Advertisement

ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್‌ ಹರಿದು ಸಾವು

07:53 PM Jun 09, 2023 | Team Udayavani |

ಬಂಟ್ವಾಳ: ಸಜಿಪ ಮುನ್ನೂರಿನ ಮಲಾಯಿಬೆಟ್ಟು ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ವೇಳೆ ಅಡಿಕೆ ಮರದಿಂದ ಅಡಿಕೆ ಕೊಯ್ಯುತ್ತಿದ್ದ ವೇಳೆ ವೇಳೆ ವಿದ್ಯುತ್‌ ಶಾಕ್‌ ಹೊಡೆದು ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ.

Advertisement

ಬೋಳಿಯಾರು ಗ್ರಾಮದ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಶಾಫಿ (28) ಮೃತಪಟ್ಟವರು. ಬೆಳಗ್ಗೆ ಸುಮಾರು 11.15ರ ಆಸುಪಾಸಿನಲ್ಲಿ ಘಟನೆ ಸಂಭವಿಸಿದೆ. ಶಾಫಿ ಅವರು ಕಳೆದ ಕೆಲವು ವರ್ಷಗಳಿಂದ ಅಡಿಕೆ ವ್ಯವಹಾರ ನಡೆಸುತ್ತಿದ್ದರು. ಅಡಿಕೆಯನ್ನು ಗಿಡದಿಂದಲೇ ಕ್ರಯಕ್ಕೆ ಪಡೆದು ಬಳಿಕ ಅದನ್ನು ಕೊಯ್ಯುವುದು ಹೀಗೆ ಕೆಲಸ ಮಾಡಿಕೊಂಡಿದ್ದರು.

ದೋಟಿಯಿಂದ ಅಡಕೆ ಕೀಳುವಾಗ ಶಾಫಿ ಅವರ ಕೈಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್‌ ತಂತಿಗೆ ತಾಗಿದೆ. ಆದರಲ್ಲಿ ಅಳವಡಿಸಿದ್ದ ಕಬ್ಬಿಣದ ಕತ್ತಿಯ ಮೂಲಕ ವಿದ್ಯುತ್‌ ಪ್ರವಹಿಸಿ ಶಾಫಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಸಜೀಪಮುನ್ನೂರು ಗ್ರಾಮಕರಣಿಕರಾದ ಸ್ವಾತಿ, ಮೆಸ್ಕಾಂನ ಅಧಿಕಾರಿಗಳು ಹಾಗೂ ಬಂಟ್ವಾಳ ಗ್ರಾಮಾಂತರ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next