ಮೈಸೂರು: ಅರಣ್ಯ ಇಲಾಖೆ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆ, ಹಿರಿಯ ಅಧಿಕಾರಿಗಳ ಮಾರ್ಗದರ್ಶನವಿಲ್ಲದೆ ರಾತ್ರಿವೇಳೆ ಕಾರ್ಯಾಚರಣೆ ನಡೆಸಿದ ಪರಿ
ಣಾಮ “ಹಿನ್ನೀರಿನ ಹೆಣ್ಣುಲಿ’ ಎಂದೇ ಜನಜನಿತವಾಗಿದ್ದ ಸುಮಾರು 9 ವರ್ಷ ವಯಸ್ಸಿನ ಹುಲಿ ಸಾವನ್ನಪ್ಪಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಗೊತ್ತು ಗುರಿಯಿಲ್ಲದೆ ಹುಲಿ ಹಿಡಿವ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸತ್ತ ನಂತರವೂ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದಕ್ಕೆ ಸಾರ್ವಜನಿಕರು, ವನ್ಯಜೀವಿ ಪ್ರಿಯರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
Advertisement
ನಡೆದದ್ದಿಷ್ಟು: ಸೋಮವಾರ ಮಧ್ಯಾಹ್ನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನ ಗ್ರಾಮ, ಎಚ್.ಡಿ.ಕೋಟೆ ತಾಲೂಕಿನ ಗುಂಡತ್ತೂರು ಗ್ರಾಮದ ಶಿವನಂಜೇಗೌಡ ಅವರ ಬಾಳೆ ತೋಟದಲ್ಲಿ ಕಟ್ಟಲಾಗಿದ್ದ ಹಸುವನ್ನು ಹುಲಿ ಕೊಂದಿದ್ದನ್ನು ಶಿವನಂಜೇಗೌಡರ ಹುಡುಗ ನೋಡಿದ್ದಾನೆ. ಹುಲಿ ಗುರ್ ಎಂದ ಕೂಡಲೇ ಓಡಿಬಂದ ಹುಡುಗ ಮನೆಗೆ ವಿಷಯ ತಿಳಿಸಿದ್ದಾನೆ. ಮಧ್ಯಾಹ್ನ 1.30ರ ಸುಮಾರಿಗೆ ಸ್ಥಳೀಯ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ವಿಷಯ ತಿಳಿಸಿದ ನಂತರ ಸಂಜೆ 5ರ ಸುಮಾರಿಗೆ ಡಿ.ಬಿ.ಕುಪ್ಪೆ ವಲಯ ಅರಣ್ಯಾಧಿ ಕಾರಿ ವಿನಯ್ ನೇತೃತ್ವದಲ್ಲಿ ಗ್ರಾಮಕ್ಕೆ ತೆರಳಿದ ಸುಮಾರು 30 ಜನ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಶುರು ಮಾಡಿದೆ.
Related Articles
Advertisement
ಪ್ರತಿ ಚುಚ್ಚುಮದ್ದು ನೀಡದ್ದೇ ಸಾವಿಗೆ ಕಾರಣಪ್ರತ್ಯಕ್ಷದರ್ಶಿಗಳ ಪ್ರಕಾರ ಅರಣ್ಯ ಇಲಾಖೆ ಅಧಿಕಾರಿಗಳು ಅರವಳಿಕೆ ತಜ್ಞರನ್ನು ಕರೆ ತರದೆ, ಕತ್ತಲಲ್ಲಿ ಹುಲಿ ಹಿಡಿಯುವ ಕಾರ್ಯಾಚರಣೆ ನಡೆಸಿದ್ದೇ ತಪ್ಪು. ಸುಮಾರು 4 ಬಾರಿ ಅರವಳಿಕೆ ಚುಚ್ಚುಮದ್ದು ಕೊಟ್ಟ ನಂತರ ಕುಸಿದು ಬಿದ್ದ ಹುಲಿಯ ಕೈ-ಕಾಲುಗಳನ್ನು ಹಗ್ಗದಲ್ಲಿ ಬಿಗಿದು, ಬಾಕ್ಸ್ ಮಾದರಿಯ ಕೇಜ್‌ನಲ್ಲಿ ತುಂಬಿದರು. ಸುಮಾರು ಮೂರ್‍ನಾಲ್ಕು ಗಂಟೆಗಳ ಕಾಲ, ಅರಿವಳಿಕೆ ಮಂಪರಿನಲ್ಲಿದ್ದ ಹುಲಿಗೆ ನೀರು ಸುರಿಯುವುದಾಗಲಿ, ಅರಿವಳಿಕೆ ಔಷಧದ ಪರಿಣಾಮ ತಗ್ಗಿಸಲು ಪ್ರತಿಯಾಗಿ ನೀಡುವ ಚುಚ್ಚುಮದ್ದನ್ನು ನೀಡುವ ಯಾವ ಕೆಲಸವನ್ನೂ ಅಧಿಕಾರಿಗಳು ವೇಗವಾಗಿ ಮಾಡಲಿಲ್ಲ. ಇದರಿಂದಾಗಿ ಹುಲಿ ಸಾವನ್ನಪ್ಪಿದೆ. ಆದರೆ, ಈ ವಿಷಯ ಬಾಯ್ಬಿಡದ ಅರಣ್ಯ ಇಲಾಖೆ ಅಧಿಕಾರಿಗಳು, ಬಳ್ಳೆ ಅರಣ್ಯ ತನಿಖಾ ಠಾಣೆ ಬಳಿಗೆ ಹುಲಿಯನ್ನು ತಂದು ಚಿಕಿತ್ಸೆ ನೀಡುವ ಹೆಸರಲ್ಲಿ ಜನರನ್ನು ದೂರ ಇರಿಸಿದರು ಎಂದು ದೂರುತ್ತಾರೆ. 20 ವರ್ಷದ ಹೆಣ್ಣಾನೆ ಕೆಸರಿಂದ ಬಚಾವ್
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಮೇವನ್ನರಸಿ ಹೊರಬಂದಿದ್ದ ಆರು ಕಾಡಾನೆಗಳ ಹಿಂಡಿನಲ್ಲಿ ಕೆರೆಯ ಹೂಳಿನಲ್ಲಿ ಸಿಲುಕಿ ಮೇಲೇಳಲಾರದೆ ನಿತ್ರಾಣಗೊಂಡಿದ್ದ ಹೆಣ್ಣಾನೆಯೊಂದನ್ನು 6 ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಕಾಡಿಗೆ ಸೇರಿಸಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಬಳಿಯ ಕಚುವಿನಹಳ್ಳಿ ಹೊಸಕೆರೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಘಟನೆ ಜರುಗಿದ್ದು, ಗ್ರಾಮಸ್ಥರ ಸಹಕಾರದಿಂದ ಕಾಡಾನೆಯನ್ನು ಸಂರಕ್ಷಿಸಿ ಸುರಕ್ಷಿತವಾಗಿ ಕಾಡಿಗಟ್ಟಿದರೆ, ಸಂಗಾತಿ ಮತ್ತೂಂದು ಹೆಣ್ಣಾನೆ ಮಾತ್ರ ಕಾರ್ಯಾಚರಣೆಯನ್ನು ವೀಕ್ಷಿಸುತ್ತಾ, ಘೀಳಿಡುತ್ತಾ ಪಕ್ಕದ ತೋಟದೊಳಕ್ಕೆ ಸೇರಿಕೊಂಡಿತ್ತು. ಆರು ಆನೆಗಳ ಹಿಂಡು: ಸೋಮವಾರ ರಾತ್ರಿ ಮೇವನ್ನರಸಿ ಉದ್ಯಾನದಿಂದ ಹೊರ ಬಂದಿದ್ದ 6 ಆನೆಗಳ ಹಿಂಡು, ಅಲ್ಲಲ್ಲಿ ರೈತರ ಬೆಳೆಗಳನ್ನು ತಿಂದು ಕಚುವಿನಹಳ್ಳಿ ಕೆರೆಯಲ್ಲಿ ನೀರು ಕುಡಿಯಲು ಆಗಮಿಸಿದ್ದವು. ಈ ವೇಳೆ ಸುಮಾರು 20 ವರ್ಷದ ಹೆಣ್ಣಾನೆ ಕೆಸರಿನ ಗುಂಡಿಯಲ್ಲಿ ಸಿಲುಕಿಕೊಂಡಿತು. ಮೇಲೆ ಬರಲು ಸಾಕಷ್ಟು ಕಸರತ್ತು ನಡೆಸಿ ವಿಫಲವಾಗಿದೆ. ಜೊತೆಗಿದ್ದ ತನ್ನ ಸಂಗಾತಿಯೂ ಸಹ ಮೇಲೆತ್ತಲು ಸಹಕರಿಸಿದರೂ ಕೆಸರು ತುಂಬಿದ್ದ ಭಾರೀ ಹೊಂಡದಿಂದ ಮೇಲೇಳಲಾಗದೆ ಒದ್ದಾಡಿ ನಿತ್ರಾಣಗೊಂಡಿತ್ತು. ಕಾರ್ಯಾಚರಣೆ: