Advertisement
2019 ಜೂನ್ ವರೆಗಿನ ಆರೋಗ್ಯ ಇಲಾಖೆಯ ಸಮೀಕ್ಷೆಯಲ್ಲಿ ಡೆಂಗ್ಯೂ 79 ಹಾಗೂ ಮಲೇರಿಯಾ 35 ಪ್ರಕರಣಗಳು ಪತ್ತೆಯಾಗಿವೆ. 2012ನೇ ಸಾಲಿನಲ್ಲಿ 2,217, 2013ರಲ್ಲಿ 2,205, 2014ರಲ್ಲಿ 1,639, 2015ರಲ್ಲಿ 1,363, 2016ರಲ್ಲಿ 1,168, 2017ರಲ್ಲಿ 513, 2018ರಲ್ಲಿ 221, 2019ರಲ್ಲಿ ಜೂನ್ ವರೆಗೆ 35 ಪ್ರಕರಣಗಳು ಪತ್ತೆಯಾಗಿವೆ. ಈ ಬಾರಿ ಒಟ್ಟು 89,346 ಶಂಕಿತ ವ್ಯಕ್ತಿಗಳ ರಕ್ತವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಸುಮಾರು 35 ಮಂದಿಗೆ ಮಲೇರಿಯಾ ಇರುವುದು ಖಚಿತವಾಗಿದೆ.
53,069 ಸೊಳ್ಳೆ ಪರದೆ ಸರಬರಾಜು ಆಗಿದ್ದು, ಅದರಲ್ಲಿ ಸಿಂಗಲ್ ಬೆಡ್ 2,559, ಡಬಲ್ ಬೆಡ್ 22,000, ಫ್ಯಾಮಿಲಿ 8910 ಸೇರಿದಂತೆ ಒಟ್ಟು 38,469 ಸೊಳ್ಳೆ ಪರದೆ ವಿತರಿಸಲಾಗಿದೆ.
Related Articles
ಮಲೇರಿಯಾ ಹಾಗೂ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುವ ಪ್ರದೇಶವನ್ನು ಗುರುತಿಸಲಾಗಿದೆ. ಆ ಪ್ರದೇಶಕ್ಕೆ ಆರೋಗ್ಯ ಇಲಾಖೆಯ ಸಿಬಂದಿಗಳು ಭೇಟಿ ನೀಡಿ ಮಲೇರಿಯಾ ಹಾಗೂ ಡೆಂಗ್ಯೂ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದ್ದಾರೆ.
Advertisement
ದ.ಕ.: ಒಂದು ತಿಂಗಳಿನಲ್ಲಿ 50 ಡೆಂಗ್ಯೂ ಪ್ರಕರಣ ಮಂಗಳೂರು: ಜನವರಿಯಿಂದ ಜುಲೈ 4ರ ವರೆಗೆ ಸುಮಾರು 200ರಷ್ಟು ಡೆಂಗ್ಯೂ ಪ್ರಕರಣಗಳು ದ.ಕ. ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಕಳೆದೊಂದು ತಿಂಗಳಿನಲ್ಲಿ ಸುಮಾರು 50 ಪ್ರಕರಣ ದಾಖಲಾಗಿವೆ ಎಂದು ದ.ಕ. ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಮಂಗಳೂರಿನಲ್ಲಿ ಪ್ರಸ್ತುತ ಡೆಂಗ್ಯೂ ಕಡಿಮೆಯಾಗಿದೆ. ಆದರೆ ಕಡಬ, ಕೋಡಿಂಬಾಳ, ಗುತ್ತಿಗಾರು ಭಾಗಗಳಲ್ಲಿ ಪ್ರಕರಣಗಳು ವರದಿಯಾಗುತ್ತಿದ್ದು, ನಿತ್ಯ ಒಂದೆರಡು ಮಂದಿ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗು ತ್ತಿದ್ದಾರೆ. ಎಲ್ಲರೂ ಗುಣಮುಖರಾಗುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಸರ್ವೇಕ್ಷಣಾ ಧಿಕಾರಿ (ಪ್ರಭಾರ) ಡಾ| ನವೀನ್ ಕುಮಾರ್ ತಿಳಿಸಿದ್ದಾರೆ. 11 ಮಲೇರಿಯಾ ಪ್ರಕರಣ
ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣದಲ್ಲಿದೆ. ಸುರತ್ಕಲ್‌ನ ಲಿಂಗಪ್ಪಯ್ಯ ಕಾಡಿನಲ್ಲಿ ಕಳೆದ ತಿಂಗಳು 23 ಪ್ರಕರಣ ಕಂಡು ಬಂದರೆ, ಈ ತಿಂಗಳ 4ನೇ ತಾರೀಕಿನವರೆಗೆ 11 ಪ್ರಕರಣ ದಾಖಲಾಗಿದೆ. ಇಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಪೂರಕ ಕ್ರಮ ಕೈಗೊಳ್ಳುತ್ತಿದೆ. ನಿರಂತರ ಫಾಗಿಂಗ್ ನಡೆಸ ಲಾಗುತ್ತಿದೆ. ಆದರೆ, ಜನರೂ ಜಾಗೃತರಾಗಬೇಕು. ಮನೆಯ ಟೆರೇಸ್, ಸುತ್ತಮುತ್ತ ನೀರು ನಿಲ್ಲದಂತೆ ನೋಡಿ ಕೊಳ್ಳಬೇಕು. ಸೊಳ್ಳೆ ಉತ್ಪತ್ತಿಯಾಗದಂತೆ, ಹರಡದಂತೆ ಜಾಗ್ರತೆ ವಹಿಸಬೇಕು. ಮಲಗುವಾಗ ಸೊಳ್ಳೆ ಪರದೆ ಉಪಯೋಗಿಸಬೇಕೆಂದು ಡಾ| ನವೀನ್ ಕುಮಾರ್ ಮನವಿ ಮಾಡಿದ್ದಾರೆ.