Advertisement

Viral Video: ಮಕ್ಕಳ ಬ್ಯಾಗನ್ನು ತಲೆಯಡಿ ಇಟ್ಟು ಮಲಗಿದ ಶಾಲಾ ಹೆಡ್ ಮಾಸ್ಟರ್

06:45 PM Jul 15, 2023 | Team Udayavani |

ಛತಾಪುರ: ಸರ್ಕಾರಿ ಶಾಲೆಯ ಮುಖ್ಯೋಪಾಧ್ಯರೊಬ್ಬರು ಶಾಲೆಯ ಮಕ್ಕಳ ಬ್ಯಾಗನ್ನು ತಲೆದಿಂಬಿನಂತೆ ಬಳಸಿ ನಿದ್ದೆ ಮಾಡಿದ ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆದಿದೆ. ರಾಜ್ಯದ ಛತಾಪುರದಲ್ಲಿ ನಡೆದ ಈ ಘಟನೆಯು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ಲವಕುಶ ನಗರದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮುಖ್ಯೋಪಾಧ್ಯಾಯರ ಶಯನ ಪ್ರಹಸನವನ್ನು ಗ್ರಾಮಸ್ಥರು ವಿಡಿಯೋ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಮಕ್ಕಳ ಪೋಷಕರು ಆ ಶಿಕ್ಷಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಶಾಲಾ ಮುಖ್ಯೋಪಾಧ್ಯಯನನ್ನು ರಾಜೇಶ್ ಕುಮಾರ್ ಅಡ್ಜಾರಿಯಾ ಎಂದು ಗುರುತಿಸಲಾಗಿದೆ. ವಿಡಿಯೋದಲ್ಲಿ ಆತ ಶಾಲಾ ಮಕ್ಕಳ ಬ್ಯಾಗನ್ನು ತಲೆಯಡಿ ಇಟ್ಟು ನಿದ್ರಿಸುವುದನ್ನು ಕಾಣಬಹುದು. ಅಲ್ಲದೆ ಹಲವು ಮಕ್ಕಳು ಶಾಲೆಯ ಮೈದಾನದಲ್ಲಿ ಆಡುತ್ತಿರುವುದು ಮತ್ತು ಇನ್ನು ಕೆಲವು ಬಾಲಕಿಯರು ಶಾಲೆಯನ್ನು ಗುಡಿಸುತ್ತಿರುವುದು ಕೂಡಾ ವಿಡಿಯೋದಲ್ಲಿ ಸೆರೆಯಾಗಿದೆ.

ಈ ಘಟನೆಯ ಬಗ್ಗೆ ಜಿಲ್ಲಾ ಶಿಕ್ಷಣಾಧಿಕಾರಿ ಪ್ರತಿಕ್ರಿತಯೆ ನೀಡಿದ್ದು, ಹೆಡ್ ಮಾಸ್ಟರ್ ಶಾಲಾ ಬ್ಯಾಗ್ ಮೇಲೆ ತಲೆಯಿಟ್ಟು ಮಲಗಿರುವ ವಿಡಿಯೋ ನಮ್ಮ ಗಮನಕ್ಕೆ ಬಂದಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇನೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next