Advertisement

ಹೆಡ್ ಬುಷ್ ಚಿತ್ರದಲ್ಲಿ ಭಾವನೆಗೆ ಧಕ್ಕೆ?; ವಿವಾದಕ್ಕೆ ಗುರಿಯಾದ ಚಿತ್ರ

01:36 PM Oct 26, 2022 | Team Udayavani |

ಬೆಂಗಳೂರು : ಬೆಂಗಳೂರು ಭೂಗತ ಜಗತ್ತಿನ ಕಥೆಯನ್ನಾಧರಿಸಿದ ‘ಹೆಡ್ ಬುಷ್’ ಚಿತ್ರದ ವಿರುದ್ಧ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

ಚಿತ್ರದ ದೃಶ್ಯವೊಂದರಲ್ಲಿ ಜನಪದ ಕಲೆ ವೀರಗಾಸೆಗೆ ಅವಮಾನ ಮಾಡಿರುವ ಕುರಿತು ಆಕ್ರೋಶ ವ್ಯಕ್ತವಾಗಿದ್ದು, ಈ ಕುರಿತು ಚಿತ್ರ ತಂಡದ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಹಲವಾರು ಮಂದಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಚಿತ್ರದಿಂದ ಈ ದೃಶ್ಯವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ಬೆಂಗಳೂರು ಕರಗ ಉತ್ಸವದ ಸನ್ನಿವೇಶದ ವೇಳೆ ಈ ಸನ್ನಿವೇಶ ಬಂದಿದೆ ಎಂದು ಹೇಳಲಾಗಿದೆ.

ಈ ಕುರಿತು ಚಿತ್ರದ ನಾಯಕ ನಟ ಡಾಲಿ ಧನಂಜಯ್ ಅವರು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದು, ”ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೆೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ” ಎಂದು ಮನವಿ ಮಾಡಿದ್ದಾರೆ.

1970-80ರ ದಶಕದ ಬೆಂಗಳೂರು ಭೂಗತ ಜಗತ್ತಿನ ಕಥೆ,ಲೇಖಕ ಅಗ್ನಿ ಶ್ರೀಧರ್‌ ಅವರ “ದಾದಾಗಿರಿಯ ದಿನಗಳು’ ಪುಸ್ತಕವನ್ನು ಆಧರಿಸಿ ಚಿತ್ರವನ್ನು ಮಾಡಲಾಗಿದೆ. ನಟ ಡಾಲಿ ಧನಂಜಯ್‌ ಡಾನ್‌ ಜಯರಾಜ್‌ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಧನಂಜಯ್‌ ಅವರಿಗೆ ಪಾಯಲ್‌ ರಜಪೂತ್‌ ಜೋಡಿಯಾಗಿದ್ದು, ರವಿಚಂದ್ರನ್‌, ಲೂಸ್‌ಮಾದ ಯೋಗಿ, ವಸಿಷ್ಟ ಸಿಂಹ, ಶ್ರುತಿ ಹರಿಹರನ್‌, ಶೋಭರಾಜ್‌, ಬಾಲಾಜಿ ಮನೋಹರ್‌, ಅರವಿಂದ ರಾವ್‌ ಹೀಗೆ ಖ್ಯಾತನಾಮ ಕಲಾವಿದರು ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next