ಮುಂಬೈ: ಈ ಆಟಗಾರ ಮೊದಲು ಟೀ ಇಂಡಿಯಾಗೆ ಬಂದಾಗ ಪಾಕಿಸ್ಥಾನದ ಇಂಝಮಾಮ್ ಉಲ್ ಹಕ್ ನೆನಪಾಗಿದ್ದ. ಈತನ ಬ್ಯಾಟಿಂಗ್ ವೇಳೆ ಈತನಿಗೆ ಸಿಗುತ್ತಿದ್ದ ಸಮಯ ನೋಡಿ ಹಕ್ ನೆನಪಾಗುತ್ತಿದ್ದ ಎಂದು ಯುವರಾಜ್ ಸಿಂಗ್ ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಯೂಟ್ಯೂಬ್ ವಿಡಿಯೋದಲ್ಲಿ ಈ ಬಗ್ಗೆ ಮಾತನಾಡಿರುವ ಯುವರಾಜ್ ಸಿಂಗ್ ಭಾರತದ ಸ್ಪೋಟಕ ಆರಂಭಿಕ ಆಟಗಾರ ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ್ದಾರೆ.
ಪಾಕಿಸ್ಥಾನದ ಇಂಝಮಾಮ್ ಉಲ್ ಹಕ್ ಬೌಲರ್ ಗಳನ್ನು ಎದುರಿಸುವಾಗ ಬಹಳಷ್ಟು ಸಮಯ ಇರುತ್ತಿತ್ತು. ರೋಹಿತ್ ಶರ್ಮಾ ಕೂಡಾ ವೇಗದ ಬೌಲರ್ ಗಳನ್ನು ಎದುರಿಸುವಾಗ ಬಹಳಷ್ಟು ಸಮಯ ದೊರೆಯುತ್ತಿತ್ತು ಎಂದು ಯುವರಾಜ್ ಸಿಂಗ್ ಹೇಳಿದರು.
ಇದಕ್ಕೆ ಟ್ವೀಟ್ಟರ್ ನಲ್ಲಿ ಪ್ರತಿಕ್ರಯಿಸಿರುವ ರೋಹಿತ್ ಶರ್ಮಾ, ಲವ್ ಯೂ ಸಹೋದರ, ನಿಮಗೆ ಉತ್ತಮ ವಿದಾಯ ನೀಡಬೇಕಿತ್ತು ಎಂದಿದ್ದಾರೆ. ಇದಕ್ಕೆ ಯುವಿ ಪ್ರತಿಕ್ರಯಿಸಿದ್ದು, ನನಗೆ ಎಷ್ಟು ಬೇಜಾರು ಆಗಿತ್ತು ಎಂದು ನಿನಗೆ ಅರಿವಾಯಿತು. ನೀನು ಮುಂದೆ ದಿಗ್ಗಜ ಕ್ರಿಕೆಟಿಗನಾಗುತ್ತೀಯ ಎಂದಿದ್ದಾರೆ.
ರೋಹಿತ್ ಶರ್ಮಾ 2007ರ ಜೂನ್ ನಲ್ಲಿ ಐರ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ್ದರು. ಈ ವೇಳೆಗೆ ಯುವರಾಜ್ ಸಿಂಗ್ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಗಟ್ಟಿ ಮಾಡಿದ್ದರು. 304 ಏಕದಿನ ಪಂದ್ಯವಾಡಿರುವ ಯುವರಾಜ್ ಸಿಂಗ್ ಎಂಟು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.