Advertisement

‘ಹೆಡ್ ಬುಷ್’ ಫಸ್ಟ್ ಲುಕ್ ಟೀಸರ್ ರಿಲೀಸ್ |ಡಾನ್ ಜಯರಾಜ್ ಗೆಟಪ್ಪಿನಲ್ಲಿ ಡಾಲಿ ಖದರ್   

07:38 PM Aug 22, 2021 | Team Udayavani |

ಬೆಂಗಳೂರು: ಡಾಲಿ ಧನಂಜಯ್ ನಟಿಸಿರುವ ‘ಹೆಡ್ ಬುಷ್’ ಚಿತ್ರದ ಫಸ್ಟ್ ಲುಕ್ ಟೀಸರ್ ಇಂದು (ಆ.22) ಸಂಜೆ ಬಿಡುಗಡೆಯಾಗಿದೆ.

Advertisement

ಹೆಡ್ ಬುಷ್’ ಚಿತ್ರದಲ್ಲಿ ಬೆಂಗಳೂರಿನ ಭೂಗತ ಲೋಕದಲ್ಲಿ ಡಾನ್ ಆಗಿದ್ದ ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ ಅಭಿನಯಿಸಲಿದ್ದಾರೆ. ಇಂದು ರಿಲೀಸ್ ಆಗಿರುವ ಟೀಸರ್ ನಲ್ಲಿ ಡಾಲಿ ಪಕ್ಕಾ ರೌಡಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಭೂಗತ ಜಗತ್ತಿನಲ್ಲಿ ಮಿಂಚಿದ ಡಾನ್ ಜಯರಾಜ್ ಅವರ ಪಾತ್ರಕ್ಕೆ ಡಾಲಿ ಧನಂಜಯ್ ಜೀವ ತುಂಬಿದ್ದಾರೆ ಎನ್ನುವುದು ಟೀಸರ್ ನೋಡಿದರೆ ಗೊತ್ತಾಗುತ್ತದೆ.

ಈ ಚಿತ್ರವನ್ನು ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಅಗ್ನಿ ಶ್ರೀಧರ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆಯುತ್ತಿದ್ದಾರೆ. ಶೂನ್ಯ ಎಂಬ ಹೊಸ ಪ್ರತಿಭೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಈ ಚಿತ್ರದಲ್ಲಿ ಬಾಲಿವುಡ್ ನಟಿ ಪಾಯಲ್ ರಜಪೂತ್  ಅವರು ಧನಂಜಯ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ದೆಹಲಿ ಮೂಲದ ಈಕೆ ಹಿಂದಿ ಕಿರುತೆರೆ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. ತೆಲುಗು, ಪಂಜಾಬಿ, ಹಿಂದಿ ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಪ್ನೋಂ ಸೇ ಭರೇ ನೈನಾ’, ‘ಯೇ ಹೇ ಆಶಿಕಿ’, ‘ಪ್ಯಾರ್ ತುನೇ ಕ್ಯಾ ಕಿಯಾ’ ಮುಂತಾದ ಹಿಂದಿ ಸೀರಿಯಲ್‌ಗಳಲ್ಲಿ ಪಾಯಲ್ ರಜಪೂತ್ ಮಿಂಚಿದ್ದರು. ‘ಆರ್ ಎಕ್ಸ್ 100’, ‘ಆರ್ ಡಿಎಕ್ಸ್ ಲವ್’, ‘ವೆಂಕಿ ಮಾಮ’, ‘ವೀರೇ ಕಿ ವೆಡ್ಡಿಂಗ್’, ‘ಡಿಸ್ಕೋ ರಾಜಾ’, ‘ಅನಗನಗಾ ಓ ಅತಿಥಿ’ ಸೇರಿದಂತೆ ಕೆಲ ಚಿತ್ರಗಳಲ್ಲಿ ಪಾಯಲ್ ರಜಪೂತ್ ನಟಿಸಿದ್ದಾರೆ.

Advertisement

ಆಗಸ್ಟ್ 9 ರಿಂದ ‘ಹೆಡ್ ಬುಷ್’ ಚಿತ್ರದ ಚಿತ್ರೀಕರಣ ಶುರುವಾಗಿದೆ. ಬೆಂಗಳೂರಿನಲ್ಲಿಯೇ ಈ ಚಿತ್ರದ ಮೊದಲ ಹಂತದ ಶೂಟಿಂಗ್ ನಡೆಯಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಒಟ್ಟು 6 ಭಾಷೆಯಲ್ಲಿ ‘ಹೆಡ್ ಬುಷ್’ ಸಿನಿಮಾ ತಯಾರಾಗಲಿದೆ. ಎರಡು ಭಾಗಗಳಲ್ಲಿ ಸಿನಿಮಾ ತಯಾರಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next