ಮುಂಬಯಿ: ಬಾಲಿವುಡ್ ನಟ, ಮಿಸ್ಟರ್ ಫರ್ಪೆಕ್ಟ್ ಆಮಿರ್ ಖಾನ್ ಇತ್ತೀಚೆಗೆ ನಟನೆಯಿಂದ ಒಂದೂವರೆ ವರ್ಷ ದೂರ ಉಳಿದು, ಕುಟುಂಬದೊಂದಿಗೆ ಕಾಲ ಕಳೆಯುತ್ತೇನೆ ಎಂದು ಹೇಳಿದ್ದರು. ಸಂದರ್ಶನವೊಂದರಲ್ಲಿ ಆಮಿರ್ ತಮ್ಮ ಅಪ್ಪನ ಕಷ್ಟದ ದಿನಗಳನ್ನು ಸ್ಮರಿಸಿದ್ದಾರೆ.
‘ಹ್ಯೂಮನ್ಸ್ ಆಫ್ ಬಾಂಬೆʼ ಜೊತೆ ಮಾತಾನಾಡಿರುವ ಅವರು, ತಂದೆ ತಾಹಿರ್ ಹುಸೇನ್ (ನಿರ್ಮಾಪಕ) ಅವರ ಕಷ್ಟದ ದಿನಗಳ ಬಗ್ಗೆ ಮಾತಾನಾಡಿದ್ದಾರೆ.
ಇದನ್ನೂ ಓದಿ: ಗುರುಪುರ: ಟಿಪ್ಪರ್-ಲಾರಿ ಢಿಕ್ಕಿ; ಟಿಪ್ಪರ್ ಚಾಲಕ ಮೃತ್ಯು, ಲಾರಿ ಚಾಲಕ ಗಂಭೀರ
“ಆ ದಿನಗಳಲ್ಲಿ ನಮಗೆ ತುಂಬಾ ಕಷ್ಟ ಕೊಡುತ್ತಿದ್ದದ್ದು ಅಪ್ಪನ ಸಂಕಷ್ಟ. ಅವರೊಬ್ಬ ಸಾಮಾನ್ಯ ವ್ಯಕ್ತಿ. ಬಹುಶಃ ಅವರಿಗೆ ಹೆಚ್ಚು ಸಾಲ ಮಾಡಬಾರದೆನ್ನುವ ಪ್ರಜ್ಞೆಯೂ ಇರುತ್ತಿರಲಿಲ್ಲ. ಅವರಿಗೆ ಸಾಲದವರ ಕರೆ ಬರುತ್ತಿತ್ತು. ಆಗ ಅವರು ನನ್ನ ಬಳಿ ಹಣವಿಲ್ಲ ಏನು ಮಾಡುವುದು. ನನ್ನ ಸಿನಿಮಾಗಳು ಸರಿಯಾಗಿ ಓಡುತ್ತಿಲ್ಲ. ನಾನು ನಟ- ನಟಿಯರಿಗೆ ಹೇಳಿದ್ದೇನೆ ಡೇಟ್ ಕೊಡಿಯೆಂದು ಎಂದು ಸಾಲದವರ ಬಳಿ ಜಗಳ ಮಾಡುತ್ತಿದ್ದರು” ಎಂದಿದ್ದಾರೆ.
ಕೆಲವೊಂದು ಸಲಿ ತಂದೆಯ ಸಿನಿಮಾಗಳು ಹಿಟ್ ಆದರೂ, ಅವರ ಬಳಿ ಹಣವೇ ಉಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಆಮಿರ್ ʼಲಾಲ್ ಸಿಂಗ್ ಚಡ್ಡಾʼದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಕಾಜಲ್ ಅವರ ʼಸಲಾಂ ವೆಂಕಿ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.