ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನಶ್ಚೇತನ ನೀಡುತ್ತದೆ. ನಿಯಮಿತವಾಗಿ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ಆರೋಗ್ಯಕಾರಿ ಮತ್ತು ಕಾಂತಿಯುತ ಚರ್ಮ ಪಡೆಯಬಹುದು. ಕೂದಲು ಆರೈಕೆಗೆ ಸಹಕಾರಿ:
ಕೂದಲಿನ ಆರೈಕೆಗೆ ಬೀಟ್‌ರೂಟ್ ಸಹಕಾರಿಯಗಿದೆ. ಕೂದಲು ಉದುರುವಿಕೆಯಿಂದ ಬಳಲುತ್ತಿರುವವರು ಬೀಟ್‌ರೂಟ್ ತಮ್ಮ ದೈನಂದಿನ ಆಹಾರದಲ್ಲಿ ಬಳಸಿಕೊಳ್ಳಬೇಕು. ಬೀಟ್‌ರೂಟ್ ರಸ ಕೂದಲು ಉದುರುವುದನ್ನು ತಡೆಯುತ್ತದೆ. ಬೀಟ್‌ರೂಟ್ ನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿರುವುದರಿಂದ ಕೂದಲಿನ ಬೆಳವಣಿಗೆಗೆ ಉತ್ತಮ. ಬೀಟ್‌ರೂಟ್ ಜ್ಯೂಸ್ ಕೂದಲಿನ ಕಾಂತಿ ಮತ್ತು ಹೊಳಪವನ್ನು ಕಾಪಾಡಿಕೊಂಡು ಕೂದಲಿನ ಸಂಪೂರ್ಣ ಆರೋಗ್ಯ ಕಾಪಾಡುತ್ತದೆ. ನೈಸರ್ಗಿಕವಾಗಿ ಸೌಂದರ್ಯ ಪಡೆಯಲು ಕೂದಲಿಗೆ ಕೂಡ ಬೀಟ್‌ರೂಟ್ ಬಳಸಬಹುದು. ಬೀಟ್ ರೂಟ್ ಕೂದಲಿನ ಗುಣಮಟ್ಟವನ್ನು ಚೆನ್ನಾಗಿ ಕಾಪಾಡಿಕೊಳ್ಳುತ್ತದೆ ಎನ್ನಲಾಗುತ್ತದೆ. ಬೋಳು ತಲೆ, ಕೂದಲು ಉದುರುವಿಕೆ ಮತ್ತು ಕಾಂತಿಯುತ ಕೂದಲು ಪಡೆಯಲು ಬೀಟ್ ರೂಟ್ ಜ್ಯೂಸ್ ನಿಯಮಿತವಾಗಿ ಬಳಸಿಕೊಳ್ಳಬಹುದು. ಬೀಟ್ ರೂಟ್ ಜ್ಯೂಸ್ ಗೆ ಸ್ವಲ್ಪ ಶುಂಠಿ ಹಾಕಿ ಕುಡಿದರೆ ಆಗ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಬಹುದು. ಬೀಟ್ ರೂಟ್ ಜ್ಯೂಸ್ ಗೆ ವಿನೇಗರ್ ಹಾಕಿದರೆ ಆಗ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಆಗುವುದು. ಕಣ್ಣಿನ ಡಾರ್ಕ್ ಸರ್ಕಲ್:
ಡಾರ್ಕ್ ಸರ್ಕಲ್ ಹೆಚ್ಚಿನವರಿಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ಇದಕ್ಕೆ ಬೀಟ್‌ರೂಟ್ ಜ್ಯೂಸ್ ತುಂಬಾ ಒಳ್ಳೆಯದು. ಬೀಟ್‌ರೂಟ್ ರಸವನ್ನು ಪ್ರತಿದಿನ ಕಣ್ಣಿನ ಕೆಳಗೆ ಹಚ್ಚುವುದರಿಂದ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತವೆ. ಕೂದಲಿನ ಆರೈಕೆಗೆ ಸಹಕಾರಿ:
ಕೂದಲು ಉದುರುವಿಕೆ ಮತ್ತು ಕಾಂತಿಯುತ ಕೂದಲು ಪಡೆಯಲು ಬೀಟ್‌ರೂಟ್ ಜ್ಯೂಸ್ ಬಳಸುವುದು ಉತ್ತಮ ಪರಿಹಾರ. ಬೀಟ್‌ರೂಟ್ ಜ್ಯೂಸ್ ಗೆ ಸ್ವಲ್ಪ ಶುಂಠಿ ಹಾಕಿ ಕುಡಿಯುವುದರಿಂದ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ.