Advertisement

ರುಂಡವಿಲ್ಲದ ನಿಗೂಢ ಮನುಷ್ಯ! ಅಮೆರಿಕದಲ್ಲಿ ವೈರಲ್ ಆದ ಫೋಟೊ

10:04 AM Apr 16, 2022 | Team Udayavani |

ನ್ಯೂಯಾರ್ಕ್‌: ಭೂತ, ಪ್ರೇತಗಳನ್ನು ನಮಗಿಂತ ಹೆಚ್ಚು ನಂಬುವ ಅಮೆರಿಕನ್ನರಿಗೆ ಗೂಗಲ್‌ ಮ್ಯಾಪ್‌ ವಿ”ಚಿತ್ರ’ ಆಘಾತ ನೀಡಿದೆ. ರುಂಡವಿಲ್ಲದ, ಕಾಲುಗಳಿಲ್ಲದ, ರಕ್ಷಾಕವಚ(ಪಿಪಿಇ ಕಿಟ್‌) ಧರಿಸಿದ ನಿಗೂಢ ಮನುಷ್ಯನೊಬ್ಬ ಗೂಗಲ್‌ ಮ್ಯಾಪ್‌ನಲ್ಲಿ ಕಾಣಿಸಿಕೊಂಡಿರುವ ದೃಶ್ಯ ನ್ಯೂಯಾರ್ಕ್‌ ಸಿಟಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

Advertisement

ಹೆಚ್ಚು ಭದ್ರತೆಯಿಂದ ಕೂಡಿರುವ ಬ್ರೂಕ್ಲಿನ್‌ ನೌಕಾಪ್ರದೇಶದೊಳಗೆ “ಹಾಲೋ ಮ್ಯಾನ್‌’ ಪಾತ್ರಧಾರಿಗೆ ಹೋಲಿಕೆ ಆಗುವಂಥ ಈ ನಿಗೂಢ ವ್ಯಕ್ತಿ ಗೋಚರಿಸಿದ್ದಾನೆ. ರಸ್ತೆ ಮಧ್ಯದಲ್ಲಿ ನಡೆಯುತ್ತಾ, ಮರಕ್ಕೆ ವಾಲಿಕೊಂಡಿರುವ, ರಸ್ತೆಯ ಮೂಲೆಯಲ್ಲಿ ತಮಾಷೆ ಭಂಗಿಯಲ್ಲಿ ನಿಂತಿರುವ, ಶಿಸ್ತಿನ ಪರೇಡ್‌ ರೀತಿಯಲ್ಲಿ ಹೆಜ್ಜೆ ಹಾಕುತ್ತಿರುವ- ಹೀಗೆ ವಿವಿಧ ಭಂಗಿಗಳಲ್ಲಿ ನಿಗೂಢ ಮನುಷ್ಯ ಪೋಸ್‌ ಕೊಟ್ಟಿದ್ದಾನೆ.

ಇದನ್ನೂ ಓದಿ:ಕಾಂಗ್ರೆಸ್ ಗೆ ಬಿಜೆಪಿಯನ್ನು ನೇರವಾಗಿ ಎದುರಿಸಲಾಗುತ್ತಿಲ್ಲ: ಸಚಿವ ಸುನಿಲ್ ಕುಮಾರ್

2021ರ ಮೇ ತಿಂಗಳಿನಲ್ಲಿ ಕ್ಲಿಕ್ಕಿಸಿರಬಹುದಾದ ಈ ಚಿತ್ರದ ಕುರಿತು ತೀವ್ರ ಚರ್ಚೆಗೀಡಾಗಿದೆ.”ಭಾರೀ ಭದ್ರತೆಯುಳ್ಳ ನೌಕಾಪ್ರದೇಶದ ವ್ಯಾಪ್ತಿಯೊಳಗೆ, ಯಾರ ಗಮನಕ್ಕೂ ಬಾರದೆ, ನಿಗೂಢ ಮನುಷ್ಯ ಹೇಗೆ ವಿಹರಿಸಲು ಸಾಧ್ಯ?’ ಎಂಬ ಪ್ರಶ್ನೆ ಮುಂದಿಟ್ಟುಕೊಂಡು, ಅಮೆರಿಕದ ಜನಪ್ರಿಯ ಜಾಲತಾಣ “ರೆಡ್ಡಿಟ್‌’ನ ಬಳಕೆದಾರರು ಚರ್ಚೆಗಿಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next