ಆನೆ ಘೀಳಿಡುತ್ತಾ ತನ್ನ ಇರುವಿಕೆಯನ್ನು ಇತರರಿಗೆ ತಿಳಿಸಲು ಪ್ರಯತ್ನಿಸುತ್ತಿದ್ದ ವೇಳೆ ಬೆಳಗ್ಗೆ ಕೆರೆಯ ಸಮೀಪದಲ್ಲೇ ಅಟ್ಟಣೆಯಲ್ಲಿದ್ದ ರೈತನಿಗೆ ಹೂಳಿನಲ್ಲಿ ಸಿಲುಕಿರುವುದು ಗೊತ್ತಾಗಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ವನ್ಯಜೀವಿ ವಿಭಾಗದ ಎಸಿಎಫ್ಗಳಾದ ಪ್ರಸನ್ನಕುಮಾರ್, ಸೋಮಪ್ಪ, ಆರ್‌ಎಫ್ಒಗಳಾದ ಸುಬ್ರಹ್ಮಣ್ಯ, ಕಿರಣ್‌ಕುಮಾರ್ ನೇತೃತ್ವದ ತಂಡ ಕೆಸರಿನಲ್ಲಿ ಹೂತು ಹೋಗಿದ್ದ ಸ್ಥಳಕ್ಕೆ ಪಕ್ಕದ ಕಚುವಿನಹಳ್ಳಿಯ ಸಮೀಪದ ಮಹದೇವ್‌ರ ಪಂಪ್‌ಸೆಟ್‌ನಿಂದ ನೀರು ಹರಿಸಿ ಹೊಂಡದ ಮಣ್ಣನ್ನು ಸಡಿಲಗೊಳಿಸಿದರು. ಸಾಕಾನೆ ಗಣೇಶನ ಸಹಾಯದಿಂದ ಆನೆಗೆ ಹಗ್ಗ ಕಟ್ಟಿ ಮೇಲಕ್ಕೆ ಎಳೆದು ಹೊರ ತರಲಾಯಿತು. ಸದ್ಯ ಬದುಕಿದೆಯಾ ಬಡಜೀವವೇ ಎಂಬ ಸಂತಸದಿಂದ ಕಾಡಿನ ಕಡೆ ಮುಖಮಾಡಿತು. ಗೆಳತಿಯ ಸಂತಸ: ಈ ನಡುವೆ ತನ್ನ ಗೆಳತಿ ಆನೆ ಹೂಳಿನಲ್ಲಿ ಸಿಕ್ಕಿಕೊಂಡಿರುವುದನ್ನು ಕಂಡು ಮರುಗಿದ ಹೆಣ್ಣು ಕಾಡಾನೆ ಪಕ್ಕದ ಜಮೀನಿನಲ್ಲೇ ನಿಂತು ಕಾರ್ಯಾಚರಣೆ ವೀಕ್ಷಿಸುತ್ತಿತ್ತು. ಸಂಗಾತಿ ಕೆಸರಿನಿಂದ ಮೇಲೆದ್ದ ವೇಳೆಯಂತೂ ಘೀಳಿಡುತ್ತಾ ಅತ್ತಿಂದಿತ್ತ ಸಂತಸದಿಂದ ಓಡಾಡುತ್ತಿತ್ತು, ಈ ವೇಳೆಯಂತೂ ಜನರು ಹೋ ಎಂದು ಕಿರುಚುತ್ತಿದ್ದರು. ಕಾಡಿನತ್ತ ಸಂಗಾತಿ ತೆರಳುತ್ತಿದ್ದಂತೆ ಸಂತಸದಿಂದ ಪಕ್ಕದ ಯಲ್ಲಪ್ಪರಿಗೆ ಸೇರಿದ ತೋಟಕ್ಕೆ ಸೇರಿಕೊಂಡು ಪಂಪ್‌ಸೆಟ್ ಹಾಗೂ ಪೈಪ್‌ಗ್ಳನ್ನು ಧ್ವಂಸ ಮಾಡಿತು. ಸಂಜೆ ವೇಳೆಗೆ ಕಾರ್ಯಾಚರಣೆ ನಡೆಸಿ ಕಾಡಿಗಟ್ಟಿದರು. ಜನಸಾಗರ: ಆನೆ ಕೆರೆಯಲ್ಲಿ ಸಿಲುಕಿರುವ ವಿಷಯ ಹರಡುತ್ತಿದ್ದಂತೆ ಸುತ್ತಮುತ್ತಲ ಹಳ್ಳಿಗರು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿ ಸಿದರು. ಕಾರ್ಯಾಚರಣೆ ವೇಳೆಯಂತೂ ಹೋ ಆನೆ ಮೇಲೆದ್ದಿದೆ, ಹೋಗುತ್ತದೆ ಎಂದು ಕೂಗುತ್ತಾ ಓಡಾಡತೊಡಗಿದ್ದರಿಂದ ಜನರನ್ನು ನಿಯಂತ್ರಸಲು ಪೊಲೀಸರು ಹೈರಾಣಾಗಿದ್ದರು. ವೃತ್ತ ನಿರೀಕ್ಷಕ ಧರ್ಮೇಂದ್ರ ನೇತೃತ್ವದಲ್ಲಿ ಪೊಲೀಸರು ಜನರನ್ನು ಆನೆ ಹತ್ತಿರ ಬಾರದಂತೆ ನಿಯಂತ್ರಿಸಿದರಲ್ಲದೆ, ಆನೆ ಮೇಲೆತ್ತಲು ಸಹಕರಿಸಿದರು.