ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಇಲ್ಲಿನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿದೆ. ಇಂದು ನಾಲ್ಕನೇ ದಿನದಾಟ ನಡೆಯುತ್ತಿದ್ದು, ಭಾರತ ಉತ್ತಮ ಮುನ್ನಡೆಯತ್ತ ಮುನ್ನುಗ್ಗುತ್ತಿದೆ.
ಆದರೆ ಇದರ ನಡುವೆ ತಂಡಕ್ಕೆ ಆಘಾತಕಾರಿ ಸುದ್ದಿಯೊಂದು ಎದುರಾಗಿದೆ. ತಂಡದ ಮುಖ್ಯ ಕೋಚ್ ರವಿ ಶಾಸ್ತ್ರೀ ಅವರಿಗೆ ಕೋವಿಡ್ ಪಾಸಿಟಿವ್ ಆಗಿರುವುದು ಪತ್ತೆಯಾಗಿದ್ದು, ಅವರನ್ನು ಐಸೋಲೇಶನ್ ಗೆ ಒಳಪಡಿಸಲಾಗಿದೆ.
ಮುಖ್ಯ ಕೋಚ್ ರವಿ ಶಾಸ್ತ್ರೀ ಜೊತೆಗೆ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್, ಫಿಸಿಯೋಥೆರಪಿಸ್ಟ್ ನಿತಿನ್ ಪಟೇಲ್ ಅವರನ್ನೂ ಐಸೋಲೇಶನ್ ಗೆ ಒಳಪಡಿಸಲಾಗಿದೆ.
ಇದನ್ನೂ ಓದಿ:ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಐದನೇ ಚಿನ್ನ: ಬ್ಯಾಡ್ಮಿಂಟನ್ ನಲ್ಲಿ ಬಂಗಾರ ಗೆದ್ದ ಕೃಷ್ಣ
ಇವರೆಲ್ಲರೂ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದಾರೆ. ಸದ್ಯ ತಂಡದ ಹೋಟೆಲ್‌ನಲ್ಲಿಯೇ ಉಳಿದುಕೊಂಡಿದ್ದಾರೆ. ವೈದ್ಯಕೀಯ ತಂಡ ದೃಢೀಕರಿಸುವವರೆಗೂ ಟೀಮ್ ಇಂಡಿಯಾದೊಂದಿಗೆ ಪ್ರಯಾಣಿಸುವಂತಿಲ್ಲ ಎಂದು ಬಿಸಿಸಿಐ ಹೇಳಿದೆ.
ತಂಡದ ಉಳಿದ ಸದಸ್ಯರಿಗೂ ಪರೀಕ್ಷೆ ನಡೆಸಲಾಗಿದೆ. ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗ್ಗೆ ಎಲ್ಲಾ ಆಟಗಾರರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ನಾಲ್ಕನೇ ದಿನದಾಟಕ್ಕೆ ಅವಕಾಶ ಕೊಡಲಾಗಿದೆ.