ತಲೆಹೊಟ್ಟಿನ ಸಮಸ್ಯೆ ಕಾಣಿಸಿಕೊಂಡರೆ ಅದಕ್ಕೆ ಪ್ರಾರಂಭದಲ್ಲಿಯೇ ಚಿಕಿತ್ಸೆ ಮಾಡದಿದ್ದರೆ ಕೂದಲು ಉದುರುವುದು, ಮೊಡವೆ ಮುಂತಾದ ಸಮಸ್ಯೆ ಕಂಡು ಬರುವುದು. ಮಳೆಗಾಲದಲ್ಲಿ ಕೂದಲು ಸರಿಯಾಗಿ ಒಣಗದೆ ತಲೆಹೊಟ್ಟಿನ ಸಮಸ್ಯೆ ಉಂಟಾಗುವುದು. ಇಲ್ಲಿ ಅದನ್ನು ನೈಸರ್ಗಿಕವಗಿ ಹೋಗಲಾಡಿಸುವುದು ಹೇಗೆ ಎಮಬ ಟಿಪ್ಸ್ ನೀಡಿದ್ದೇವೆ ನೋಡಿ.
ದಟ್ಟವಾದ ಕೇಶ ರಾಶಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ಇಂದಿನ ಜೀವನಶೈಲಿ, ಆಹಾರ ಕ್ರಮದಿಂದ ಕೂದಲು ಉದುರುವುದರ ಜತೆಗೆ ತಲೆಹೊಟ್ಟಿನ ಸಮಸ್ಯೆ ಕೂಡ ಕಾಡುತ್ತದೆ.
ಹೊಟ್ಟಿನ ಸಮಸ್ಯೆಯಿಂದ ಬಳುತ್ತಿರುವವರು ಈ ಆಹಾರವನ್ನು ಸೇವಿಸಿದರೆ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಶುಂಠಿಯು ಬ್ಯಾಕ್ಟೀರಿಯಾ, ಶೀಲಿಂಧ್ರಗಳ ನಾಶಕಾರಿ ಗುಣವನ್ನು ಹೊಂದಿದೆ. ಹಾಗಾಗಿ ಸರಿಯಾಗಿ ಜೀರ್ಣಕ್ರೀಯೆ ಆಗದವರು ಶುಂಠಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇದರಿಂದ ಜೀರ್ಣಕ್ರಿಯೆ ಸುಲಭವಾಗಿ ತಲೆಹೊಟ್ಟು ಕೂಡ ನಿವಾರಣೆಯಾಗುತ್ತದೆ. ಪದೇ ಪದೇ ಈ ಸಮಸ್ಯೆ ಕಾಡದಂತೆ ಕಾಪಾಡುತ್ತದೆ.
ಇನ್ನು ಸೂರ್ಯಕಾಂತಿ ಬೀಜ ಕೂಡ ಜೀರ್ಣಕ್ರಿಯೆಗೆ ಹೆಚ್ಚಿನ ಸಹಕಾರಿಯಾಗಿದೆ. ಇದರಲ್ಲಿರುವ ಸತು ಮತ್ತು ವಿಟಮಿನ್ ಬಿ6 ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಇದು ಅಜೀರ್ಣವನ್ನು ಕಡಿಮೆ ಮಾಡುತ್ತದೆ. ಇದು ತಲೆಹೊಟ್ಟು ಆಗದಂತೆ ತಡೆಯುತ್ತದೆ.