Advertisement

ಹೆಡ್‌ ಕಾನ್‌ ಸ್ಟೇಬಲ್‌ ಕೋವಿಡ್ ಹಾಡು ವೈರಲ್‌

10:35 AM Jun 02, 2020 | Suhan S |

ಮೂಡಲಗಿ: ಸ್ಥಳೀಯ ಪೊಲೀಸ್‌ ಹೆಡ್‌ ಕಾನ್‌ ಸ್ಟೇಬಲ್‌ ಅನಿಲ ಮಡಿವಾಳ ಹಾಡಿರುವ ಕೋವಿಡ್ ಜಾಗೃತಿ ಗೀತೆಗೆ ಜನರು ಮನಸೋತಿದ್ದು, ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

ಪಕ್ಕಾ ಉತ್ತರ ಕರ್ನಾಟಕದ ಜಾನಪದ ಶೈಲಿಯಲ್ಲಿರುವ ಈ ಹಾಡು ಚೀನಾದಿಂದ ಬಂದಿರುವ ಮಹಾಮಾರಿ ರೋಗವಿದು, ದೇಶ ತುಂಬೆಲ್ಲ ತನ್ನ ಜಾಲ ಬೇಗ ಬೀಸಿದ್ದು ಎಂಬ ಪಲ್ಲವಿಯೊಂದಿಗೆ ಪ್ರಾರಂಭವಾಗುತ್ತದೆ. ಇದು ಕೇವಲ ಜಾಗೃತಿ ಮೂಡಿಸುವ ಹಾಡಾಗದೇ ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವ ಕೋವಿಡ್ ವಾರಿಯರ್ಸ್‌ ಕೆಲಸದ ಶ್ಲಾಘನೆ ಹಾಗೂ ಜನರಿಗೆ ಧೈರ್ಯ ಹೇಳುವ ಮೂಲಕ ಕೊನೆಗೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next